More

    ಬೆಂಗಳೂರಿನತ್ತ ಲಗ್ಗೆಯಿಟ್ಟ ಸಾವಿರಾರು ಟ್ರ್ಯಾಕ್ಟರ್, ಆದ್ರೆ ರಾಜಧಾನಿಗೆ ಎಂಟ್ರಿಗೂ ಕಂಡೀಷನ್ ಉಂಟು!

    ಬೆಂಗಳೂರು: ದೇಶಾದ್ಯಾಂತ ಇಂದು ಗಣರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿದ್ದು, ಈ ನಡುವೆ ರೈತರ ಟ್ರ್ಯಾಕ್ಟರ್‌ ಪರೇಡ್‌ ಕೂಡ ಭಾರಿ ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಈಗ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೂ ವಿಸ್ತರಿಸಿಕೊಂಡಿದ್ದು, ಕರ್ನಾಟಕದ ಮೂಲೆಮೂಲೆಗಳಿಂದಲೂ ರಾಜ್ಯರಾಜಧಾನಿ ಬೆಂಗಳೂರಿನತ್ತ ಸಾವಿರಾರು ಟ್ರ್ಯಾಕ್ಟರ್​ಗಳು ಲಗ್ಗೆ ಇಟ್ಟಿವೆ. ಎಲ್ಲೆಡೆ ಖಾಕಿ ಸರ್ಪಗಾವಲಿದ್ದು, ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ. ಹಲವೆಡೆ ಟ್ರ್ಯಾಕ್ಟರ್​ಗಳನ್ನು ತಡೆದು ವಾಪಸ್​ ಕಳುಹಿಸಲಾಗಿದ್ದು, ಒಟ್ಟು 125 ಟ್ರ್ಯಾಕ್ಟರ್​ಗಳನ್ನ ಮಾತ್ರ ನಗರದೊಳಗೆ ಬಿಡಲು ಪೊಲೀಸರು ತೀರ್ಮಾನಿಸಿದ್ದಾರೆ.

    ಒಟ್ಟು 125 ಟ್ರ್ಯಾಕ್ಟರ್​ಗಳ ನಂಬರ್​ಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಆಯಾ ಏರಿಯಾದಿಂದ ಇಂತಿಷ್ಟು ಟ್ರ್ಯಾಕ್ಟರ್​ಗೆ ನಗರ ಪ್ರವೇಶಿಸಲು ಅನುಮತಿ ಕೊಟ್ಟಿದ್ದಾರೆ. ಆಯಾ ನಂಬರ್ ಪ್ಲೇಟ್​ವುಳ್ಳ ಟ್ರ್ಯಾಕ್ಟರ್​ಗಳನ್ನು ಒಳಬಿಡಲಿದ್ದಾರೆ. ಕೆ.ಆರ್. ಪುರ ಮಾರ್ಗವಾಗಿ ಒಟ್ಟು 50 ಟ್ರ್ಯಾಕ್ಟರ್, ಮೈಸೂರು ರಸ್ತೆ ಮಾರ್ಗವಾಗಿ 50, ಕನಕಪುರ ಮಾರ್ಗವಾಗಿ 12 ಸೇರಿದಂತೆ ಒಟ್ಟು 125 ಟ್ರ್ಯಾಕ್ಟರ್​ಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಇದನ್ನೂ ಓದಿರಿ ಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಬೆಂಗಳೂರಿನತ್ತ ಲಗ್ಗೆಯಿಟ್ಟ ಸಾವಿರಾರು ಟ್ರ್ಯಾಕ್ಟರ್, ಆದ್ರೆ ರಾಜಧಾನಿಗೆ ಎಂಟ್ರಿಗೂ ಕಂಡೀಷನ್ ಉಂಟು!125 ಟ್ರ್ಯಾಕ್ಟರ್ ಜೊತೆಯಲ್ಲಿ ಪೊಲೀಸರೂ ಇರುತ್ತಾರೆ. ಟ್ರ್ಯಾಕ್ಟರ್​ಗಳಿಗೆ ಹೊಯ್ಸಳ ಮೂಲಕ ಮಾರ್ಗ ತೋರಿಸಲಾಗುತ್ತೆ. ಸೂಚಿಸಿದ ಮಾರ್ಗದಲ್ಲಿ ಮಾತ್ರವೇ ಟ್ರ್ಯಾಕ್ಟರ್​ಗಳು ಸಂಚಾರ ಮಾಡಬೇಕು. ಟ್ರ್ಯಾಲಿ ತರುವಂತಿಲ್ಲ. ಕೇವಲ ಟ್ರ್ಯಾಕ್ಟರ್ ಇಂಜಿನ್​ಗೆ ಮಾತ್ರವೇ ಅನುಮತಿ ನೀಡಲಾಗಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ದಿಗ್ವಿಜಯ ನ್ಯೂಸ್​ಗೆ ಮಾಹಿತಿ ಲಭ್ಯವಾಗಿದೆ.

    ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರತಿಭಟನಾ‌ ಪರೇಡ್‌: ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್‌

    ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

    ಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಧಾರವಾಡದಲ್ಲಿ ಅಪಘಾತ: ಸಾವಲ್ಲೂ ಒಂದಾದ ಬಾಲ್ಯ ಸ್ನೇಹಿತೆಯರು, ಅವರ ಮಕ್ಕಳೇ ಹೊರತಂದ ಈ ವಿಡಿಯೋ ಮನಕಲಕುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts