More

    “ರೈತರ ಏಳಿಗೆಗೆ ಹಿನ್ನಡೆ… ಕೃಷಿ ಸುಧಾರಣೆಗಳ ಬಾಗಿಲು ಮುಚ್ಚಿದ ಹಾಗಾಗಿದೆ”

    ಮುಂಬೈ: ರೈತರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಮಧ್ಯವರ್ತಿಗಳ ನಿರ್ಮೂಲನೆ ಮತ್ತು ಇತರ ಕೃಷಿ ಸುಧಾರಣೆಗಳನ್ನು ತರುವುದಕ್ಕಾಗಿ ಮೂರು ಕೃಷಿ ಕಾನೂನುಗಳನ್ನು ರಚಿಸಿದ್ದೇವೆ ಎಂದು ಪ್ರತಿಪಾದಿಸುತ್ತಾ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅವನ್ನು ವಾಪಸ್​ ಪಡೆಯುವ ನಿರ್ಧಾರ ಘೋಷಿಸಿದ್ದಾರೆ. ಪಂಜಾಬ್​, ಹರಿಯಾಣ ಮತ್ತು ಉತ್ತರಪ್ರದೇಶ ಮುಂತಾದ ಉತ್ತರದ ರಾಜ್ಯಗಳಲ್ಲಿ ಹೆಚ್ಚಾಗಿ ಪ್ರತಿಭಟನೆಯನ್ನು ಎದುರಿಸಿದ ಈ ಕಾನೂನುಗಳನ್ನು ಈ ರಾಜ್ಯಗಳಲ್ಲಿ ಬರಲಿರುವ ಚುನಾವಣೆಗಳ ದೃಷ್ಟಿಯಿಂದ ಹಿಂಪಡೆಯಲಾಗಿದೆ ಎಂದು ರಾಜಕೀಯ ಪರಿಣಿತರು ಹೇಳುತ್ತಿದ್ದಾರೆ.

    ಇಂದು ಕೃಷಿ ಕಾನೂನುಗಳನ್ನು ಹಿಂಪಡೆಯುವ ನಿರ್ಧಾರವನ್ನು ಘೋಷಿಸಿದಾಗ ಖುದ್ದು ಪ್ರದಾನಿ ಮೋದಿ ಅವರೇ ಅವು ರೈತರ ಅನುಕೂಲಕ್ಕಾಗಿ ಮಾಡಲ್ಪಟ್ಟಿದ್ದವು. ಆದರೆ ಅದರ ಮಹತ್ವವನ್ನು ಎಷ್ಟು ಪ್ರಯತ್ನ ಮಾಡಿದರೂ ಒಂದು ವರ್ಗದ ರೈತರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಹಲವರು ಈ ನಿರ್ಧಾರವನ್ನು ರೈತರ ಗೆಲುವೆಂದು ಸ್ವಾಗತಿಸಿದ್ದಾರಾದರೂ, ಬಿಜೆಪಿಯಲ್ಲೇ ಹಲವು ನಾಯಕರು ಈ ನಿರ್ಧಾರವನ್ನು ಅರಗಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಸುಪ್ರೀಂ ಕೋರ್ಟ್​ನಿಂದ ನೇಮಕವಾಗಿರುವ ಕೃಷಿ ತಂಡದ ಸದಸ್ಯ ಅನಿಲ್​ ಘನವತ್​ ಅವರು, ಪ್ರಧಾನಿಯ ಈ ನಿರ್ಧಾರವು ಕೃಷಿ ಕ್ಷೇತ್ರಕ್ಕೆ ಭಾರೀ ಹಿನ್ನಡೆ ತರಲಿದೆ. “ರೈತರ ಏಳಿಗೆಯ ಬದಲು ರಾಜಕಾರಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ” ಎಂದಿದ್ದಾರೆ.

    ಇದನ್ನೂ ಓದಿ: ಅವಳಿ ಮಕ್ಕಳ ಅಮ್ಮನಾದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ- ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಖುಷಿಯ ಕ್ಷಣ

    “ಇದು ಪ್ರಧಾನಿ ನರೇಂದ್ರ ಮೋದಿಯವರ ಅತ್ಯಂತ ಪ್ರತಿಗಾಮಿ ಹೆಜ್ಜೆಯಾಗಿದೆ, ಏಕೆಂದರೆ ಅವರು ರೈತರ ಅಭ್ಯುದಯದ ಸ್ಥಾನದಲ್ಲಿ ರಾಜಕೀಯವನ್ನು ಆರಿಸಿಕೊಂಡಿದ್ದಾರೆ” ಎಂದು ಘನವತ್ ಆರೋಪಿಸಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. “ನಮ್ಮ ಸಮಿತಿಯು ಮೂರು ಕೃಷಿ ಕಾನೂನುಗಳ ಮೇಲೆ ಹಲವಾರು ತಿದ್ದುಪಡಿಗಳು ಮತ್ತು ಪರಿಹಾರಗಳನ್ನು ಸಲ್ಲಿಸಿತ್ತು. ಅವುಗಳನ್ನು ಬಳಸಿ ಬಿಕ್ಕಟ್ಟನ್ನು ಪರಿಹರಿಸುವ ಬದಲು, ಪಿಎಂ ಮೋದಿ ಮತ್ತು ಬಿಜೆಪಿ ಹಿಂದೆ ಸರಿಯಲು ನಿರ್ಧರಿಸಿದೆ. ಅವರು ಚುನಾವಣೆಗಳನ್ನು ಗೆಲ್ಲಲು ಬಯಸುತ್ತಾರೆ. ಬೇರೇನೂ ಇಲ್ಲ” ಎಂದು ಘನವತ್ ಹೇಳಿದ್ದಾರೆ.

    ಶೆಟ್ಕರಿ ಸಂಘಟನೆಯ ಅಧ್ಯಕ್ಷರಾದ ಘನ್ವತ್, ”ಸುಪ್ರೀಂ ಕೋರ್ಟ್‌ಗೆ ನಮ್ಮ ಶಿಫಾರಸುಗಳನ್ನು ಸಲ್ಲಿಸಿದ್ದರೂ, ಈ ಸರಕಾರ ಅದನ್ನು ಓದಿಲ್ಲ ಎಂದು ತೋರುತ್ತಿದೆ. ಕೃಷಿ ಕಾನೂನುಗಳನ್ನು ಹಿಮ್ಮೆಟ್ಟಿಸುವ ನಿರ್ಧಾರವು ಸಂಪೂರ್ಣವಾಗಿ ರಾಜಕೀಯಪೂರಿತವಾಗಿದೆ – ಮುಂದಿನ ತಿಂಗಳುಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗಳನ್ನು ಗೆಲ್ಲುವ ಗುರಿ ಹೊಂದಿದೆ” ಎಂದಿದ್ದಾರೆ. ಜೊತೆಗೆ, “ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವು ಈಗ ಕೃಷಿ ಮತ್ತು ಅದರ ಮಾರುಕಟ್ಟೆ ವಲಯದಲ್ಲಿನ ಎಲ್ಲಾ ರೀತಿಯ ಸುಧಾರಣೆಗಳ ಬಾಗಿಲುಗಳನ್ನು ಮುಚ್ಚಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಮೂರು ಕೃಷಿ ಕಾನೂನು ವಾಪಸ್​: ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ

    ‘ಪಕ್ಷದ(ಬಿಜೆಪಿ) ರಾಜಕೀಯ ಹಿತಾಸಕ್ತಿಗೆ ರೈತರ ಹಿತಾಸಕ್ತಿ ಬಲಿಯಾಗಿದೆ’ ಎಂದು ಆರೋಪಿಸಿದ ಘನವತ್​​, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಕೇಂದ್ರ ಕೃಷಿ ಸಚಿವರಾಗಿದ್ದಾಗ ಇದೇ ರೀತಿಯ ಸುಧಾರಣೆಗಳಿಗೆ ಒತ್ತಾಯಿಸಿದ್ದರು, ಆದರೆ ರಾಜಕೀಯ ಕಾರಣಗಳಿಗಾಗಿ, ಅವರೂ ನಂತರ ಈ ಕಾನೂನುಗಳನ್ನು ವಿರೋಧಿಸಿದರು. ರೈತರ ಸಂಘಟನೆಯಾಗಿ ನಾವು ಈ ವಿಷಯದ ಬಗ್ಗೆ ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    VIDEO| ಹಳೇ ಡೈಲಾಗ್​ ನೆನಪಿಸಿ ರೈತರನ್ನು ಅಭಿನಂದಿಸಿದ ರಾಹುಲ್​ ಗಾಂಧಿ!

    ‘ವಿದೂಷಕ’ ವೀರ್​ ದಾಸ್​ಗೆ ನಮ್ಮ ರಾಜ್ಯಕ್ಕೆ ಪ್ರವೇಶವಿಲ್ಲ​ ಎಂದ ಗೃಹ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts