More

    ವಿವಾದಿತ ಕೃಷಿ ಕಾಯ್ದೆಗಳು ರದ್ದು; ಗದ್ದಲದ ನಡುವೆ ಮಸೂದೆ ಅಂಗೀಕರಿಸಿದ ಸರ್ಕಾರ

    ನವದೆಹಲಿ: ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ರೈತ ಸಂಘಟನೆಗಳಿಂದ ಭಾರೀ ವಿರೋಧ ಎದುರಿಸುತ್ತಿದ್ದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಇಂದು ಸಂವಿಧಾನಾತ್ಮಕ ರೀತಿಯಲ್ಲಿ ರದ್ದುಗೊಳಿಸಿದೆ. ಈ ಕಾನೂನುಗಳ ರದ್ದತಿಗೆ ಮಂಡಿಸಲಾದ ಮಸೂದೆಯನ್ನು ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

    2020ರ ಆಗಸ್ಟ್​ ತಿಂಗಳಿಂದ ಸಂಯುಕ್ತ ಕಿಸಾನ್​ ಮೋರ್ಚಾ ನೇತೃತ್ವದಲ್ಲಿ ಅನೇಕ ರೈತ ಸಂಘಟನೆಗಳು ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದವು. ಸಾವಿರಾರು ರೈತರು ದೆಹಲಿಯ ಗಡಿ ಭಾಗಗಳಲ್ಲಿ ಮೊಕ್ಕಾಂ ಹೂಡಿದ್ದರು. ಇದೇ ನ.20 ರಂದು ಪ್ರಧಾನಿ ನರೇಂದ್ರ ಮೋದಿ ಈ ಕಾನೂನುಗಳನ್ನು ವಾಪಸ್​ ಪಡೆಯಲಾಗುವುದೆಂದು ಘೋಷಿಸಿ, ಪ್ರತಿಭಟನಾ ನಿರತ ರೈತರಿಗೆ ಮನೆಗಳಿಗೆ ವಾಪಸಾಗಲು ಹೇಳಿದ್ದರು.

    ಇದನ್ನೂ ಓದಿ: “ರೈತರ ಏಳಿಗೆಗೆ ಹಿನ್ನಡೆ… ಕೃಷಿ ಸುಧಾರಣೆಗಳ ಬಾಗಿಲು ಮುಚ್ಚಿದ ಹಾಗಾಗಿದೆ”

    ಇಂದು ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆಯನ್ನು ಮಂಡಿಸಿದಾಗ ಸಂಸತ್​ ಅಧಿವೇಶನದಲ್ಲಿ ಶಾಂತಿ ಕಾಪಾಡುವಂತೆ ಸ್ಪೀಕರ್​ ಓಂ ಬಿರ್ಲಾ ಮನವಿ ಮಾಡಿದರು. ಆದರೆ, ಮಸೂದೆ ಅಂಗೀಕರಿಸುವ ಮುನ್ನ ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದ ವಿರೋಧ ಪಕ್ಷಗಳ ಸಂಸದರು, ಘೋಷಣೆಗಳನ್ನು ಕೂಗುತ್ತಾ ಗದ್ದಲ ಎಬ್ಬಿಸಿದರು. ಗದ್ದಲದ ನಡುವೆಯೇ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಧ್ವನಿಮತಗಳೊಂದಿಗೆ ಅಂಗೀಕರಿಸಲಾಯಿತು.

    ಲೋಕಸಭೆಯಲ್ಲಿ ಈ ರದ್ದತಿ ಮಸೂದೆ ಅಂಗೀಕಾರವಾದ ನಂತರ ರಾಜ್ಯಸಭೆಯಲ್ಲೂ ಮಸೂದೆಯನ್ನು ಅಂಗೀಕರಿಸಲಾಯಿತು. ಇದೀಗ ಮೂರು ಕೃಷಿ ಕಾನೂನುಗಳು ಅಧಿಕೃತವಾಗಿ ರದ್ದಾಗಿವೆ. (ಏಜೆನ್ಸೀಸ್)

    ಆರು ದಿನಗಳಲ್ಲಿ ಮೂರನೇ ಜೀವ ಬೆದರಿಕೆ! ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂದ ಇ-ಮೇಲ್​!

    ಲಸಿಕೆಗೆ ಹೆದರಿ ಮನೆ ಮಾಳಿಗೆ ಏರಿದ! ಅಧಿಕಾರಿಗಳೂ ಏಣಿ ಹತ್ತಿದರು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts