More

    ಕೊನೆಯ ಬಾರಿಯೂ ಮಗನನ್ನು ಕಣ್ತುಂಬಿಕೊಳ್ಳಲಾಗಲಿಲ್ಲ… ಮನೆಯಲ್ಲಿದ್ದರೂ ಪತ್ನಿಯನ್ನು ಸಂತೈಸಲಿಲ್ಲ ಕರೊನಾ ಸೇನಾನಿ

    ಲಕ್ನೋ: ಕರೊನಾ ‘ಸೇನಾನಿಗಳು’ ಹೆಸರಷ್ಟೇ ಅಲ್ಲ, ಕರ್ತವ್ಯದ ಸ್ವರೂಪವೂ ಅದೇ ಮಾದರಿಯದ್ದು. ಗಡಿಯಲ್ಲಿ ರಕ್ಷಣೆಗೆ ನಿಂತರೆ ಯಾವುದಕ್ಕೂ ಜಗ್ಗದೇ ಕರ್ತವ್ಯವೇ ದೇವರೆಂದು ತಿಳಿದು ಮುಂದುವರಿಯಲೇ ಬೇಕು. ಅಂತೆಯೇ, ಕರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಟ ಮಾಡುತ್ತಿರುವವರೂ ಕೂಡ ಎಂಥದ್ದೇ ಪರಿಸ್ಥಿತಿ ಎದುರಾದರೂ ಹಿಮ್ಮೆಟ್ಟುವಂತಿಲ್ಲ.

    ಕರೊನಾ ಸೇನಾನಿಯಾಗಿ ಆತ ರೋಗಿಗಳ ಸೇವೆಯಲ್ಲಿ ನಿರತವಾಗಿದ್ದರೆ, ಅಲ್ಲಿ ಆತನ ಮೂರು ವರ್ಷದ ಮಗ ಮತ್ತೊಂದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ.

    ಇದನ್ನೂ ಓದಿ; ಭಾರತದಲ್ಲೂ ಸಜ್ಜಾಗುತ್ತಿದೆ ಕೋವಿಡ್​19ಗೆ ರಾಮಬಾಣ

    ಇಲ್ಲಿನ ಲೋಕಬಂಧು ಸರ್ಕಾರಿ ಆಸ್ಪತ್ರೆಯ ಐಸೋಲೇಷನ್​ ವಾರ್ಡ್​ನಲ್ಲಿ ವಾರ್ಡ್​ಬಾಯ್​ ಆಗಿರುವ ಮನಿಷ್​ಕುಮಾರ್​ ಕೆಲಸದಲ್ಲಿದ್ದಾಗಲೇ ಆತನ ಮಗ ತೀವ್ರ ಅನಾರೋಗ್ಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಬರುತ್ತದೆ. ಆದರೆ, ಕೆಲಸ ಮುಗಿಸದೇ ತೆರಳುವಂತಿರಲಿಲ್ಲ. ಹೀಗಾಗಿ ಬೇರೆಯವರಿಗೆ ವಿಷಯ ತಿಳಿಸದೆ ಮನೀಷ್​ ಕೆಲಸ ಮುಂದುವರಿಸಿದ್ದ. ಆತನ ಕರ್ತವ್ಯ ಮುಗಿಯುವ ವೇಳೆಗೆ ಮಗ ಇಹಲೋಕವನ್ನೇ ತ್ಯಜಿಸಿದ್ದ.

    ಮನೆಗೆ ತೆರಳಿದರೂ, ಶವವನ್ನೂ ಹತ್ತಿರದಿಂದ ನೋಡುವಂತಿಲ್ಲ. ಮೃತದೇಹವನ್ನು ಮುಟ್ಟುವುದು ಬೇಡ ಏಕೆಂದರೆ, ಉಳಿದವರು ಅದನ್ನು ಮುಟ್ಟಿ ಅಂತಿಮ ವಿಧಿವಿಧಾನ ಪೂರೈಸುತ್ತಾರೆ. ಅವರಿಗೆ ತೊಂದರೆಯಾಗುವುದು ಬೇಡ ಎಂದು ಆತನಿಗೆ ಹಿರಿಯರು ಹೇಳಿದ್ದರು. ಹೀಗಾಗಿ ಆತ ಎಲ್ಲವನ್ನೂ ದೂರದಿಂದಲೇ ನೋಡುತ್ತಾನೆ.

    ಇದನ್ನೂ ಓದಿ; ಜೂನ್​ 1ರ ಹೊತ್ತಿಗೆ ದಿನಕ್ಕೆ 3,000 ಸಾವು, 2 ಲಕ್ಷ ಹೊಸ ಪ್ರಕರಣ….!

    ಇನ್ನು, ಮನೆಯ ಒಳಗೆ ಪ್ರವೇಶಿಸುವಂತಿಲ್ಲ. ವರಾಂಡದಲ್ಲಿಯೇ ಆತನ ವಾಸ. ಮಗನನ್ನು ಕಳೆದುಕೊಂಡಿರುವ ಪತ್ನಿಯನ್ನ ಸಂತೈಸಲಿಕ್ಕಾಗದ ದುಸ್ಥಿತಿ. ಏಕೆಂದರೆ ಆಕೆಯಿಂದಲೂ ದೂರವೇ ಇದ್ದಾನೆ. ಅಯ್ಯೋ ದುರ್ವಿಧಿಯೇ ಎಂದು ಹಳಿಯುವಂತಿಲ್ಲ. ಏಕೆಂದರೆ ಕರ್ತವ್ಯವೇ ಪರಮೋದೈವ. ಮತ್ತೆ ಕೆಲಸಕ್ಕೆ ಮರಳಬೇಕಿದೆ. ಹೀಗಾಗಿ ಮನೆಯವರು ಸುರಕ್ಷಿತವಾಗಿರಲಿ ಎಂಬುದಷ್ಟೇ ಆತನ ಬಯಕೆ.

    ಜಮ್ಮು ಕಾಶ್ಮೀರದಲ್ಲಿ 148 ವರ್ಷಗಳ ‘ದರ್ಬಾರ್​’ಗೆ ಬೀಳುತ್ತಾ ಬ್ರೇಕ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts