More

    ‘ರಾಬರ್ಟ್​’ ಸುಂದರಿಯ ಫಸ್ಟ್​ ಲುಕ್​ ಕಣ್ತುಂಬಿಕೊಳ್ಳಲು ನಿಗದಿಯಾಯ್ತು ದಿನಾಂಕ

    ಬೆಂಗಳೂರು: ರಾಬರ್ಟ್ ಸಿನಿಮಾ ಎಂದ ತಕ್ಷಣ ಮೊದಲಿಗೆ ನೆನಪಾಗುವುದು ಚಾಲೆಂಜಿಂಗ್​ ಸ್ಟಾರ್ ದರ್ಶನ್. ಸಿನಿಮಾ ಶುರುವಾಗುವುದಕ್ಕೂ ಮುನ್ನ ಮತ್ತು ಶೂಟಿಂಗ್​ ಬಳಿಕ ಚಿತ್ರಕ್ಕೆ ಸಂಬಂಧಿಸಿದ ಅವರ ಹತ್ತಾರು ಫೋಟೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದವು. ಆದರೆ, ನಾಯಕಿಯ ಒಂದೇ ಒಂದು ಲುಕ್​ ಹೇಗಿರಲಿದೆ ಎಂಬುದನ್ನು ಚಿತ್ರತಂಡ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಇದೀಗ ಆ ಕ್ಷಣವೂ ಬಂದಿದೆ.

    ಇದನ್ನೂ ಓದಿ: ಕೆಬಿಸಿ ತಂಡದ ಸದಸ್ಯರಿಗೆ ಕರೊನಾ; ಆತಂಕದಲ್ಲಿ ಬಿಗ್​ ಬಿ ಅಮಿತಾಬ್​

    ಅಂದರೆ, ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್​ ಅವರ ಫಸ್ಟ್ ಲುಕ್​ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದ್ದು, ಯಾವಾಗ ರಿಲೀಸ್​ ಎಂಬುದನ್ನೂ ಹೇಳಿಕೊಂಡಿದೆ. ಸೆ. 5 ರ ಶನಿವಾರ ಆಶಾ ಭಟ್​ ಅವರ ಹುಟ್ಟುಹಬ್ಬ. ಆ ನಿಮಿತ್ತ ಬೆಳಗ್ಗೆ 10ಗಂಟೆಗೆ ಚಿತ್ರದಲ್ಲಿನ ಅವರ ಲುಕ್​ ಹೇಗಿರಲಿದೆ ಎಂಬುದನ್ನು ಚಿತ್ರತಂಡ ಹೊರಗೆಡವಲಿದೆ.

    ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏ. 9ರಂದೇ ರಾಬರ್ಟ್ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸ್ಥಗಿತಗೊಂಡಿದ್ದರಿಂದ ರಾಬರ್ಟ್ ದರ್ಶನಕ್ಕೆ ಕಾಲ ಕೂಡಿಬರಲಿಲ್ಲ. ಸದ್ಯ ಡಿಸೆಂಬರ್​ನಲ್ಲಿ ಬಿಡುಗಡೆ ಎಂಬ ವಿಚಾರ ಚಾಲ್ತಿಯಲ್ಲಿದೆಯಾದರೂ, ಚಿತ್ರತಂಡ ಮಾತ್ರ ಅಧಿಕೃತ ಮಾಡಿಲ್ಲ.

    ಇದನ್ನೂ ಓದಿ: ಸುಮ್ಮನೆ ನನ್ನನ್ನ ಏಕೆ ಈ ವಿಷ್ಯಕ್ಕೆ ಎಳೆಯುತ್ತೀರಾ? ಸಂಜನಾ ಪ್ರಶ್ನೆ

    ತರುಣ್​ ಸುಧೀರ್​ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ.

    ಸಿಸಿಬಿ ಕಚೇರಿಯಲ್ಲಿ ರಾಗಿಣಿ ವಿಚಾರಣೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts