More

    ಅಶ್ಲೀಲ ಚಿತ್ರಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಠಿಣ ಶಿಕ್ಷೆಗೆ ಗುರಿಯಾದ ಯುವತಿ…!

    ಮಾಸ್ಕೋ: ಅಶ್ಲೀಲತೆ ಹರಡಿದ ಆರೋಪದ ಮೇಲೆ ರಷ್ಯಾದ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದೇಹದ ಸಕಾರಾತ್ಮಕತೆಯನ್ನು ಉತ್ತೇಜಿಸಲು ಮಹಿಳಾ ದೇಹಕ್ಕೆ ಸಂಬಂಧಿಸಿದ ವ್ಯಂಗ್ಯ ಚಿತ್ರಗಳು ಮತ್ತು ಜನನಾಂಗದ ಚಿತ್ರಗಳನ್ನು ಡ್ರಾಯಿಂಗ್​ ಮಾಡಿ ಹರಿಬಿಟ್ಟಿದ್ದಕ್ಕೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ಬಂಧಿತರನ್ನು ಯುಲಿಯಾ ಟ್ವೆಟ್ಕೊವಾ ಎಂದು ಗುರುತಿಸಲಾಗಿದೆ. ಕಲಾವಿದೆ ಹಾಗೂ ಕಾರ್ಯಕರ್ತೆಯಾಗಿರುವ ಯುಲಿಯಾ, ರಷ್ಯಾದ ಪಶ್ಚಿಮ ನಗರ ಕೊಮ್ಸೊಮೊಲ್ಸ್ಕ್-ಆನ್-ಅಮುರ್ ನಿವಾಸಿಯಾಗಿದ್ದಾರೆ. ಯೋನಿ ಸ್ವಗತಗಳು ಎಂಬ ಸಾಮಾಜಿಕ ಜಾಲತಾಣ ಗ್ರೂಪ್​ನಲ್ಲಿ ಅಶ್ಲೀಲ ಚಿತ್ರಗಳನ್ನು ಹರಡಿ ಮನಸ್ಸು ಕದಡಿದ ಆರೋಪದ ಮೇಲೆ 2 ವರ್ಷಗಳ ಕಾರಾಗೃಹ ಶಿಕ್ಷೆಗೆ ಯುಲಿಯಾ ಗುರಿಯಾಗಿದ್ದಾರೆ.

    ಇದನ್ನೂ ಓದಿ: ಯದುವೀರ ಮಾನ ಮರ್ಯಾದೆ ಇಲ್ಲದೇ ಸಿಂಹಾಸನದ ಮೇಲೆ ಕೂರುತ್ತಾನೆ: ಪ್ರೋ ನಂಜರಾಜೇ ಅರಸ್ ಕಿಡಿ

    ಕಲಾಕೃತಿಗಳನ್ನು ಶೇರ್​ ಮಾಡುವ ಮೂಲಕ ಯೋನಿ ಸೇರಿದಂತೆ ಒಟ್ಟಾರೆ ಸ್ತ್ರೀ ಶರೀರಶಾಸ್ತ್ರದ ಸುತ್ತಲೂ ಇರುವ ಕಳಂಕವನ್ನು ತೆಗೆದುಹಾಕುವುದೇ ಈ ಗ್ರೂಪ್​ನ ಉದ್ದೇಶವಾಗಿದೆ. ಇದರಲ್ಲಿ ಸರಣಿ ಕಾರ್ಟೂನ್​ಗಳನ್ನು ಹರಿಬಿಟ್ಟಿರುವ ಯುಲಿಯಾ, ನಿಜವಾದ ಮಹಿಳೆ ಆಕೆಯ ದೇಹದ ಮೇಲೆ ಕೂದಲುಗಳನ್ನು ಹೊಂದಿರುತ್ತಾಳೆ ಹಾಗೂ ಅದು ಸಾಮನ್ಯಾ ಕೂಡ ಹೌದು. ನಿಜವಾದ ಮಹಿಳೆಯ ದೇಹ ಕೊಬ್ಬಿನಿಂದ ಕೂಡಿರುತ್ತದೆ. ಅದು ಸಾಮಾನ್ಯವೂ ಹೌದು ಮತ್ತು ಅವರು ಪೀರಿಯಡ್ಸ್​ ಸಹ ಹೊಂದುತ್ತಾರೆ. ಅದು ಕೂಡ ಸಾಮಾನ್ಯವೇ ಎಂದು ಕಾರ್ಟೂನ್​ನಲ್ಲಿ ಬರೆದುಕೊಂಡಿದ್ದಾರೆ.

    ಯುಲಿಯಾ ಶೇರ್​​ ಮಾಡಿದ ಕಾರ್ಟೂನ್​ಗಳಿಗೆ ಭಾರಿ ಬೆಂಬಲ ವ್ಯಕ್ತವಾಗಿ ಅನೇಕರು “ನನ್ನ ದೇಹ ಅಶ್ಲೀಲತೆಯಲ್ಲ” ಎಂಬ ಅಡಿಬರಹ ಬರೆದು ತಮ್ಮ ದೇಹದ ಫೋಟೋಗಳನ್ನು ತೆಗೆದು ಹರಿಬಿಟ್ಟಿದ್ದಾರೆ. ಈ ಕಾರಣಕ್ಕಾಗಿ ಯುಲಿಯಾ ವಿರುದ್ಧ ಅಶ್ಲೀಲತೆ ಹರಡಿದ ಆರೋಪದ ಮೇಲೆ ಬಂಧಿಸಲಾಗಿದೆ.

    ಇದನ್ನೂ ಓದಿ: ಯುವತಿ ಫೋಟೋ ಎಡಿಟ್​ ಮಾಡಿ ಜಾಲತಾಣದಲ್ಲಿ ಹರಿಬಿಟ್ಟ ಯುವಕ: ಮುಂದಾಗಿದ್ದು ಯಾರು ಊಹಿಸದ ದುರಂತ

    ಇನ್ನು ಯುಲಿಯಾ ವಿರುದ್ಧ ಪ್ರಕರಣಗಳನ್ನು ಕೈಬಿಡಬೇಕೆಂದು ಭಾರಿ ಪ್ರತಿಭಟನೆ ಸಹ ವ್ಯಕ್ತವಾಗುತ್ತಿದೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲೇ ಸುಮಾರು 40 ಪ್ರತಿಭಟನೆಗಳು ನಡೆದಿದ್ದು, 250,000 ಸಹಿ ಸಂಗ್ರಹ ಚಳುವಳಿಯು ಸಹ ನಡೆದಿದೆ. (ಏಜೆನ್ಸೀಸ್​)

    ಕರೊನಾ ಗುಟ್ಟು ಬಚ್ಚಿಡಲು ಚೀನಾದಿಂದ ಅಬ್ಬಾ ಇದೆಂಥ ಕೃತ್ಯ… ಇಲ್ಲಿದೆ ಸ್ಫೋಟಕ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts