More

    ಯಾರು ಏನೇ ಹೇಳಲಿ… ಹೈಡ್ರಾಕ್ಸಿಕ್ಲೋರೋಕ್ವಿನ್​ಗೆ ಟ್ರಂಪ್​ ಕೊಡ್ತಿದ್ದಾರೆ ಭರ್ಜರಿ ಪ್ರಚಾರ

    ನವದೆಹಲಿ: ಕೊವಿಡ್​-19ಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಬಗ್ಗೆ ಕೆಲವು ಸಂಶೋಧಕರು ಅಪಸ್ವರ ತೆಗೆದಿದ್ದಾರೆ. ಅದರಿಂದ ತುಂಬ ಅಡ್ಡ ಪರಿಣಾಮ ಉಂಟಾಗುತ್ತಿದೆ. ಹೃದಯ ಸಂಬಂಧಿ ರೋಗ ಹೆಚ್ಚುತ್ತಿದೆ. ಸಾವಿನ ಸಂಖ್ಯೆಯೂ ಏರುತ್ತಿದೆ ಎಂಬಿತ್ಯಾದಿ ಅಧ್ಯಯನ ವರದಿಗಳನ್ನೂ ವೈದ್ಯಕೀಯ ಮ್ಯಾಗ್​ಜಿನ್​ಗಳಲ್ಲಿ ಬರೆಯುತ್ತಿದ್ದಾರೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಹೈಡ್ರಾಕ್ಸಿಕ್ಲೋರೊಕ್ವಿನ್​ ಮಾತ್ರೆಗಳ ಬಗ್ಗೆ ಎಚ್ಚರ ಇರಲಿ ಎಂದು ಹೇಳಿದೆ.

    ಇದನ್ನೂ ಓದಿ: ಕೊವಿಡ್​-19 ಸೋಂಕಿನ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇಫ್​ ಅಲ್ವೇ ಅಲ್ಲ…!

    ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಮಾತ್ರ ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಎಚ್​ಸಿಕ್ಯೂ ಬಗ್ಗೆ ತುಂಬ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಕರೊನಾ ಬಾರದಂತೆ ತಡೆಯಲು ನಾನು ಹೈಡ್ರಾಕ್ಸಿಕ್ಲೊರೋಕ್ವಿನ್​ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಒಂದು ವಾರದ ಹಿಂದೆ ಟ್ರಂಪ್​ ತಿಳಿಸಿದ್ದರು. ಇದೀಗ ಮತ್ತೊಂದು ಹೇಳಿಕೆಯನ್ನು ಇದೇ ಎಚ್​ಸಿಕ್ಯೂ ಬಗ್ಗೆ ನೀಡಿದ್ದಾರೆ.
    ನಾನೀಗ ಹೈಡ್ರಾಕ್ಸಿಕ್ಲೊರೊಕ್ವಿನ್​ ಮಾತ್ರೆಗಳ ಎರಡು ವಾರದ ಕೋರ್ಸ್​ ಮುಗಿಸಿದ್ದೇನೆ. ಆರೋಗ್ಯವಾಗಿದ್ದೇನೆ. 15 ದಿನ ಎಚ್​ಸಿಕ್ಯೂ ಸೇವಿಸಿದರೂ ನನಗೇನೂ ಆಗಲಿಲ್ಲ. ತುಂಬ ಚೆನ್ನಾಗಿಯೇ ಇದ್ದೇನೆ ಎಂದು ಭಾನುವಾರದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಮೂಲಕ ನನಗ್ಯಾವ ಅಡ್ಡಪರಿಣಾಮವೂ ಆಗಿಲ್ಲ ಎಂಬುದನ್ನು ತಿಳಿಸಿದ್ದಾರೆ.

    ಅಮೆರಿಕದಲ್ಲಿ ಕರೊನಾ ಪ್ರಮಾಣ ಹೆಚ್ಚಾಗಿದ್ದು ಅಧ್ಯಕ್ಷ ಟ್ರಂಪ್​ ಅವರು ಪ್ರತಿನಿತ್ಯ ಕೊವಿಡ್​-19 ಟೀಂನೊಟ್ಟಿಗೆ ಸಭೆ ನಡೆಸುತ್ತಾರೆ. ವೈಟ್​ಹೌಸ್​ನಲ್ಲೂ ಮೂರ್ನಾಲ್ಕು ಮಂದಿಗೆ ಕರೊನಾ ದೃಢಪಟ್ಟಿದೆ. ಹಾಗಾಗಿ ಮುಂಜಾಗೃತಾ ಕ್ರಮವಾಗಿ ತಾವೂ ಸಹ ಜಿಂಕ್​ ಸಪ್ಲಿಮೆಂಟ್​ ಜತೆ ಮಲೇರಿಯಾ ನಿಯಂತ್ರಣ ಔಷಧಿ ಎಚ್​ಸಿಕ್ಯೂ ಸೇವನೆ ಮಾಡುತ್ತಿರುವುದಾಗಿ ಕಳೆದ ವಾರ ಬಹಿರಂಗ ಪಡಿಸಿದ್ದರು. ಅಲ್ಲದೆ, ಇದು ಎರಡು ವಾರಗಳ ಕೋರ್ಸ್​ ಎಂದೂ ತಿಳಿಸಿದ್ದರು. ಆ ಅವಧಿ ಇದೀಗ ಮುಗಿದಿದೆ ಎಂದಿದ್ದಾರೆ.

    ಇದನ್ನೂ ಓದಿ: ಡಬ್ಲ್ಯುಎಚ್​ಒದಿಂದ ಹೊರಕ್ಕೆ ಟ್ರಂಪ್ ಎಚ್ಚರಿಕೆ

    ಇತ್ತೀಚೆಗೆ ಭಾರತವೂ ಸಹ ಅಮೆರಿಕಕ್ಕೆ ಅಗತ್ಯ ಎಚ್​ಸಿಕ್ಯೂ ಔಷಧಿಗಳನ್ನು ರಫ್ತು ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts