More

    ಏಷ್ಯಾಡ್​ ಪದಕ ಸಾಧಕರಿಗೆ ಈಗ ತವರಿನ ಸನ್ಮಾನದ ಸಂಭ್ರಮ, ಸಡಗರ

    ನವದೆಹಲಿ: ಹಾಂಗ್​ರೆೌ ಏಷ್ಯನ್​ ಗೇಮ್ಸ್​ನಲ್ಲಿ ಪದಕಗಳ ಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮೆರೆದ ಭಾರತದ ಕ್ರೀಡಾಪಟುಗಳಿಗೆ ಈಗ ತವರಿನಲ್ಲಿ ಸರಣಿ ಸನ್ಮಾನಗಳನ್ನು ಸ್ವೀಕರಿಸುವ ಸಂಭ್ರಮದ ಸಮಯ. ಮಂಗಳವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅಭಿನಂದನೆಗಳನ್ನು ಸ್ವೀಕರಿಸಿದ ಎಲ್ಲ ಪದಕ ಸಾಧಕರು ಈಗ ತವರೂರಿಗೆ ಸಂಭ್ರಮದಿಂದ ಮರಳುತ್ತಿದ್ದಾರೆ. ಇದರ ನಡುವೆ ತವರು ಕ್ರೀಡಾಸಂಸ್ಥೆ, ಕೆಲಸ ನಿರ್ವಹಿಸುವ ಸಂಸ್ಥೆ, ರಾಜ್ಯ ಸರ್ಕಾರಗಳಿಂದಲೂ ಬಹುಮಾನ ದೊರೆಯಲಾರಂಭಿಸಿದೆ.

    ವಿಶ್ವ-ಒಲಿಂಪಿಕ್ಸ್​ ಚಾಂಪಿಯನ್​ ಜಾವೆಲಿನ್​ ಥ್ರೋಪಟು ನೀರಜ್​ ಚೋಪ್ರಾ ಸಹಿತ ಏಷ್ಯಾಡ್​ನಲ್ಲಿ ಪದಕ ಗೆದ್ದ ಎಲ್ಲ ಸೈನಿಕರನ್ನು ಸೇನಾ ಮುಖ್ಯಸ್ಥ ಜನರಲ್​ ಮನೋಜ್​ ಪಾಂಡೆ ಬುಧವಾರ ಸನ್ಮಾನಿಸಿದರು. ಏಷ್ಯಾಡ್​ನಲ್ಲಿ ಸೈನಿಕರು ಒಟ್ಟು 20 ಪದಕ (3 ಚಿನ್ನ, 7 ಬೆಳ್ಳಿ, 10 ಕಂಚು) ಗೆದ್ದುಕೊಟ್ಟಿದ್ದಾರೆ. ಮತ್ತೊಂದೆಡೆ ಏಷ್ಯಾಡ್​ನಲ್ಲಿ ಅಥ್ಲೆಟಿಕ್ಸ್​ ಒಂದರಲ್ಲೇ 29 ಪದಕಗಳನ್ನು (6 ಚಿನ್ನ, 14 ಬೆಳ್ಳಿ, 9 ಕಂಚು) ಗೆದ್ದುಕೊಟ್ಟ ಅಥ್ಲೀಟ್​ಗಳನ್ನು ಭಾರತೀಯ ಅಥ್ಲೆಟಿಕ್ಸ್​ ಸಂಸ್ಥೆ ಸನ್ಮಾನಿಸಿತು.

    ಮತ್ತೊಂದೆಡೆ ಸ್ವರ್ಣ ವಿಜೇತ ಹಾಕಿ ಆಟಗಾರರಾದ ಪಿಆರ್​ ಶ್ರೀಜೇಶ್​, ಹಾರ್ದಿಕ್​ ಸಿಂಗ್​ಗೆ ಕ್ರಮವಾಗಿ ಕೊಚ್ಚಿ ಮತ್ತು ಅಮೃತಸರದಲ್ಲಿ ಕುಟುಂಬ ಸದಸ್ಯರು ಸಂಭ್ರಮದಿಂದ ಬರಮಾಡಿಕೊಂಡರೆ, ಕೋಚ್​ ಪುಲ್ಲೇಲಾ ಗೋಪಿಚಂದ್​ ಜತೆ ಬ್ಯಾಡ್ಮಿಂಟನ್​ ತಾರೆಯರಿಗೆ ಹೈದರಾಬಾದ್​ನಲ್ಲಿ ಅದ್ದೂರಿ ಸ್ವಾಗತ ದೊರೆಯಿತು.

    ವಿಶ್ವಕಪ್​ನಲ್ಲಿ ಮೊದಲ ವಾರವೇ ದಾಖಲೆಗಳ ಧಮಾಕಾ; ಶತಕಗಳ ಸುರಿಮಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts