More

    ಶತ್ರುಗಳ ಎದೆಯಲ್ಲಿ ಶುರುವಾಯ್ತು ನಡುಕ; ಫ್ರಾನ್ಸ್​ನಿಂದ ಟೇಕ್​ಆಫ್​ ಆಯ್ತು ರಫೇಲ್​…!

    ನವದೆಹಲಿ: ವರ್ಷದಿಂದ ದಕ್ಷಿಣ ಫ್ರಾನ್ಸ್​ನ ಬಾರ್ಬಡೋಕ್ಸ್​ನಲ್ಲಿರುವ ಮೇರಿಗ್ನಾಕ್​ ವಾಯುನೆಲೆಯಿಂದ ಐದು ರಫೇಲ್​ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲು ಟೇಕ್​ಆಫ್​ ಆಗಿವೆ. ಬುಧವಾರ ಹರಿಯಾಣದ ಅಂಬಾಲಾ ವಾಯುನೆಲೆಗೆ ಆಗಮಿಸಲಿವೆ.

    ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಫ್ರೆಂಚ್​ ಡಸಾಲ್ಟ್​ ಏವಿಯೇಷನ್​ ಒಟ್ಟು 36 ಯುದ್ಧ ವಿಮಾನಗಳನ್ನು ಪೂರೈಸಲಿದೆ. ಮೊದಲ ಕಂತಿನಲ್ಲಿ ಐದು ಯುದ್ಧವಿಮಾನಗಳನ್ನು ಹಸ್ತಾಂತರಿಸಿದೆ.

    ಇದನ್ನೂ ಓದಿ; ಪ್ರಸಾದಕ್ಕಾಗಿ ಇಟ್ಟಿದ್ದ ಹಣ್ಣನ್ನು ತಿಂದ ಮಕ್ಕಳಿಗೆ ಇದೆಂಥಾ ಗತಿ…! ಮೆಚ್ತಾನಾ ಭಗವಂತ..? 

    ಜತೆಗೆ, ಭಾರತಿಯ ವಾಯು ಸೇನೆಯ 12 ಪೈಲಟ್​ ಹಾಗೂ ಇಂಜಿನಿಯರಿಂಗ್​ ಸಿಬ್ಬಂದಿಗೆ ಪೂರ್ಣ ಪ್ರಮಾಣದ ತರಬೇತಿಯನ್ನು ಫ್ರಾನ್ಸ್​ ಈಗಾಗಲೇ ನೀಡಿದೆ.
    ಆಗಸದಲ್ಲಿಯೇ ಇಂಧನ ಭರ್ತಿ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ಯುದ್ಧ ವಿಮಾನಗಳು ಯುಎಇಯಲ್ಲಿರುವ ಫ್ರಾನ್ಸ್​ನ ವಾಯುನೆಲೆಯಲ್ಲಿ ನಿಲುಗಡೆಯಾಗಲಿವೆ. ಬಳಿಕ ಬುಧವಾರ ಭಾರತಕ್ಕೆ ಆಗಮಿಸಲಿವೆ ಎಂದು ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟು ಹತ್ತು ಯುದ್ಧ ವಿಮಾನಗಳ ಹಸ್ತಾಂತರ ಕಾರ್ಯಕ್ರಮ ಪೂರ್ಣಗೊಂಡಂತಾಗಿದೆ. ಐದು ಯುದ್ಧ ವಿಮಾನಗಳು ತರಬೇತಿ ಉದ್ದೇಶಗಳಿಗಾಗಿ ಫ್ರಾನ್ಸ್​ನಲ್ಲಿಯೇ ಇರಲಿವೆ. 2021ರ ಕೊನೆಗೆ ಎಲ್ಲ 36 ಯುದ್ಧ ವಿಮಾನಗಳನ್ನು ಹಸ್ತಾಂತರಿಸಲಾಗುವುದು ಎಂದು ಡಸಾಲ್ಟ್​ ತಿಳಿಸಿದೆ.

    ಇದನ್ನೂ ಓದಿ; ಅಮೆರಿಕ ಸರ್ಕಾರಕ್ಕೇ 41 ಕೋಟಿ ರೂ. ಮುಂಡಾಯಿಸಿದ ಮುಕುಂದ್​ ಮೋಹನ್​; ಕರೊನಾ ಸಂಕಷ್ಟದಲ್ಲಿ ಖತರ್ನಾಕ್​ ಐಡಿಯಾ…!

    ಫ್ರಾನ್ಸ್​ನಲ್ಲಿರುವ ಭಾರತೀಯ ರಾಯಭಾರಿ ಜಾವೇದ್​ ಅಶ್ರಫ್​ ವಿಮಾನಗಳ ಟೇಕ್​ ಆಫ್​ಗೂ ಮುನ್ನ ಭಾರತೀಯ ಪೈಲಟ್​ಗಳ ಜತೆಗೆ ಮಾತುಕತೆ ನಡೆಸಿದರು.

    ಫ್ರಾನ್ಸ್​ನ ವಾಯುನೆಲೆಯಿಂದ ತೆರಳುತ್ತಿರುವ ರಫೇಲ್​ ಯುದ್ಧ ವಿಮಾನಗಳ ವಿಡಿಯೋ…

    ಶತ್ರುಗಳೇ…. ರಫೇಲ್​ ಬರುತ್ತಿವೆ ಎಚ್ಚರ…!

    ದಕ್ಷಿಣ ಫ್ರಾನ್ಸ್​ನ ಮೇರಿಗ್ನಾಕ್​ ವಾಯುನೆಲೆಯಿಂದ ಮೊದಲ ಕಂತಿನಲ್ಲಿ ಐದು ರಫೇಲ್​ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲು ಟೇಕ್​ ಆಫ್​ ಆಗಿವೆ. 7,000 ಕಿ. ಮೀ. ದೂರದ ಪ್ರಯಾಣದಲ್ಲಿ ಮಧ್ಯ ಯುಎಇಯಲ್ಲಿ ತಂಗಲಿವೆ. ಬುಧವಾರ ಅಂಬಾಲಾ ವಾಯುನೆಲೆಯನ್ನು ತಲುಪಲಿವೆ.

    Posted by Vijayavani on Monday, July 27, 2020

    ಕರೊನಾ ಲಸಿಕೆಯಿಂದ ಡಿಎನ್​ಎ ಬದಲಾವಣೆ; 7 ಲಕ್ಷ ಜನರಿಗೆ ಅಡ್ಡ ಪರಿಣಾಮ; ಇಲ್ಲಿದೆ ಫ್ಯಾಕ್ಟ್​ ಚೆಕ್​….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts