More

    ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ

    ಮೂಡಿಗೆರೆ: ಪಟ್ಟಣ ಪಂಚಾಯಿತಿಯಿಂದ ಕಲುಷಿತ ನೀರು ಪೂರೈಸುತ್ತಿರುವುದರಿಂದ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.
    ಹಿಂದೆ ಎರಡು ದಿನಕ್ಕೊಮ್ಮೆ ನೀರು ಬರುತ್ತಿತ್ತು. ಈಗ 5 ರಿಂದ 6 ದಿನಕೊಮ್ಮೆ ಸಂಪೂರ್ಣ ಕಲುಷಿತಗೊಂಡಿರುವ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕುಡಿಯಲು ಪಪಂ ಪೂರೈಸುತ್ತಿರುವ ನೀರು ಬಿಟ್ಟರೆ ಇತರೆ ಜಲಮೂಲಗಳು ಇಲ್ಲದಿರುವುದರಿಂದ ಕಲುಷಿತ ನೀರನ್ನು ಬಳಸಬೇಕಾಗಿದೆ. ಚರಂಡಿಯಲ್ಲಿ ಹರಿಯುವ ಮಳೆ ನೀರಿಗಿಂತ ಕಳಪೆ ನೀರನ್ನು ಕುಡಿಯಲು ಪೂರೈಕೆ ಮಾಡಲಾಗುತ್ತಿದೆ ಎಂದು ಪಿ.ಬಿ.ರಸ್ತೆ ಬಡಾವಣೆ ನಿವಾಸಿಗಳು ದೂರಿದ್ದಾರೆ.
    ಕಲುಷಿತ ನೀರು ಪೂರೈಕೆ ಮಾಡುತ್ತಿರುವ ಬಗ್ಗೆ ವಾಟರ್‌ಮ್ಯಾನ್ ಬಳಿ ವಿಚಾರಿಸಿದರೆ ಕಲುಷಿತ ನೀರು ಬಿಟ್ಟರೆ ಒಳ್ಳೆಯ ನೀರು ಇಲ್ಲ. ಬೇಕಾದರೆ ಇದೆ ನೀರನ್ನು ಬಳಸಿಕೊಳ್ಳಿ ಪಪಂ ಅಧಿಕಾರಿಗಳು ಇದೇ ನೀರು ಪೂರೈಕೆ ಮಾಡಲು ತಿಳಿಸಿದ್ದಾರೆ ಎಂದು ಉಡಾಫೆಯಿಂದ ಉತ್ತರಿಸುತ್ತಾರೆ. ಬೀಜುವಳ್ಳಿ ಮತ್ತು ಕಿತ್ತಲೆಗಂಡಿಯಲ್ಲಿ ಪಪಂಗೆ ಸೇರಿದ ನೀರು ಶುದ್ದೀಕರಣ ಘಟಕವಿದ್ದರೂ ಅಲ್ಲಿ ನೀರನ್ನು ಶುದ್ಧೀಕರಿಸದೆ ನೇರವಾಗಿ ಪೂರೈಕೆ ಮಾಡುತ್ತಿರುವುದರಿಂದ ಕಲುಷಿತ ನೀರು ಬರುತ್ತಿದೆ. ಇದರಿಂದ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಇಂತಹ ನೀರು ನಮಗೆ ಬೇಡ. ಶುದ್ಧೀಕರಿಸಿದ ಉತ್ತಮ ಗುಣಮಟ್ಟದ ನೀರು ಪೂರೈಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts