More

    ಅಂಬೆಗಾಲಿಡುವಾಗ್ಲೇ ಸಪ್ತಪದಿ ತುಳಿದಿದ್ಲು; ಈಗ ಮದ್ವೆ ಆಗೋ ವಯಸ್ಸಲ್ಲೀಕೆ ವೈವಾಹಿಕ ಬಂಧನದಿಂದ ಮುಕ್ತಮುಕ್ತ..

    ಜೈಪುರ: ಇವಳು ಅಂಬೆಗಾಲಿಡುತ್ತಿರುವಾಗಲೇ ಇವಳಿಂದ ಸಪ್ತಪದಿ ತುಳಿಸಿದ್ದರು. ಅಂದು ಕೈ ಹಿಡಿದಿದ್ದ ವರನೇ ಶಾಪದಂತಾಗಿ, ಆತ ಹಾಕಿದ್ದ ಮೂರುಗಂಟು ಇವಳ ಬಾಳಿನ ಕಗ್ಗಂಟಾಗಿ ಪರಿಣಮಿಸಿತ್ತು. ಇದೀಗ ಸಾಮಾನ್ಯವಾಗಿ ಎಲ್ಲರೂ ಮದುವೆ ಆಗುವ ವಯಸ್ಸಲ್ಲಿ ಈಕೆ ವೈವಾಹಿಕ ಬಂಧನದಿಂದ ಮುಕ್ತಮುಕ್ತ ಎನಿಸಿಕೊಂಡಿದ್ದಾಳೆ.

    ಹೌದು.. ಬಾಲ್ಯವಿವಾಹದಿಂದಾಗಿ ತನ್ನ ಎರಡನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಅರಿವಿಲ್ಲದೆ ಪ್ರವೇಶಿಸಿದ್ದ ಈಕೆ ಬಹುತೇಕ ಎಲ್ಲ ಅರಿವಾಗುವ ವಯಸ್ಸಲ್ಲಿ, ಅಂದರೆ ತನ್ನ 18ನೇ ವರ್ಷಕ್ಕೆ ದಾಂಪತ್ಯ ಜೀವನದಿಂದ ಹೊರ ಬಂದಿದ್ದಾಳೆ. ಅದೇ ಖುಷಿಯಲ್ಲಿ ಈಗ ಇವಳು ತನ್ನ ಬಹುದಿನದ ಕನಸನ್ನು ನನಸು ಮಾಡಿಕೊಳ್ಳಲು ಮುಂದಾಗಿದ್ದಾಳೆ.

    ಇದನ್ನೂ ಓದಿ: ಮದುವೆ ದಿನವೇ ಮುಟ್ಟಾಗಿದ್ದಳಾಕೆ : ಡಿವೋರ್ಸ್​ಗೆ ಅದುವೇ ಕಾರಣವಾಯ್ತಾ?

    ಬಾಲ್ಯವಿವಾಹಕ್ಕೆ ಒಳಗಾಗಿದ್ದ ಈ ಬಾಲೆಯ ಹೆಸರು ನಿಂಬು. ಈಕೆ ಜೋಧಪುರದ ಬಾಪ್​ ತೆಹಸಿಲ್​ನ ನಿವಾಸಿ. 2002ರ ಮೇನಲ್ಲಿ ಈಕೆಯ ಮದುವೆ ಆಗಿತ್ತು. ಆಗ ಇವಳಿಗೆ ಹೆಚ್ಚೂಕಡಿಮೆ ಎರಡು ವರ್ಷ. ಇದೀಗ ಅಧಿಕೃತವಾಗಿ ಕಾನೂನು ಮೂಲಕ ದಾಂಪತ್ಯ ಜೀವನದಿಂದ ಹೊರಬಂದಿರುವ ಈಕೆ ಆ ಬಗ್ಗೆ ತನ್ನ ಖುಷಿಯನ್ನು ಹಂಚಿಕೊಂಡಿದ್ದಾಳೆ.

    ಬಾಲ್ಯವಿವಾಹ ನನ್ನ ಬಾಲ್ಯದ ಜೀವನವನ್ನೇ ಬರ್ಬಾದ್ ಮಾಡಿತ್ತು. ಈಗ ಸಾರಥಿ ಟ್ರಸ್ಟ್​ನ ಮ್ಯಾನೇಜಿಂಗ್ ಟ್ರಸ್ಟೀ ಕೃತಿ ಭಾರತಿ ನನಗೆ ಹೊಸ ಜೀವನ ಸಿಗುವಂತೆ ಮಾಡಿದ್ದಾರೆ. ಅಂತೂ ನನ್ನ ಬಾಲ್ಯವಿವಾಹದ ಜೀವನ ಕೊನೆಗೊಂಡಿದೆ. ನಾನಿನ್ನು ಪೊಲೀಸ್ ಅಧಿಕಾರಿ ಆಗುವ ನನ್ನ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ನಿಂಬು ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿ: ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

    ಬಾಲ್ಯವಿವಾಹದ ಬಳಿಕ ನಿಂಬು ಹಾಗೂ ಆಕೆಯ ಕುಟುಂಬ ತೀವ್ರ ಸಂಕಷ್ಟದಲ್ಲಿತ್ತು. ಕೆಲ ವರ್ಷಗಳ ಬಳಿಕ ನಿಂಬು ತನ್ನ ಬಾಲ್ಯವಿವಾಹದ ದಾಂಪತ್ಯದಿಂದ ಹೊರಬರಬೇಕು ಎಂದು ಅಂದುಕೊಂಡಿದ್ದರೂ ಅವರ ಜಾತಿಯ ಪ್ರಮುಖರ ಭಾರಿ ವಿರೋಧ ಎದುರಾಗಿತ್ತು. ದಾಂಪತ್ಯ ಜೀವನ ಮುರಿದುಕೊಂಡರೆ ಜಾತಿಯಿಂದಲೇ ಬಹಿಷ್ಕರಿಸುವ ಬೆದರಿಕೆಯೂ ಎದುರಾಗಿತ್ತು ಎನ್ನುತ್ತಾರೆ ಕೃತಿ.

    ಒಂದು ದಿನ ಕೃತಿ ನಡೆಸುತ್ತಿದ್ದ ಬಾಲ್ಯವಿವಾಹ ವಿರೋಧಿ ಅಭಿಯಾನದ ಬಗ್ಗೆ ತಿಳಿದುಕೊಂಡ ನಿಂಬು, ಆಕೆಯನ್ನು ಸಂಪರ್ಕಿಸಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದರು. ಅದಕ್ಕೆ ಕಾನೂನು ಮೂಲಕವೇ ದಾರಿ ತೋರಿಸಿ ನೆರವಾದ ಕೃತಿ, ಜೋಧಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ನಿಂಬು ಅರ್ಜಿ ಸಲ್ಲಿಸುವಂತೆ ಮಾಡಿದ್ದರು. ಕೊನೆಗೂ ಗುರುವಾರ ನಿಂಬುಗೆ ತನ್ನ ದಾಂಪತ್ಯ ಜೀವನದಿಂದ ಕಾನೂನು ಪ್ರಕಾರವೇ ಮುಕ್ತಿ ಸಿಕ್ಕಿದೆ. ಜೋಧಪುರದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಮಹೇಂದ್ರ ಕುಮಾರ್ ಸಿನ್ಹಾಲ್​, ನಿಂಬು ವೈವಾಹಿಕ ಜೀವನವನ್ನು ಅಂತ್ಯಗೊಳಿಸಿ ಆದೇಶ ಹೊರಡಿಸಿದ್ದಾರೆ. (ಏಜೆನ್ಸೀಸ್​)

    ತಿಮ್ಮಪ್ಪನ ಸನ್ನಿಧಿಗೆ ಹಿಂದೂ ಮಹಿಳೆಯನ್ನು ಬೆನ್ನ ಮೇಲೆ ಹೊತ್ತೊಯ್ದ ಮುಸ್ಲಿಂ ಯೋಧ!

    ‘ಹೀಗಾದರೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ರನ್ನೂ ಉಗ್ರನೆಂದು ಕರೆಯುತ್ತಾರೆ’ ರಾಹುಲ್​ ಗಾಂಧಿ ಆರೋಪ

    ಕೆಜಿಎಫ್​ ಶೂಟಿಂಗ್​ ಮುಗಿದು ವಾರವಾಯ್ತು; ಮನೆಯತ್ತ ಇನ್ನೂ ಮುಖ ಮಾಡದ ಯಶ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts