ಹೈದರಾಬಾದ್: ಟಾಲಿವುಡ್ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯ ಭಾರದ್ವಾಜ್ ಅವರು ಆಂಟಿ ಪದದ ವಿವಾದಕ್ಕೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ. ಆಂಟಿ ಎಂಬ ಪದ ಕೇಳಿದರೆ ಸಾಕು ಅನಸೂಯ ಅವರಿಗೆ ಕೋಪ ನೆತ್ತಿಗೆ ಏರುತ್ತದೆ. ಯಾರಾದರೂ ಆಂಟಿ ಎಂದು ಕರೆದರೆ ಮೊದಲು ಅವರಿಗೆ ತಿಳಿ ಹೇಳಿ ಎಂದಿದ್ದಾರೆ.
ಆಂಟಿ ಎಂದು ಕರೆದರೆ ನನಗೇನು ಬೇಸರವಿಲ್ಲ ಎಂದಿರುವ ಅನಸೂಯ ಒಂದನ್ನು ಸ್ಪಷ್ಟಪಡಿಸಿದ್ದಾರೆ. ಗಡ್ಡ ಮತ್ತು ಮೀಸೆ ಬೆಳೆದಿರುವವರು ಆಂಟಿ ಎಂದು ಕರೆದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸಣ್ಣ ಮಕ್ಕಳು ಆಂಟಿ ಎಂದು ಕರೆದರೆ ಓಕೆ. ಆದರೆ, ವಿವಾಹಿತ ಯುವಕರು ಆಂಟಿ ಎಂದು ಕರೆಯುತ್ತಾರೆ. ಇದನ್ನು ಸಹಿಸಲು ಆಗುವುದಿಲ್ಲ ಎಂದಿದ್ದಾರೆ. ಆದಾಗ್ಯೂ ಕೆಲ ನೆಟ್ಟಿಗರು ಅನಸೂಯಾ ಅವರನ್ನು ಗುರಿಯಾಗಿಸಿಕೊಂಡು ಆಂಟಿ ಎಂದು ಕರೆಯುತ್ತಾರೆ. ಇದೀಗ ಅನಸೂಯ ಅವರಿಗೆ ಮನವರಿಕೆಯಾಗಿದ್ದು, ಎಷ್ಟೇ ಹೇಳಿದರೂ ಆಂಟಿ ಎಂದೇ ಕರೆಯುವವರನ್ನು ತಿದ್ದಲು ಆಗುವುದಿಲ್ಲ. ಅಂತವರನ್ನು ನಿರ್ಲಕ್ಷಿಸುವುದೇ ಒಳಿತು ಎಂದಿದ್ದಾರೆ.
ಇದನ್ನೂ ಓದಿ: ಸಿಹಿತಿಂಡಿ ಜತೆಗೆ 500 ರೂ. ನೋಟುಗಳನ್ನು ಬಡಿಸಿದ ಅಂಬಾನಿ ಕುಟುಂಬ! ಇಲ್ಲಿದೆ ನೋಟಿನ ಅಸಲಿಯತ್ತು
ಇತ್ತೀಚೆಗೆ ಅನಸೂಯ ಅಭಿಮಾನಿಗಳ ಜತೆ ಮತ್ತೊಮ್ಮೆ ಇನ್ಸ್ಟಾಗ್ರಾಂನಲ್ಲಿ ಸಂವಾದ ನಡೆಸಿದ್ದಾರೆ. ಸಹೋದರಿ, ನಿಮ್ಮ ಆಂಟಿ ಎಂದರೆ ನಿಮಗೇಕೆ ತುಂಬಾ ಕೋಪ ಬರುತ್ತದೆ? ಎಂದು ಅಭಿಮಾನಿಯೊಬ್ಬ ಅನಸೂಯ ಅವರನ್ನು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಅನಸೂಯ ಈ ಮೇಲೆ ಹೇಳಿದಂತೆ ಉತ್ತರಿಸಿದ್ದಾರೆ.
ಆಗ ತುಂಬಾ ಕೋಪ ಬರುತ್ತಿತ್ತು. ಈಗ ನನಗೆ ಕೋಪ ಬರುವುದಿಲ್ಲ. ಏಕೆಂದರೆ, ಅದನ್ನು ಅವರವರ ಹಣೆಬರಹಕ್ಕೆ ಬಿಟ್ಟಿದ್ದೇನೆ. ಅದಲ್ಲದೆ, ನಾನು ಮಾಡಬೇಕಿರುವ ಕೆಲಸ ಬೇಕಾದಷ್ಟಿದೆ. ಹೀಗಾಗಿ ನಾನು ಇಂತಹ ವಿಚಾರಗಳು ಹಾಗೂ ಕೆಟ್ಟ ಕಾಮೆಂಟ್ಗಳ ಮೇಲಿನ ಗಮನವನ್ನು ನಿಲ್ಲಿಸಿದ್ದೇನೆ ಎಂದು ಅನಸೂಯ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹೊಸ ಸಿನಿಮಾ ಬಗ್ಗೆಯೂ ಅನಸೂಯ ಮಾತನಾಡಿದ್ದಾರೆ. ಏಪ್ರಿಲ್ ಎರಡನೇ ವಾರದಲ್ಲಿ ಹೊಸ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಎಂದಿದ್ದಾರೆ. ಅಲ್ಲದೆ, ತಾನೋರ್ವ ಸಂಪೂರ್ಣ ಸಸ್ಯಹಾರಿ ಮತ್ತು ಯಾವುದೇ ಕಾರಣಕ್ಕೂ ಮಾಂಸಾಹಾರ ಸೇವನೆ ಮಾಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಯಾರು ಹಿತವರು ನಿನಗೆ?; ಹೊಂದಾಣಿಕೆಗೆ ಪ್ರಾಶಸ್ತ್ಯವಿಲ್ಲದ ಬದುಕು ಬದುಕಲ್ಲ
ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಅವರು ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪುಷ್ಪ-2 ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಕೃಷ್ಣ ವಂಶಿ ನಿರ್ದೇಶನದ ರಂಗ ಮಾರ್ತಾಂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಸೂಯ ನಟಿಸಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅನಸೂಯ ಸದಾ ಸಕ್ರಿಯರಾಗಿದ್ದು, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿರುತ್ತಾರೆ. (ಏಜೆನ್ಸೀಸ್)
ಸಲಿಂಗ ಕಾಮದ ಅನುಭವವಿದೆಯೇ? ನೆಟ್ಟಿಗನ ಪ್ರಶ್ನೆಗೆ ಅನಸೂಯ ಕೊಟ್ಟ ಬೋಲ್ಡ್ ಉತ್ತರ ವೈರಲ್
ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್ಗೆ ನಟಿ ಕಸ್ತೂರಿ ಖಡಕ್ ತಿರುಗೇಟು
ಅಕ್ಕ or ಆಂಟಿ ಎಂದು ಕರೆಯಬೇಕೆ? ನೆಟ್ಟಿಗನ ಪ್ರಶ್ನೆಗೆ ಖ್ಯಾತ ನಿರೂಪಕಿ ಅನಸೂಯಾ ಉತ್ತರ ಹೀಗಿತ್ತು….