More

    ನ.6ಕ್ಕೆ ಬಿಡುಗಡೆಯಾಗಲಿದೆ ‘ವಿಜಯಾನಂದ’ ಚಿತ್ರದ ಮೊದಲ ಹಾಡು …

    ಬೆಂಗಳೂರು: ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್​ ಆದ ‘ವಿಜಯಾನಂದ’ ಚಿತ್ರದ ಟೀಸರ್​ ಈಗಾಗಲೇ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟೀಸರ್​ಗಳು ಅತೀ ಹೆಚ್ಚು ವೀಕ್ಷಣೆ ಪಡೆಯುವುದರ ಜತೆಗೆ, ಸಾವಿರಾರು ಲೈಕ್ಸ್​ಗಳನ್ನು ದಾಖಲಿಸಿ ಪ್ರೇಕ್ಷಕರ ಪ್ರಶಂಸೆಗೆ ಭಾಜನವಾಗಿವೆ.

    ಇದನ್ನೂ ಓದಿ: ಹೊಸಬರ ‘ಹೊಸ ದಿನಚರಿ’ … ಡಿ.9ರಂದು ಚಿತ್ರ ಬಿಡುಗಡೆ

    ‘ವಿಜಯಾನಂದ’ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಅಂತಿಮ ಹಂತ ತಲುಪಿದ್ದು, ಹಾಡುಗಳು ಬಿಡುಗಡೆಯಾವುದಕ್ಕೆ ಸಜ್ಜಾಗಿದೆ. ಮೊದಲ ಹಂತವಾಗಿ ಇದೇ ಭಾನುವಾರ (ನ.6) ಒರಾಯನ್​ ಮಾಲ್​ನ ಲೇಕ್ ವ್ಯೂನಲ್ಲಿ ಸಂಜೆ ಆರಕ್ಕೆ, ಚಿತ್ರದ ಒಂದು ರೊಮ್ಯಾಂಟಿಕ್​ ಹಾಡು ಬಿಡುಗಡೆಯಾಗಲಿದೆ.

    ಜನಪ್ರಿಯ ಸಂಗೀತ ನಿರ್ದೇಶಕ ಗೋಪಿಸುಂದರ್​ ಸಂಯೋಜಿಸಿರುವ ಈ ಹಾಡನ್ನು ಧನಂಜಯ್​ ರಂಜನ್​ ರಚಿಸಿದ್ದು, ವಿಜಯಪ್ರಕಾಶ್​ ಮತ್ತು ಕೀರ್ತನಾ ವೈದ್ಯನಾಥನ್​ ಹಾಡಿದ್ದಾರೆ. ‘ಹಾಗೆ ಆದ ಆಲಿಂಗನ …’ ಎಂದು ಸಾಗುವ ಈ ಹಾಡನ್ನು ನಿಹಾಲ್​ ಮತ್ತು ಸಿರಿ ಪ್ರಹ್ಲಾದ್​ ಮೇಲೆ ಚಿತ್ರೀಕರಿಸಲಾಗಿದೆ.

    ‘ಹಾಗೆ ಆದ ಆಲಿಂಗನ …’ ಹಾಡು ಬಿಡುಗಡೆಯ ಜತೆಗೆ ಗೋಪಿಸುಂದರ್​ ಅವರ ಸಂಗೀತ ಕಾರ್ಯಕ್ರಮ ಅಂದು ಸಂಜೆ ನಡೆಯಲಿದೆ. ಈ ಚಿತ್ರದಲ್ಲಿ ಸ್ಯಾಂಡಲ್​ವುಡ್​ನ ಹಲವು ಜನಪ್ರಿಯ ಸೆಲೆಬ್ರಿಟಿಗಳು ಭಾಗವಹಿಸುವ ಸಾಧ್ಯತೆ ಇದೆ.

    ಇದನ್ನೂ ಓದಿ: ಅಭಿಮಾನಿಗಳ ಕುರಿತು ಸಾಕ್ಷ್ಯಚಿತ್ರ ಮಾಡುತ್ತಾರಂತೆ ಶಾರೂಖ್​ ಖಾನ್​!

    ವಿಆರ್​ಎಲ್​ ಪ್ರೊಡಕ್ಷನ್ಸ್​ನಡಿ ಡಾ. ಆನಂದ ಸಂಕೇಶ್ವರ ನಿರ್ಮಿಸುತ್ತಿರುವ “ವಿಜಯಾನಂದ’ ಚಿತ್ರದಲ್ಲಿ ನಿಹಾಲ್ ರಜಪೂತ್​​, ಅನಂತ್​ ನಾಗ್​, ರವಿಚಂದ್ರನ್​, ವಿನಯಾ ಪ್ರಸಾದ್​, ಸಿರಿ ಪ್ರಹ್ಲಾದ್​ ಮುಂತಾದವರು ನಟಿಸಿದ್ದಾರೆ. ರಿಷಿಕಾ ಶರ್ಮ ಚಿತ್ರಕಥೆ ರಚಿಸುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ.

    ಬನಾರಸ್​ ಚಿತ್ರ ವಿಮರ್ಶೆ: ದೈವನಗರಿಯಲ್ಲೊಂದು ಮೈಮರೆಸುವಂತಹ ಕಥೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts