More

    ಕೇವಲ ಕುಳಿತುಕೊಳ್ಳುವ ಕುರ್ಚಿಗಾಗಿ ಗುತ್ತಿಗೆದಾರನ ದರ್ಪ, ವಾರ್ತಾ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ.

    ವಿಜಯವಾಣಿ ಸುದ್ದಿಜಾಲ ಗದಗ

    ಬಿಜೆಪಿ ಬೆಂಬಲಿತ ಗುತ್ತಿಗೆದಾರ ಓರ್ವನಿಂದ ವಾರ್ತಾ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆದು, ಪತ್ರಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಸೋಮವಾರ ಸಿಎಂ ಬೊಮ್ಮಾಯಿ, ಶಾಸಕ ಕಳಕಪ್ಪ ಬಂಡಿ ನೇತೃತ್ವದಲ್ಲಿ ರೋಣದಲ್ಲಿ ಜರುಗಿದ ಫಲಾನುಭವಿಗಳ ಕಾರ್ಯಕ್ರಮದಲ್ಲಿ ಜರಗಿತು. ರೋಣ ತಾಲೂಕಿನ ಶಾಂತಗೇರಿ ಗ್ರಾಮದ ಹನುಮಂಪ್ಪ ಹಟ್ಟಿಮನಿ ಎಂಬ ಗುತ್ತಿಗೆದಾರನೇ ದರ್ಪ ತೋರಿದ ವ್ಯಕ್ತಿ.

    ವೇದಿಕೆ ಮುಂಭಾಗದಲ್ಲಿನ ಪತ್ರಕರ್ತರ ಗ್ಯಾಲರಿಯಲ್ಲಿ ಗುತ್ತಿಗೆದಾರ ಹನುಮಂತ ಬಂದು ಕುಳಿತಿದ್ದರು. ಬೇರೆಡೆ ಕುಳಿತುಕೊಳ್ಳುವಂತೆ ವಾರ್ತಾ ಇಲಾಖೆ ಸಿಬ್ಬಂದಿ ಸೂಚಿಸುತ್ತಲೇ ಇದ್ದರು. ಪತ್ರಕರ್ತರಿಗೆ ಸ್ಥಳಾವಕಾಶ ಕೊರತೆ ಉದ್ಭವಿಸಿದಾಗ ಗುತ್ತಿಗೆದಾರ ಹನುಮಂತನಿಗೆ ಬೇರೆಡೆ ಕುಳಿರುಕೊಳ್ಳುವಂತೆ ಮತ್ತೊಮ್ಮೆ ಸೂಚಿಸಿದರು. ಇದರಿಂದ ಸಿಟ್ಟಾದ ಗುತ್ತಿಗೆದಾರ ವಾರ್ತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಮತ್ತು ಅವಾಚ್ಯ ಶಬ್ದಗಳಿಂದ ಪತ್ರಕರ್ತರನ್ನು ನಿಂದಿಸಿದ. ಇದರಿಂದ ಕೆರಳಿದ ಪತ್ರಕರ್ತರು ಸಮಾವೇಶವನ್ಬು ಬಹಿಷ್ಕರಿಸಲು ಹೊರನಡೆದರು. ಸ್ಥಳದಲ್ಲಿ ಉದ್ವಿಗ್ನ ವಾತಾವರ ಉಂಟಾಗುತ್ತಿದ್ದಂತೆ ಎಸ್ಪಿ ಬಾಬಾಸಾಬ ನೇಮಗೌಡ ಮಧ್ಯಪ್ರವೇಶಿಸಿ ಕುಳಿತುಕೊಳ್ಳುವಂತೆ ಪತ್ರಕರ್ತರನ್ನು ಮನವೊಲಿಸಿದರು. ಘಟನೆ ಸೂಕ್ಷ್ಮತೆ ಅರಿತ ಶಾಸಕ ಕಳಕಪ್ಪ ಬಂಡಿ ವೇದಿಕೆ ಮೇಲಿಂದಲೇ ಪತ್ರಕರ್ತರಿಗೆ ಮನವಿ ಮಾಡಿಕೊಂಡರು.

    ಕಾರ್ಯಕ್ರಮ ನಂತರ ಪೊಲೀಸ್ ಠಾಣೆಗೆ ತೆರಳಿದ ಪತ್ರಕರ್ತರು ಹಲ್ಲೆ ಮಾಡಿದವರನ್ನು ಬಂಧಿಸಿ ಎಂದು ಪಟ್ಟು ಹಿಡಿದರು. ಠಾಣೆಗೆ ಆಗಮಿಸಿದ ಎಸ್ಪಿ ಬಾಬಾಸಾಬ ನೇಮಗೌಡ ಮತ್ತು ಪತ್ರಕರ್ತರ ನಡುವೆ ಕೆಲಹೊತ್ತು ಮಾತುಕತೆ ನಡೆದು ದೂರು ದಾಖಲಿಸುವಂತೆ ಸೂಚಿಸಿದರು. ಈ ನಡುವೆ ಗುತ್ತಿಗೆದಾರನ ಕೆಲ ಹಿಂಬಾಲಕರು ಆಗಮಿಸಿ ರಾಜಿ ಮಾಡಿಕೊಳ್ಳಲು ಮುಂದಾದ ಸಂದರ್ಭದಲ್ಲಿ ಸಂಧಾನಕಾರರನ್ನು ಚಳಿ ಬಿಡಿಸಿದರು.

    ಗುತ್ತಿಗೆದಾರ ಶಾಸಕ ಕಳಕಪ್ಪ ಬಂಡಿ ಪರಮಾಪ್ತ ಗುತ್ತಿಗೆದಾರ ಎಂದು ತಿಳಿದು ಬಂದಿದೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ನಾನಾ ಗುತ್ತಿಗೆ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

    ಘಟನೆ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಯನ್ನು ಜಿಲ್ಲಾ ಸರ್ಕಾರಿ ನೌಕರ ಸಂಘ ಖಂಡಿಸಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts