More

    ಭಾರತದ ಫೇಸ್​ಬುಕ್​ ಪ್ರಿಯಕರನ ಮದ್ವೆಯಾಗಿ ಸುಖವಾಗಿದ್ದ ಬಾಂಗ್ಲಾ ಯುವತಿಗೆ ಬಿಗ್​ ಶಾಕ್​!

    ಚೆನ್ನೈ: ಸೂಕ್ತವಾದ ವೀಸಾ ಇಲ್ಲದೆ ತಮಿಳುನಾಡಿನ ಮಿಂಜರ್​ ನಗರದಲ್ಲಿ ವಾಸವಿದ್ದ ಬಾಂಗ್ಲಾದೇಶ ಮೂಲದ 22 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತಳನ್ನು ಪಾಪಿಯಾ ಘೋಷ್​ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಶಶಿ ಶೇಕ್​ ಎಂಬಾತನೊಂದಿಗೆ ಪಾಪಿಯಾಗೆ ಫೇಸ್​ಬುಕ್​ ಮೂಲಕ ಪರಿಚಯವಾಗಿ, ಪ್ರೀತಿಗೆ ತಿರುಗಿತ್ತು. ತನ್ನ ಪ್ರಿಯಕರನನ್ನು ಭೇಟಿ ಮಾಡಲು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಳು.

    ಬಳಿಕ ಇಬ್ಬರು ತಮಿಳುನಾಡಿನ ತಿರ್ಪೂರ್​ಗೆ ಆಗಮಿಸಿ ಮದುವೆಯಾಗಿ ಅಲ್ಲಿಯೇ ವಾಸವಿದ್ದರು. ಕೆಲವೇ ದಿನಗಳಲ್ಲಿ ಕಂಟೈನರ್​ ಯಾರ್ಡ್​ ಕೆಲಸ ಸಿಕ್ಕಿದ್ದರಿಂದ ತಿರ್ಪೂರ್​ ಬಿಟ್ಟು ಮಿಂಜುರ್​ಗೆ ಬಂದು ನೆಲೆಸಿದ್ದರು. ಇಬ್ಬರು ಮಿಂಜುರ್​ಗೆ ಬರುವ ಮುನ್ನ ಫೆಬ್ರವರಿಯಲ್ಲೇ ಪೊಲ್ಲಾಚಿಯಲ್ಲಿ ರಿಜಿಸ್ಟರ್​ ಮದುವೆ ಆಗಿದ್ದರು.

    ಇದನ್ನೂ ಓದಿ: ಅಣ್ಣ-ಅತ್ತಿಗೆ ಅಮ್ಮನ ಸರಿಯಾಗಿ ನೋಡಿಕೊಳ್ತಿಲ್ಲ… ಪ್ಲೀಸ್​ ಕಾನೂನಿನಡಿ ಪರಿಹಾರ ಹೇಳಿ…

    ಇದರ ನಡುವೆ ಪಾಪಿಯಾ ಪಾಲಕರು ಬಾಂಗ್ಲಾದೇಶದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಹೀಗಿರುವಾಗ ತಮಿಳುನಾಡಿನ ಕಾಂಚಿಪುರಂ ಅಪರಾಧ ವಿಭಾಗಕಕ್ಕೆ ಮಹಿಳೆ ಕುರಿತು ಮಾಹಿತಿ ಸಿಗುತ್ತದೆ. ತಕ್ಷಣ ಮಿಂಜುರ್​ಗೆ ತೆರಳಿ ಪಾಪಿಯಾಳನ್ನು ವಿಚಾರಣೆ ನಡೆಸುತ್ತಾರೆ. ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಯ ಬಳಿ ಯಾವುದೇ ಮಾನ್ಯ ಪಡೆದ ವೀಸಾ ಇರದಿರುವುದು ತಿಳಿದು ಇದೀಗ ಆಕೆಯನ್ನು ಬಂಧಿಸಿದ್ದಾರೆ.

    ಸದ್ಯ ಬಂಧಿಯಾಗಿರುವ ಪೊಪಿಯಾಳನ್ನು ತವರಿಗೆ ಕಳುಹಿಸಬೇಕಾ? ಬೇಡ್ವಾ? ಎಂಬುದರ ಬಗ್ಗೆ ವಲಸೆ ಇಲಾಖೆ ಅಧಿಕಾರಿಗಳು ನಿರ್ಧರಿಸುತ್ತಾರೆಂದು ತಿರುವಳ್ಳೂರ್​ ಪೊಲೀಸ್​ ವರಿಷ್ಠಾಧಿಕಾರಿ ಪಿ. ಅರವಿಂದನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಮೂರು ಮಕ್ಕಳನ್ನು ಕಾಲುವೆಗೆ ತಳ್ಳಿ ಕೊಂದ ತಂದೆ- ಇದಕ್ಕೆ ಕಾರಣ ಹೆಂಡ್ತಿಯಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts