More

    ಮಾರಕ ಕೊರೊನಾ ವೈರಸ್​ನ ಮೊದಲ ಪ್ರಕರಣ ಭಾರತೀಯ ಉಪಖಂಡದಲ್ಲಿ ಪತ್ತೆ: ಚೀನಾದಿಂದ ಬಂದ ವಿದ್ಯಾರ್ಥಿಯಲ್ಲಿ ಧೃಡಪಟ್ಟ ರೋಗ

    ಕಠ್ಮಂಡು: ಚೀನಾದಲ್ಲಿ ವಿದ್ಯಾಭ್ಯಾಸ ಮಾಡಿ ವಾಪಸಾಗಿರುವ ಭಾರತದ ಉಪಖಂಡ ನೇಪಾಳ ಮೂಲದ ವಿದ್ಯಾರ್ಥಿಯೊಬ್ಬನಲ್ಲಿ ಮಾರಕ ಕೊರೊನಾ ವೈರಸ್​ ಪತ್ತೆಯಾಗಿದೆ.

    ನೇಪಾಳದ ಆರೋಗ್ಯ ಮತ್ತು ಜನಸಂಖ್ಯೆ ಸಚಿವಾಲಯದ ಇದನ್ನು ಖಚಿತಪಡಿಸಿದ್ದು, ಇದು ಭಾರತದ ಉಪಖಂಡದಲ್ಲಿ ಪತ್ತೆಯಾದ ಮಾರಕ ವೈರಸ್​ನ ಮೊದಲ ಪ್ರಕರಣ ಎಂದು ತಿಳಿಸಿದೆ.

    ಝೋನೋಟಿಕ್ ಮತ್ತು ಇತರ ಸಾಂಕ್ರಾಮಿಕ ರೋಗ ನಿಯಂತ್ರಣ ವಿಭಾಗದ ಮುಖ್ಯಸ್ಥ ಡಾ. ಹೇಮಂತ್​ ಚಂದ್ರ ಓಜಾ, ಚೀನಾದ ವೂಹಾದಲ್ಲಿರುವ ನೇಪಾಳ ಮೂಲದ ವಿದ್ಯಾರ್ಥಿಯನ್ನು ತಪಾಸಣೆಗೆ ಒಳಪಡಿಸಿದ್ದು ವೈರಸ್​ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

    ಹಾಂಗ್​ಕಾಂಗ್​ನ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಪಾಸಣೆಗೆ ಒಳಡಿಸಲಾಗಿತ್ತು. ಇದರ ವರದಿ ಗರುವಾರ ಸಂಜೆ ಬಂದಿದ್ದು, ಕೊರೊನಾ ವೈರಸ್​ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಮಾರಕ ವೈರಸ್​ ಪೀಡಿತ ವ್ಯಕ್ತಿ ಚೀನಾದಿಂದ ಜನವರಿ 3ರಂದು ನೇಪಾಳಕ್ಕೆ ಬಂದಿದ್ದು, ಉಸಿರಾಟದ ತೊಂದರೆ ಎಂದು ಜನವರಿ 13ಕ್ಕೆ ಸ್ಥಳಿಯ ಆಸ್ಪತ್ರೆಗೆ ತೆರಳಿದ್ದ. ಆದರೆ ಉಸಿರಾಟದ ಸಮಸ್ಯೆ ಬಗೆಹರಿದೊಡನೆ ಸ್ಥಳಿಯ ಆಸ್ಪತ್ರೆಯಿಂದ ಮನೆಗೆ ತೆರಳಿದ್ದ. ನಂತರ ಆತನನ್ನು ಹಾಂಗ್​ಕಾಂಗ್​ನಲ್ಲಿ ಪರಿಕ್ಷೆಗೆ ಒಳಪಡಿಸಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts