More

    ಸೈಫ್​ ಬೇಡ; ರಾಣಾ ಇರಲಿ … ಪ್ರಭಾಸ್​ಗೆ ಅಭಿಮಾನಿಗಳ ಮನವಿ

    ಮುಂಬೈ: ಓಂ ರೌತ್​ ನಿರ್ದೇಶನದ ‘ಆದಿಪುರುಷ್​’ ಎಂಬ ಚಿತ್ರದಲ್ಲಿ ಪ್ರಭಾಸ್​, ರಾಮನಾಗಿ ನಟಿಸುತ್ತಿರುವುದು ಗೊತ್ತಿದೆ. ಇನ್ನು ರಾವಣನಾಗಿ ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ನಟಿಸುತ್ತಿರುವ ವಿಷಯ ಸಹ ಗೊತ್ತಿರಬಹುದು. ಆದರೆ, ಇದೀಗ ಆ ಪಾತ್ರಕ್ಕೆ ಸೈಫ್​ ಅಲಿ ಖಾನ್​ ಬೇಡ, ರಾಣಾ ದಗ್ಗುಬಾಟಿ ಇರಲಿ ಎಂದು ಪ್ರಭಾಸ್​ ಅವರ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನಿಗೆ ಒತ್ತಾಯ ಮಾಡುತ್ತಿರುವ ಸುದ್ದಿಯೊಂದು ಕೇಳಿ ಬರುತ್ತಿದೆ.

    ಇದಕ್ಕೂ ಮುನ್ನ, ಓಂ ರೌತ್​, ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ತಾನಾಜಿ’ ಎಂಬ ಚಿತ್ರ ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಸೈಫ್​ ಜತೆಗೆ ಕೆಲಸ ಮಾಡಿದ್ದರು. ಓಂ ಮತ್ತು ಸೈಫ್​ ನಡುವೆ ಒಳ್ಳೆಯ ಸ್ನೇಹ ಇರುವುದರಿಂದ ಮತ್ತು ರಾವಣನ ಪಾತ್ರಕ್ಕೆ ಸೈಫ್​ ಬಹಳ ಚೆನ್ನಾಗಿ ಒಪ್ಪುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಈ ಪಾತ್ರ ಮಾಡುವುದಕ್ಕೆ ಕೇಳಿಕೊಂಡಿದ್ದರು. ಇನ್ನು ಸೈಫ್​ ಸಹ ಕಥೆ ಕೇಳಿ ಸೂಪರ್​ ಎಕ್ಸೈಟ್​ ಆಗಿ, ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರಂತೆ.

    ಇದನ್ನೂ ಓದಿ: ತಾಯಿಯ ಹೆಸರಲ್ಲಿ ಒಂದೊಳ್ಳೆಯ ಕೆಲಸ ಮಾಡುವುದಕ್ಕೆ ಹೊರಟಿದ್ದಾರೆ ಸೋನು …

    ಆದರೆ, ಇದೀಗ ಎಲ್ಲಾ ಸೆಟ್​ ಆಯಿತು ಎನ್ನುವಷ್ಟರಲ್ಲಿ ಪ್ರಭಾಸ್​ ಅಭಿಮಾನಿಗಳು, ಈ ಚಿತ್ರಕ್ಕೆ ಸೈಫ್​ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಅವರ ಬದಲು ರಾಣಾ ದಗ್ಗುಬಾಟಿ ಅವರನ್ನು ಹಾಕಿಕೊಳ್ಳಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರಂತೆ. ತೀರಾ ಅಭಿಮಾನಿಗಳ ಮಾತನ್ನು ಕೇಳಿ ಸೈಫ್​ ಅಲಿ ಖಾನ್​ ಅವರನ್ನು ಚಿತ್ರತಂಡದವರು ಕಿತ್ತು ಹಾಕುತ್ತಾರೆ ಎಂದು ನಂಬುವುದು ಕಷ್ಟ.

    ಆದರೂ ಪ್ರಭಾಸ್​ ಅವರ ಅಭಿಮಾನಿಗಳಿಗೆ ಯಾಕೆ ಸೈಫ್​ ಅಲಿ ಖಾನ್​ ಬೇಡವಾಗಿದ್ದಾರೆ ಎಂಬುದಕ್ಕೆ ಕೆಲವು ಕಾರಣಗಳಿವೆ. ಪ್ರಮುಖವಾಗಿ, ಸೈಫ್​ಗೆ ಭಾರತೀಯ ಪುರಾಣ ಮತ್ತು ಇತಿಹಾಸದ ಬಗ್ಗೆ ಹೆಚ್ಚು ಗೊತ್ತಿಲ್ಲ ಎಂದು ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಸುಶಾಂತ್ ಸಿಂಗ್​ ರಜಪೂತ್​ ಮತ್ತು ಸಾರಾ ಅಲಿ ಖಾನ್​ ಪ್ರೀತಿಗೆ ಸೈಫ್​ ಅಡ್ಡ ಬಂದರು ಎಂಬ ಕಾರಣಕ್ಕೆ ಅವರನ್ನು ಬೇಡ ಎನ್ನುವ ಅಭಿಮಾನಿಗಳಿದ್ದಾರೆ.

    ಇದನ್ನೂ ಓದಿ: ‘ರೈಡರ್​​’ ಮೋಷನ್​ ಪೋಸ್ಟರ್​ಗೆ ಒಂದು ಮಿಲಿಯನ್​ ಹಿಟ್ಸ್​

    ಎಲ್ಲಕ್ಕಿಂತ ಹೆಚ್ಚಾಗಿ, ಪ್ರಭಾಸ್​ ಎದುರು ಸೈಫ್​ ಪೇಲವವಾಗಿ ಕಾಣಿಸುವುದರಿಂದ ಮತ್ತು ಇಂಥದ್ದೊಂದು ಪಾತ್ರಕ್ಕೆ ರಾಣಾ ದಗ್ಗುಬಾಟಿ ಹೇಳಿ ಮಾಡಿಸುವಂತೆ ಇರುವುದರಿಂದ ಅವರೇ ಈ ಪಾತ್ರಕ್ಕೆ ಸೂಕ್ತ ಎಂದು ಪ್ರಭಾಸ್​ ಅವರ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಚಿತ್ರತಂಡದವರು ಮಾತ್ರ ಅಭಿಮಾನಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡದೆ, ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ.

    ಈ ಚಿತ್ರವನ್ನು ಟಿ-ಸೀರೀಸ್​ನ ಭೂಷಣ್​ ಕುಮಾರ್​ ನಿರ್ಮಿಸುತ್ತಿದ್ದು, ಸದ್ಯಕ್ಕೆ ಪ್ರೀ-ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿವೆ. ಚಿತ್ರದ ಬಹುತೇಕ ಭಾಗದಲ್ಲಿ ಗ್ರಾಫಿಕ್ಸ್​ ಇರುವುದರಿಂದ, ಈಗಾಗಲೇ ವಿಎಫ್​ಎಕ್ಸ್​ ಕೆಲಸಗಳು ಶುರುವಾಗಿವೆ ಎಂದು ಹೇಳಲಾಗುತ್ತಿದೆ. ಬಹುಶಃ 2021ರ ಮಧ್ಯಭಾಗದಲ್ಲಿ ಈ ಚಿತ್ರ ಪ್ರಾರಂಭವಾಗಿ 2022ರಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

    ರಾಮ್​ಚರಣ್​ ಆಯ್ತು, ಈಗ ಅಖಿಲ್​ … ಇನ್ನೊಂದು ಚಿತ್ರದಲ್ಲಿ ರಶ್ಮಿಕಾ ಹೆಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts