More

    ಬೆಂಗಳೂರಿಗಾಗಿ ಸಚಿವರಿಬ್ಬರ ಮುಸುಕಿನ ಗುದ್ದಾಟ? ತಲ್ಲಣ ಮೂಡಿಸಿದೆ ಸುಧಾಕರ್​ರ ‘ಸಂಡೇ ಥಾಟ್ಸ್​’

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕರೊನಾ ನಿಯಂತ್ರಿಸುವ ಹೊಣೆಗಾರಿಕೆ ವಿಚಾರದಲ್ಲೂ ಸಚಿವರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ಚರ್ಚೆ ಶರುವಾಗಿದೆ.

    ತಂದೆ, ಪತ್ನಿ, ಮಗಳಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಹಾಗಾಗಿ ಇವರು ನಿರ್ವಹಿಸುತ್ತಿದ್ದ ಬೆಂಗಳೂರಿನ ಕರೊನಾ ನಿಯಂತ್ರಣ ಉಸ್ತುವಾರಿ ಜವಾಬ್ದಾರಿ ಈಗ ಆರ್. ಅಶೋಕ್​ರ ಹೆಗಲೇರಿದೆ. ಬೆಂಗಳೂರಿನ ಕರೊನಾ ಉಸ್ತುವಾರಿ ಕೊಡುವವರೆಗೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಅಶೋಕ್ ಸದ್ಯ ಫುಲ್ ಆಕ್ಟೀವ್ ಆಗಿದ್ದಾರೆ. ಇದರ ಬೆನ್ನಲ್ಲೇ ‘ಸಂಡೇ ಥಾಟ್ಸ್’ ಹೆಸರಿನ ಕಥೆಯೊಂದನ್ನು ಟ್ವೀಟ್ ಮಾಡಿರುವ ಸುಧಾಕರ್, ‘ಸ್ಥಾನದಿಂದ ನಾಯಕತ್ವ ಬರುವುದಿಲ್ಲ. ನಾಯಕತ್ವ ಬರೋದು ನಾವು ಮಾಡುವ ಕೆಲಸದಿಂದ’ ಎಂದಿದ್ದಾರೆ. ಕೆಲವರಿಗೆ ಪರೋಕ್ಷವಾಗಿಯೇ ಸುಧಾಕರ್​ ಟಾಂಗ್​ ಕೊಟ್ಟಿದ್ದಾರೆ ಎಂದೇ ಹೇಳಲಾಗುತ್ತಿದೆ. ಇದನ್ನೂ ಓದಿರಿ ಸಿಎಂ ಮನೆ ಬಳಿಯ ಧರಣಿ ಹಿಂಪಡೆದ ದೇವೇಗೌಡ

    ”ಶಾಲಾ ದಿನಗಳಲ್ಲಿ ನಾನು ಓದಿದ ಕಥೆಯೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಕಥೆಯ ನೈತಿಕತೆಗೆ ಇಷ್ಟೆ. ನಮ್ಮ ಕೆಲಸವನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಮತ್ತು ಉತ್ತಮ ಉದ್ದೇಶದಿಂದ ಮಾಡಬೇಕು. ನಾವು ಮಾಡುವ ಕೆಲಸದಿಂದ ನಾಯಕತ್ವ ಬರುತ್ತದೆಯೇ ಹೊರತು ಸ್ಥಾನದಿಂದ ಅಲ್ಲ. ನಾನು ಈ ತತ್ವ ನಂಬಿರುವವನು” ಎಂದು ಬರೆದುಕೊಂಡಿರುವ ಸುಧಾಕರ್​, ”That’s not my job” ಶೀರ್ಷಿಕೆಯುಳ್ಳ ಕಥೆಯೊಂದರ ಪತ್ರಿಯನ್ನು ಶೇರ್​ ಮಾಡಿಕೊಂಡಿದ್ದಾರೆ.

    ಸುಧಾಕರ್ ಮಾಡಿರುವ ಟ್ವೀಟ್ ಸಾಕಷ್ಟು ಕುತೂಹಲ ಕೆರಳಿಸಿದ್ದು, ಇದು ಕೆಲವರಿಗೆ ಟಾಂಗ್ ನೀಡುವಂತಿದೆ ಎಂದೇ ಬಣ್ಣಿಸಲಾಗುತ್ತಿದೆ. ಸಚಿವರಿಬ್ಬರ ನಡುವೆ ಕರೊನಾ ನಿಯಂತ್ರಣ ಕ್ರೆಡಿಟ್​ಗಾಗಿ ಪಾಲಿಟಿಕ್ಸ್ ನಡೆಯುತ್ತಿದೆ ಎಂದೂ ಹೇಳಲಾಗುತ್ತಿದೆ.

    ಸುಧಾಕರ್​ ಕ್ವಾರಂಟೈನ್​ನಲ್ಲಿರುವ ಕಾರಣ ಮತ್ತು ರಾಜಧಾನಿಯಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸುವ ಜವಾಬ್ದಾರಿಯನ್ನು ಸಿಎಂ ಯಡಿಯೂರಪ್ಪ ಅವರು ಅಶೋಶ್​ಗೆ ನೀಡಿದರು. ಉಸ್ತುವಾರಿ ಬದಲಾವಣೆ ವಿಚಾರ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬೆಂಗಳೂರು ಉಸ್ತುವಾರಿ ಕೊಟ್ಟ ಬೆನ್ನಲ್ಲೇ ಫುಲ್ ಆಕ್ಟೀವ್ ಆಗಿರುವ ಅಶೋಕ್, ನಿನ್ನೆ ಮತ್ತು ಇಂದು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಶೋಕ್ ಆಕ್ಟೀವ್ ಆದ ಬೆನ್ನಲ್ಲೇ ಸುಧಾಕರ್​ಗೆ ಟೆನ್ಷನ್ ಶುರುವಾಗಿದೆ ಎಂಬ ಮಾತೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತಿದೆ ಸುಧಾಕರ್​ ಟ್ವೀಟ್​ ಮಾಡಿಕೊಂಡಿರುವ ಸ್ಟೋರಿ.

    ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts