More

    ಕರೊನಾ ಲಸಿಕೆ ಹೆಸರಲ್ಲಿ ಸೃಷ್ಟಿಯಾಗಿವೆ ಸಾವಿರಾರು ನಕಲಿ ವೆಬ್​ಸೈಟ್​ಗಳು! ದುಡ್ಡು ಕೀಳ್ತಾರೆ ಹುಷಾರ್​!

    ಬೆಂಗಳೂರು : ವರ್ಷವೀಡಿ ಕಾಡಿದ ಕೋವಿಡ್-19ಗೆ ಲಸಿಕೆ ಬರುತ್ತಿದಂತೆ ಡಾರ್ಕ್‌ನೆಟ್‌ನಲ್ಲಿ ನಕಲಿ ವೆಬ್‌ಸೈಟ್ ತೆರೆದು ಲಸಿಕೆ ಮಾರಾಟದ ಸೋಗಿನಲ್ಲಿ ವಂಚನೆ ಮಾಡಲು ಸೈಬರ್ ಕಳ್ಳರು ಅವಣಿಸುತ್ತಿದ್ದಾರೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು 1,185 ಜನರಲ್ಲಿ ಕರೊನಾ ಸೋಂಕು ಪತ್ತೆ; 11 ಮಂದಿ ಸಾವು

    ಜಾಗತಿಕ ಸೈಬರ್ ಸೆಕ್ಯೂರಿಟಿ ಸಂಸ್ಥೆಯಾದ ಚೆಕ್ ಪಾಯಿಂಟ್ ಸಂಶೋಧನೆ ಕೇಂದ್ರ ಇತ್ತೀಚೆಗೆ ವರದಿ ಬಿಡುಗಡೆ ಮಾಡಿದೆ. ಕೋವಿಡ್-19ನೇ ಲಸಿಕೆ ಸಂಶೋಧನೆ ಅಂತಿಮ ಹಂತದಲ್ಲಿ ಇರುವುದನ್ನೇ ಮುಂದಿಟ್ಟುಕೊಂಡು ಸೈಬರ್ ಕಳ್ಳರು, ನವೆಂಬರ್‌ನಲ್ಲಿ ಡಾರ್ಕ್ ವೆಬ್‌ಸೈಟ್‌ನಲ್ಲಿ 1 ಸಾವಿರಕ್ಕೂ ಅಧಿಕ ವೆಬ್‌ಸೈಟ್ ನೋಂದಣಿ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೂ ನೋಂದಣಿ ಆಗಿರುವ ವೆಬ್‌ಸೈಟ್‌ಗಳಲ್ಲಿ 1062 ವೆಬ್‌ಸೈಟ್‌ಗಳು ವ್ಯಾಕ್ಸಿನ್ ಎಂಬ ಪದ ಬಳಕೆ ಮಾಡಿದ್ದು, 400 ವೆಬ್‌ಸೈಟ್‌ಗಳನ್ನು ಕೋವಿಡ್ ಎಂಬ ಪದ ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

    ಇದನ್ನೂ ಓದಿ: VIDEO| ಯಾರದ್ದೋ ಕಾರ್​​ ರೇಸ್​ಗೆ ಬಲಿಯಾದ ಯುವಕ! ಬೆಚ್ಚಿ ಬೀಳಿಸುತ್ತೆ ಈ ದೃಶ್ಯ

    ಡಾರ್ಕ್ ನೆಟ್‌ನಲ್ಲಿ ನಾನಾ ಬಗೆಯ ಜಾಹೀರಾತು ಕೊಡುತ್ತಿರುವ ವಂಚಕರು, ಇಡೀ ವರ್ಷ ಕಾಡಿದ ಕೋವಿಡ್-19 ವೈರಸ್‌ಗೆ ಬೈ ಬೈ ಹೇಳಿ. ವ್ಯಾಕ್ಸಿನ್‌ಗೆ ಹಾಯ್ ಹಾಯ್ ಹೇಳಿ. ಬೇಗ ಬೇಗ ಲಸಿಕೆಗೆ ಬುಕ್ ಮಾಡಿ ಎಂದು ಆಕರ್ಷಕ ಜಾಹೀರಾತು ನೀಡುತ್ತಿವೆ.

    ಆಫ್​​ಲೈನ್ ಮತ್ತು ಆನ್‌ಲೈನ್‌ನಲ್ಲಿಯೂ ಲಸಿಕೆ ದೊರೆಯಲಿದೆ. ಆದರೆ, ವಹಿವಾಟು ಗೌಪ್ಯವಾಗಿ ಇಟ್ಟುಕೊಳ್ಳುವ ಸಲುವಾಗಿ ಬಿಟ್ ಕಾಯಿನ್‌ನಲ್ಲಿ ಹಣ ಸಂದಾಯ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಕೆಲವರು 300 ಡಾಲರ್ ಕೊಟ್ಟು 14 ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ಸುಳ್ಳು ಹೇಳಿ ಜನರನ್ನು ಸೆಳೆಯಲು ಮುಂದಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಸುಳ್ಳು ಜಾಹೀರಾತುಗಳನ್ನು ನಂಬಬೇಡಿ ಎಂದು ಸೈಬರ್ ಸೆಕ್ಯೂರಿಟಿ ಸಂಸ್ಥೆ ಸಲಹೆ ನೀಡಿದೆ.

    ಇದನ್ನೂ ಓದಿ: ಮಕ್ಕಳ ಮೆರವಣಿಗೆ ಮೇಲೆಯೇ ಚಲಿಸಿದ ಲಾರಿ! ನಾಲ್ವರು ಮಕ್ಕಳು ಬಲಿ, 12 ಜನರಿಗೆ ಗಾಯ

    ಈ ಮೊದಲೇ ಯೂರೋಪ್ ಪೊಲೀಸರು, ಕೋವಿಡ್-19 ಲಸಿಕೆ ಬಂದರೆ ಯಾವುದೇ ಕಾರಣಕ್ಕೂ ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಸೈಬರ್ ಕಳ್ಳರು ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್‌ನಿಂದಲೇ ಡಾರ್ಕ್ ನೆಟ್‌ನಲ್ಲಿ ನಕಲಿ ವೆಬ್‌ಸೈಟ್ ತೆರೆದು ಬಲೆಬೀಸಿವೆ. ಇತ್ತೀಚೆಗೆ ಲಸಿಕೆ ಸಂಶೋಧನೆ ಪೂರ್ಣಗೊಂಡಿರುವುದು ಖಚಿತವಾಗುತ್ತಿದಂತೆ ನವೆಂಬರ್ ಒಂದೇ ತಿಂಗಳಲ್ಲಿ 1 ಸಾವಿರಕ್ಕೂ ಅಧಿಕ ವೆಬ್‌ಸೈಟ್ ನೋಂದಣಿ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ.

    ಜೀವಂತ ಗೂಬೆ ತಲೆ ಕತ್ತರಿಸಿದ ಆರೇ ತಿಂಗಳಲ್ಲಿ ಯುವತಿಗೆ ಬಂತು ಘೋರ ಸಾವು: ಜೀವಿಯ ಶಾಪ ತಟ್ಟಿತಾ?!

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts