More

    ಸುಶಾಂತ್​ ಕೇಸ್​ ಸಿಬಿಐಗೆ ಯಾಕೆ ಒಪ್ಪಿಸುತ್ತಿಲ್ಲ? ಅಭಿಮಾನಿಗಳ ಪ್ರಶ್ನೆ …

    ಸುಶಾಂತ್​ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಕ್ಕೆ ದಿನದಿಂದಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ರಾಜ್ಯಸಭಾ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡಿದ್ದರು.

    ಇದನ್ನೂ ಓದಿ: ಕೆಜಿಎಫ್​ ಖಳನ ಕ್ರೌರ್ಯ ಕೌತುಕ!; ದತ್​ ಜನ್ಮದಿನಕ್ಕೆ ವಿಶೇಷ ಗಿಫ್ಟ್

    ಈಗ ಸುಶಾಂತ್​ ಸಿಂಗ್​ ಅಭಿಮಾನಿಗಳು ಸಹ ಈ ಬಗ್ಗೆ ಪಟ್ಟು ಹಿಡಿದಿದ್ದಾರೆ. ಜೂನ್​ 14ರಂದು ಸುಶಾಂತ್​ ಸಿಂಗ್​ ರಜಪೂತ್​, ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಂತರ, ಆ ಕೇಸನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅವರ ಅಭಿಮಾನಿಗಳು ಆಗ್ರಹಿಸಿದ್ದರು. ಆದರೆ, ಕಾರಣಾಂತರಗಳಿಂದ ಸಿಬಿಐಗೆ ಇನ್ನೂ ಕೇಸ್​ ಹಸ್ತಾಂತರಿಸಲಾಗಿಲ್ಲ.

    ಈ ನಿಟ್ಟಿನಲ್ಲಿ ಅಭಿಮಾನಿಗಳು ಬೀದಿಗೆ ಇಳಿದಿದ್ದಾರೆ. ಕೆಲವರು ಈ ನಿಟ್ಟಿನಲ್ಲಿ, ದೆಹಲಿಯ ಬೀದಿಬೀದಿಗಳಲ್ಲಿ ಹೋರ್ಡಿಂಗ್​ಗಳನ್ನು ಹಾಕಿದ್ದಾರೆ. ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವನ್ನು ಯಾಕೆ ಕಡೆಗಣಿಸಲಾಗುತ್ತಿದೆ, ಈ ಪ್ರಕರಣವನ್ನು ಇನ್ನೂ ಯಾಕೆ ಸಿಬಿಐಗೆ ಹಸ್ತಾಂತರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಈ ಹೋರ್ಡಿಂಗ್​ಗಳು ಇದೀಗ ಇಂಟರ್​ನೆಟ್​ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಹೋರ್ಡಿಂಗ್​ ಹಾಕಿದ್ದಷ್ಟೇ ಅಲ್ಲ, ಆ ಹೋರ್ಡಿಂಗ್​ನ ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ, ಸುಶಾಂತ್​ ಅವರ ಹಲವು ಅಭಿಮಾನಿಗಳು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಬಿಗ್​ಬಾಸ್​ ಶೋ ವಿರುದ್ಧ ಗಂಭೀರ ಆರೋಪ ಮಾಡಿದ ಕಿರಾತಕ ಬೆಡಗಿ ಓವಿಯಾ!

    ಈ ಮಧ್ಯೆ, ಸುಶಾಂತ್​ ಸಾವಿನ ಪ್ರಕರಣವನ್ನು ಮುಂಬೈ ಪೊಲೀಸ್​ ನಡೆಸುತ್ತಿದ್ದು, ಇದುವರೆಗೂ 37 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಖ್ಯಾತ ನಿರ್ದೇಶಕರಾದ ಆದಿತ್ಯ ಚೋಪ್ರಾ, ಸಂಜಯ್​ ಲೀಲಾ ಬನ್ಸಾಲಿ ಮುಂತಾದವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಮಹೇಶ್​ ಭಟ್​, ಕಂಗನಾ ರಣಾವತ್​ ಸೇರಿದಂತೆ ಇನ್ನಷ್ಟು ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಲಾಗುತ್ತಿದೆ.

    ಚಾಲೆಂಜಿಂಗ್​ ಸ್ಟಾರ್ ದರ್ಶನ್ ‘ರಾಬರ್ಟ್’​ ತಂಡದಿಂದ ಬಂತು ಹೊಸ ಪೋಸ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts