More

    ಶಾರ್ಟ್ಸ್​ ಮೇಲೆ ಗಣಪತಿ ಚಿತ್ರದ ಡಿಸೈನ್​; ಅಂತೂ ತಪ್ಪೊಪ್ಪಿಕೊಂಡ ಸಂಸ್ಥೆ

    ಬ್ರೆಸಿಲಿಯಾ: ವಿಘ್ನ ನಿವಾರಕ ಗಣಪತಿ ದೇವರಿಗೆ ಹಿಂದೂ ಸಂಪ್ರದಾಯದಲ್ಲಿ ಒಂದು ವಿಶಿಷ್ಠ ಸ್ಥಾನಮಾನ ಮತ್ತು ನಂಬಿಕೆಯಿದೆ. ಯಾವುದೇ ಕಾರ್ಯಾರಂಭವಾಗಬೇಕೆಂದರೆ ಅಲ್ಲಿ ಗಣೇಶನ ಸ್ತುತಿಸಿದರೆ, ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ನಂಬಲಾಗುತ್ತದೆ. ಆದರೆ ನಮ್ಮೆಲ್ಲರ ಪ್ರೀತಿಯ ಗಣೇಶನನ್ನು ಆ ಒಂದು ಸಂಸ್ಥೆ ಶಾರ್ಟ್ಸ್​ಗಳ ಮೇಲೆ ಪ್ರಿಂಟ್​ ಮಾಡಿಸಿತ್ತು. ಸಂಸ್ಥೆಯ ಈ ನಡವಳಿಕೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲಲ್ಲಿ ಸಂಸ್ಥೆ ತನ್ನ ತಪ್ಪನ್ನು ಒಪ್ಪಿಕೊಂಡಿದೆ.

    ಇದನ್ನೂ ಓದಿ: ಭಾರತದ ಫೇಸ್​ಬುಕ್​ ಪ್ರಿಯಕರನ ಮದ್ವೆಯಾಗಿ ಸುಖವಾಗಿದ್ದ ಬಾಂಗ್ಲಾ ಯುವತಿಗೆ ಬಿಗ್​ ಶಾಕ್​!

    ಬ್ರೆಜಿಲ್​ನ ಜಾನ್​ ಕೊಟ್ರೆ ಬ್ರ್ಯಾಂಡ್​ ಇಂತದ್ದೊಂದು ವಿವಾದ ಸೃಷ್ಟಿಸಿಕೊಂಡಿತ್ತು. ಗಣೇಶನ ಚಿತ್ರವನ್ನು ಮಹಿಳೆಯರು ಮತ್ತು ಪುರುಷರು ತೊಡುವ ಶಾರ್ಟ್ಸ್​ಗಳ ಮೇಲೆ ಡಿಸೈನ್​ ರೂಪದಲ್ಲಿ ಬಳಸಲಾಗಿತ್ತು. ಅದನ್ನು ತನ್ನ ವೆಬ್​ಸೈಟ್​ನಲ್ಲೂ ಪ್ರಕಟಿಸಲಾಗಿತ್ತು. ಈ ವಿಚಾರವಾಗಿ ಸಿಟ್ಟಿಗೆದ್ದ ಹಿಂದೂಗಳು ಸಂಸ್ಥೆಯ ವಿರುದ್ಧ ಆರೋಪ ಮಾಡಿದ್ದಾರೆ. ಅಮೆರಿಕ ಮೂಲದ ಹಿಂದೂ ಧರ್ಮ ಗುರು ರಾಜನ್​ ಜೆಡ್​ ಅವರು ಸಂಸ್ಥೆಯ ವಿರುದ್ಧ ದೂರು ದಾಖಲಿಸಿದ್ದರು.
    ತಕ್ಷಣ ಎಚ್ಚೆತ್ತುಕೊಂಡ ಬ್ರೆಜಿಲ್​ನ ಭಾರತೀಯ ರಾಯಭಾರಿ ಕಚೇರಿ, ಹಿಂದೂಗಳಿಗೆ ಗಣೇಶನ ಬಗ್ಗೆ ಇರುವ ಭಾವನೆಯನ್ನು ಸಂಸ್ಥೆಗೆ ಅರ್ಥೈಸಿದೆ. ತನ್ನ ತಪ್ಪಿನ ಅರಿವು ಮಾಡಿಕೊಂಡ ಸಂಸ್ಥೆ ಹಿಂದೂಗಳಲ್ಲಿ ಕ್ಷಮೆ ಯಾಚಿಸಿದೆ.

    ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಥಾನದಿಂದ ಇಮರ್ತಿದೇವಿ ರಾಜೀನಾಮೆ

    ನಮ್ಮ ಸಂಸ್ಥೆ ಮಾಡಿರುವ ತಪ್ಪಿಗೆ ನಾವು ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೇವೆ. ನಮ್ಮ ಉದ್ದೇಶ ಯಾರನ್ನೂ ಹೀಯಾಳಿಸುವುದಾಗಲಿ ಅಥವಾ ಈ ರೀತಿಯ ಅಪರಾಧ ಮಾಡುವುದು ಆಗಿರಲಿಲ್ಲ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಸದ್ಯ ಗಣೇಶನ ಪ್ರಿಂಟ್​ ಇದ್ದ ಶಾರ್ಟ್ಸ್​ಗಳನ್ನು ಸಂಸ್ಥೆ ಅಂಗಡಿಗಳಿಂದ ವಾಪಾಸು ಪಡೆದಿದೆ ಮತ್ತು ವೆಬ್​ಸೈಟ್​ನಲ್ಲೂ ತೆಗೆದುಹಾಕಿದೆ. (ಏಜೆನ್ಸೀಸ್​)

    ಗಾಂಧಿ ಕುಟುಂಬದಲ್ಲಿ ತಲ್ಲಣ ಸೃಷ್ಟಿಸಿರುವ ಒಬಾಮಾ ಪುಸ್ತಕ ವಾರದಲ್ಲಿ 17 ಲಕ್ಷ ಕಾಪಿ ಸೇಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts