More

    ಶಾರುಖ್​ 55ನೇ ಬರ್ತಡೇಗೆ ಅಭಿಮಾನಿಗಳಿಂದ 5555 ಸ್ಯಾನಿಟೈಸರ್​ ಮತ್ತು ಮಾಸ್ಕ್​ ವಿತರಣೆ

    ಮುಂಬೈ: ಬಾಲಿವುಡ್​ ಬಾದ್ಶಾ ಸಿನಿಮಾ ಮಾಡದೆ ಎರಡು ವರ್ಷಗಳಾದವು. ಜೀರೋ ಸಿನಿಮಾ ಪ್ಲಾಪ್​ ಆದ ಬಳಿಕ ಬೇರಾವ ಚಿತ್ರ ಒಪ್ಪಿಕೊಳ್ಳದೆ, ಸುದೀರ್ಘ ಎರಡು ವರ್ಷ ನಟನೆಯಿಂದ ಹಿಂದೆ ಸರಿದಿದ್ದರು. ನಿರ್ಮಾಣ ಸೇರಿ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇಷ್ಟೆಲ್ಲ ಆದರೂ ಅಭಿಮಾನಿಗಳು ಮಾತ್ರ, ಶಾರುಖ್​ ಸಿನಿಮಾ ಘೋಷಣೆಗಾಗಿ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ನ. 2 ಸಹ ಬಂದೇ ಬಿಟ್ಟಿದೆ. ಅಭಿಮಾನಿಗಳು ಶಾರುಖ್​ ಜನ್ಮದಿನವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ.

    ಇದನ್ನೂ ಓದಿ: ಶಾರುಖ್​ ಹುಟ್ಟುಹಬ್ಬಕ್ಕೆ ಜೂಹಿ ಚಾವ್ಲಾ ಕಡೆಯಿಂದ ಮನಮೆಚ್ಚುವ ಕಾರ್ಯ

    ಇಂದು ಶಾರುಖ್​ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಆ ಸಂಭ್ರಮದ ಕ್ಷಣಕ್ಕೆ ಅವರ ಅಭಿಮಾನಿಗಳು ವಿಶೇಷ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದಾರೆ. ಇಲ್ಲಿಯವರೆಗೂ ಶಾರುಖ್​ ಜನ್ಮದಿನ ಅಂದ ಬಳಿಕ ಬಾಂದ್ರಾದಲ್ಲಿನ ಮನ್ನತ್​ ಮನೆಯ ಬಾಲ್ಕನಿ ಮೇಲೆ ನಿಂತು ಸಾವಿರಾರು ಅಭಿಮಾನಿಗಳಿಗೆ ಕೈ ಬೀಸಿ ದರ್ಶನ ಕೊಡುತ್ತಿದ್ದರು. ಇದೀಗ ಕರೊನಾ ಹಿನ್ನೆಲೆಯಲ್ಲಿ ಆ ಸಂಭ್ರಮವನ್ನು ವರ್ಚುವಲ್​ ಮೂಲಕ ಆಚರಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ.

    ಶಾರುಖ್​ ಫ್ಯಾನ್​ ಕ್ಲಬ್​ ವತಿಯಿಂದ 5555 ಮಾಸ್ಕ್​, ಸ್ಯಾನಿಟೈಸರ್​, ಮತ್ತು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಂಚಿಕೆ ಕಾರ್ಯವೂ ಶುರುವಾಗಿದ್ದು, ಅಭಿಮಾನಿ ಸಂಘದವರು ತಾವು ಮಾಡುತ್ತಿರುವ ಕೆಲಸವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಕನ್ನಡದಲ್ಲಿ ಡಬ್​ ಆಗಿ ತೆರೆಕಾಣಲಿದೆ ಎಸ್​ಪಿಬಿ ಸಿನಿಮಾ

    ಅಂದಹಾಗೆ, ಸದ್ಯ ಶಾರುಖ್​ ಕುಟುಂಬದ ಜತೆ ದುಬೈನಲ್ಲಿದ್ದಾರೆ. ಬರ್ತಡೇ ನಿಮಿತ್ತ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಅವರು, ‘ಈ ಸಲದ ನಿಮ್ಮ ಪ್ರೀತಿಯನ್ನು ಕೊಂಚ ದೂರದಿಂದಲೇ ಸ್ವೀಕರಿಸಲಿದ್ದೇನೆ’ ಎಂದು ಮನವಿ ಮಾಡಿದ್ದರು. ಅದರಂತೆ ವರ್ಚುವಲ್​ ಪಾರ್ಟಿಯನ್ನೂ ಅಭಿಮಾನಿಗಳು ಆಯೋಜಿಸಿದ್ದಾರೆ. ಇತ್ತ ದೇಶದ ಹಲವೆಡೆ ವಿಭಿನ್ನ ರೀತಿಯಲ್ಲಿ ಶಾರುಖ್​ ಹುಟ್ಟುಹಬ್ಬವನ್ನು ಫ್ಯಾನ್ಸ್ ಆಚರಿಸುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts