More

    ಪ್ಯಾರಾ ಶೂಟಿಂಗ್‌ನಲ್ಲಿ ಕರ್ನಾಟಕಕ್ಕೆ ನಾಲ್ಕು ಪದಕ

    ಹುಬ್ಬಳ್ಳಿ: ದೆಹಲಿಯ ಡಾಕ್ಟರ್ ಕರುಣಿಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 4ನೇ ರಾಷ್ಟ್ರಮಟ್ಟದ ಪ್ಯಾರಾ ಶೂಟಿಂಗ್ ಚಾಂಪಿಯನ್‌ಷಿಪ್-2023ರಲ್ಲಿ ಹುಬ್ಬಳ್ಳಿಯ ಮೂವರು ಶೂಟರ್ಸ್‌ಗಳು 2 ಚಿನ್ನ ಹಾಗೂ 2 ಕಂಚಿನ ಪದಕ ಪಡೆದಿದ್ದಾರೆ. ಕರ್ನಾಟಕದಿಂದ ಒಟ್ಟು ಎಂಟು ಜನ ಪ್ಯಾರಾ ಶೂಟರ್ಸ್‌ಗಳು ಭಾಗವಹಿಸಿದ್ದರು. ಪದಕ ವಿಜೇತ ಮೂವರೂ ಹುಬ್ಬಳ್ಳಿ ಆಟಗಾರರು ಎಂಬುದು ವಿಶೇಷ.
    ಶ್ರೀಹರ್ಷ ದೇವರೆಡ್ಡಿ ಅವರು 10 ಮೀಟರ್ ಏರ್ ರೈಫಲ್ ಸ್ಟಾೃಂಡಿಂಗ್ ಮಿಕ್ಸೆಡ್ ಎಸ್‌ಎಚ್-2ನಲ್ಲಿ ಚಿನ್ನದ ಪದಕ, 10 ಮೀಟರ್ ಏರ್ ರೈಫಲ್ ಪ್ರೋನ್ ಮಿಕ್ಸೆಡ್‌ನಲ್ಲಿ 1 ಚಿನ್ನದ ಪದಕ, 50 ಮೀಟರ್ ರೈಫಲ್ 3 ಪೋಜಿಷನ್‌ನಲ್ಲಿ ರಾಕೇಶ ನಿಡಗುಂದಿ ಅವರಿಗೆ ವೈಯಕ್ತಿಕ ವಿಭಾಗದಲ್ಲಿ 1 ಕಂಚಿನ ಪದಕ, 50 ಮೀಟರ್ ರೈಫಲ್ ಪ್ರೋನ್ ತಂಡದ ವಿಭಾಗದಲ್ಲಿ ಶಂಕರಲಿಂಗ ತವಳಿ ಹಾಗೂ ರಾಕೇಶ ನಿಡಗುಂದಿ ಅವರು 1 ಕಂಚಿನ ಪದಕ ಪಡೆದಿದ್ದಾರೆ. ವಿಜೇತರಿಗೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಜೆ.ಪಿ. ನೋಟಿಯಲ್, ಕರ್ನಲ್ ಅಮರಜೀತಸಿಂಗ್ ಪದಕ ವಿತರಿಸಿದರು. ರವಿಚಂದ್ರ ಬಾಲೇಹೊಸೂರ ತಂಡದ ವ್ಯವಸ್ಥಾಪಕ ಮತ್ತು ತರಬೇತುದಾರರಾಗಿ ಕಾರ್ಯನಿರ್ವಹಿಸಿದರು. ಕರ್ನಾಟಕ ಅಂಗವಿಕಲ ಕ್ರೀಡಾ ಸಂಸ್ಥೆ ಅಧ್ಯಕ್ಷ ಎಂ. ಮಹದೇವ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts