More

    ಚೆನ್ನೈ ಸೂಪರ್‌ಕಿಂಗ್ಸ್ ಸೋಲಿನ ಬಳಿಕ ಭಾರಿ ಟ್ರೋಲ್ ಆದ ಕೇದಾರ್ ಜಾಧವ್

    ಬೆಂಗಳೂರು: ಸತತ 3 ಪಂದ್ಯಗಳ ಬಳಿಕ ಗೆಲುವು ಕಂಡ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್ 13ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಿಂದ ಮೇಲೇಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಬುಧವಾರ ಕೋಲ್ಕತ ನೈಟ್‌ರೈಡರ್ಸ್‌ ವಿರುದ್ಧ ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಮತ್ತೊಮ್ಮೆ ಲಯ ತಪ್ಪಿದೆ. ಸಿಎಸ್‌ಕೆ ತಂಡದ ಈ ಸೋಲಿಗೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಇದರಿಂದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೂ ಒಳಗಾಗಿದ್ದಾರೆ.

    168 ರನ್ ಗುರಿ ಬೆನ್ನಟ್ಟುತ್ತಿದ್ದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಉತ್ತಮ ಆರಂಭದ ಬಳಿಕ ಕೊನೆಯಲ್ಲಿ 21 ಎಸೆತಗಳಲ್ಲಿ 39 ರನ್ ಗಳಿಸುವ ಸವಾಲು ಹೊಂದಿತ್ತು. ಆಗ ಕಣಕ್ಕಿಳಿದ ಕೇದಾರ್ ಜಾದವ್ ಬಿರುಸಿನ ಆಟವಾಡಿದ್ದರೆ ಸಿಎಸ್‌ಕೆಗೆ ಸುಲಭವಾಗಿ ಗೆಲುವು ಒಲಿಯುತ್ತಿತ್ತು. ಆದರೆ ರನ್ ಗಳಿಸಲು ಪರದಾಡಿದ ಅವರು, 12 ಎಸೆತಗಳಲ್ಲಿ 7 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದರಿಂದಾಗಿ ಸಿಟ್ಟಾಗಿರುವ ಸಿಎಸ್‌ಕೆ ಅಭಿಮಾನಿಗಳು, ‘ಏಕಾಂಗಿಯಾಗಿ ಕೆಕೆಆರ್ ತಂಡವನ್ನು ಗೆಲ್ಲಿಸಿದ ಕೇದಾರ್ ಜಾಧವ್ ನಿಜಕ್ಕೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರು’ ಎಂದು ಟ್ರೋಲ್ ಮಾಡಿದ್ದಾರೆ.

    ಇದನ್ನೂ ಓದಿ: ಡೆನ್ಮಾರ್ಕ್​ ಓಪನ್​ನಿಂದ ಹಿಂದೆ ಸರಿದ ಗಂಡ-ಹೆಂಡತಿ! ಜನವರಿವರೆಗೆ ಕಣಕ್ಕಿಳಿಯಲ್ಲ

    ತಂಡದ ಗೆಲುವಿಗೆ ಬಿರುಸಿನ ಆಟದ ಅಗತ್ಯವಿದ್ದರೂ, ಟೆಸ್ಟ್ ಕ್ರಿಕೆಟ್ ಮಾದರಿಲ್ಲಿ ಕೆಕೆಆರ್ ಬೌಲರ್‌ಗಳ ಎಸೆತಗಳನ್ನು ಡಿೆಂಡ್ ಮಾಡಿಕೊಂಡ ಕೇದಾರ್ ಜಾಧವ್ ನಡೆಯೂ ಟೀಕೆಗೆ ಗುರಿಯಾಗಿದೆ. ಜಾಧವ್ ಬ್ಯಾಟಿಂಗ್‌ಗೆ ಇಳಿದಾಗ ಇನ್ನು ಎದುರಾಳಿ ತಂಡಗಳು ಸಂಭ್ರಮಿಸುತ್ತವೆ ಎಂದೂ ಸಿಎಸ್‌ಕೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಅವರಿಗೆ ಯಾಕೆ 7.8 ಕೋಟಿ ರೂಪಾಯಿ ಮೊತ್ತದ ಸಂಭಾವನೆ ನೀಡಬೇಕು ಎಂದೂ ಪ್ರಶ್ನಿಸಿದ್ದಾರೆ. ಟೂರ್ನಿಯ ಹಿಂದಿನ ಪಂದ್ಯಗಳಲ್ಲೂ ಅವರಿಂದ ಉಪಯುಕ್ತ ಬ್ಯಾಟಿಂಗ್​ ನಿರ್ವಹಣೆ ಬಂದಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts