More

    ಈ ವಾಂತಿಗೂ ಕೋಟ್ಯಂತರ ರೂಪಾಯಿ ಬೆಲೆ!; ಮುರ್ಡೇಶ್ವರದಲ್ಲಿ ಸಿಕ್ಕಿತು ಅಂಬರ್ ಗ್ರೀಸ್

    ಕಾರವಾರ: ‘ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ’ ಎಂಬ ಗಾದೆ ಇದೆ. ಸಾಗರದಾಳದ ದೈತ್ಯ ತಿಮಿಂಗಿಲವೂ ಹಾಗೆ. ಅದು ತಿಂದು ಉಗಿದರೂ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ.!!
    ಹೌದು, ಅಂಥ ಅಪರೂಪದ ವಸ್ತುವೊಂದು ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದ ಮೀನುಗಾರರೊಬ್ಬರಿಗೆ ಸಿಕ್ಕಿದೆ. ಆತ ಅದನ್ನು ಪ್ರಾಮಾಣಿಕವಾಗಿ ಅರಣ್ಯ ಇಲಾಖೆಗೆ ಒಪ್ಪಿಸುವ ಮೂಲಕ ಜವಾಬ್ದಾರಿ ಮೆರೆದಿದ್ದಾನೆ. ಹಾಗಾದರೆ ಆ ವಸ್ತು ಏನಂತೀರಾ..? ತಿಮಿಂಗಿಲದ ವಾಂತಿ!!
    ಅಂಬರ್ ಗ್ರೀಸ್ ಎಂದು ಕರೆಯುವ ಈ ವಸ್ತುವಿಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಇದೆ. ಮುರ್ಡೇಶ್ವರದ ಜನಾರ್ಧನ ಹರಿಕಾಂತ ಎಂಬುವವರಿಗೆ ಸುಮಾರು 250 ಗ್ರಾಂ ತೂಕದ ಅಂಬರ್ ಗ್ರೀಸ್ ಸಿಕ್ಕಿದ್ದು, ಅದನ್ನು ಸ್ಥಳೀಯ ಅರಣ್ಯಾಧಿಕಾರಿ ರಾಘವೇಂದ್ರ ಅವರಿಗೆ ಹಸ್ತಾಂತರಿಸಿದ್ದಾರೆ.

    ಏನಿದರ ವಿಶೇಷ..?: ಅರಬ್ಬಿ ಸಮುದ್ರ ಹಾಗೂ ಹಿಂದು ಮಹಾಸಾಗರದಲ್ಲಿ ಕಂಡುಬರುವ ಸ್ಪರ್ಮ್ ವೇಲ್ ಅಥವಾ ಕ್ಯಾಚಲೋಟ್ ಹಲ್ಲಿನ ತಿಮಿಂಗಿಲಗಳು. ಅವು ಕಪ್ಪೆ ಬೊಂಡಾಸ್, ಮಣಕಿ ಎಂದು ಕರೆಯುವ ಮೀನುಗಳನ್ನು ತಿಂದು ಬದುಕುತ್ತವೆ. ಅವು ತಿನ್ನುವ ಮೀನುಗಳಿಗೆ ಅತಿ ಗಟ್ಟಿಯಾದ ಮೂಳೆಗಳಿರುತ್ತವೆ. ಅವುಗಳನ್ನು ಕರಗಿಸಲು ಕಷ್ಟವಾದ್ದರಿಂದ ತಿಮಿಂಗಿಲ ಅದನ್ನು ಜಗಿದು, ಜಗಿದು ಉಗಿಯುತ್ತದೆ. ಉಗಿದ ತಕ್ಷಣ ವಾಂತಿಯು ವಿಪರೀತ ವಾಸನೆ ಬರುತ್ತದೆ. ಕೆಲ ದಿನಗಳ ನಂತರ ಅದು ಘಟ್ಟಿಯಾಗಿ ಸುವಾಸನೆ ಬೀರಲಾರಂಭಿಸುತ್ತದೆ. ಸುಗಂಧ ದ್ರವ್ಯಗಳನ್ನು ತಯಾರಿಸಲು ಪಾಶ್ಚಿಮಾತ್ಯ ದೇಶಗಳಲ್ಲಿ ಈ ಅಂಬರ್ ಗ್ರೀಸ್ ಬಳಸಲಾಗುತ್ತದೆ. ಒಂದು ಕೆ.ಜಿ. ಅಂಬರ್ ಗ್ರೀಸ್​ಗೆ ಸುಮಾರು 1 ಕೋಟಿ ರೂಪಾಯಿ ಬೆಲೆ ಇದೆ. ಇದು ಅಕಸ್ಮಾತ್ ಸಿಕ್ಕಿದವರು ವಿದೇಶಗಳಲ್ಲಿ ಇದ್ದಕ್ಕಿದ್ದಂತೆ ಕೋಟ್ಯಧೀಶರಾದ ಕಥೆಗಳು ಜಾಲತಾಣಗಳಲ್ಲಿ ಸಿಗುತ್ತವೆ. ಈ ಭಾಗದಲ್ಲಿ ಅಂಬರ್ ಗ್ರೀಸ್ ಸಿಗುವುದು ಭಾರಿ ಅಪರೂಪ. ಭಾರತದಲ್ಲಿ ಸ್ಪರ್ಮ್ ವೇಲ್ ಒಂದು ಸಂರಕ್ಷಿತ ಜಲಚರ. ಹೀಗಾಗಿ ಇವುಗಳಿಂದ ದೊರೆತ ವಸ್ತುವನ್ನೂ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂಬುದು ಇಲಾಖೆಯ ಅಭಿಪ್ರಾಯ.

    ಈ ವಾಂತಿಗೂ ಕೋಟ್ಯಂತರ ರೂಪಾಯಿ ಬೆಲೆ!; ಮುರ್ಡೇಶ್ವರದಲ್ಲಿ ಸಿಕ್ಕಿತು ಅಂಬರ್ ಗ್ರೀಸ್

    ಅಂಬರ್ ಗ್ರೀಸ್ ಎಂಬುದು ಅಪರೂಪದ ವಸ್ತು. ಈ ಭಾಗದಲ್ಲಿ ಇತ್ತೀಚಿನ 10 ವರ್ಷಗಳಲ್ಲಿ ಇದು ಸಿಕ್ಕ ಉದಾಹರಣೆ ಇಲ್ಲವೇ ಇಲ್ಲ. ಸ್ಪರ್ಮ್ ತಿಮಿಂಗಿಲಗಳು ಉಗಿಯುವ ವಸ್ತುವಿಗೆ ಮಾತ್ರ ಇಷ್ಟು ಬೆಲೆ ಇದೆ. ಇದನ್ನು ಅರಣ್ಯ ಇಲಾಖೆ ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ನೀಡಿದಲ್ಲಿ ನಾವು ಅದನ್ನು ಸಂರಕ್ಷಿಸಿ, ಮ್ಯೂಸಿಯಮ್​ನಲ್ಲಿ ಇಡುತ್ತೇವೆ.
    | ಡಾ.ಶಿವಕುಮಾರ ಹರಗಿ ಸಾಗರ ಜೀವಶಾಸ್ತ್ರಜ್ಞ, ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾರವಾರ

    ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು..

    ಮರದ ಬುಡದಲ್ಲಿ ನಿಂತವರಿಗೆ ಮರಣ: ಸಿಡಿದು ಬಡಿಲು ಮೂವರು ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts