ಎಳನೀರು ನಿಜವಾಗ್ಲೂ ಕ್ಯಾನ್ಸರ್​ ಓಡಿಸುತ್ತಾ? ಇಲ್ಲಿದೆ ವಾಟ್ಸ್​ಆ್ಯಪ್​ ಸುದ್ದಿಯ ಅಸಲಿಯತ್ತು…

blank

ಬೆಂಗಳೂರು: ಕೆಲವು ದಿನಗಳಿಂದ ವಾಟ್ಸ್​ಆ್ಯಪ್​ನಲ್ಲಿ ಎಳನೀರು ಕುಡಿದು ಕ್ಯಾನ್ಸರ್​ ಗುಣಪಡಿಸಬಹುದು ಎನ್ನುವ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ. ಈ ಸಂದೇಶದಲ್ಲಿ ಎಳನೀರನ್ನು ಬಿಸಿ ಮಾಡಿ ಕುಡಿದರೆ ಅದು ಕ್ಯಾನ್ಸರ್​ಗೆ ರಾಮಬಾಣ ಎಂದು ಬರೆದು ಜನರ ದಿಕ್ಕು ತಪ್ಪಿಸುತ್ತಿದೆ.

blank

ಎಳನೀರು ನಿಜವಾಗ್ಲೂ ಕ್ಯಾನ್ಸರ್​ ಓಡಿಸುತ್ತಾ? ಇಲ್ಲಿದೆ ವಾಟ್ಸ್​ಆ್ಯಪ್​ ಸುದ್ದಿಯ ಅಸಲಿಯತ್ತು…ಬಿಪಿ ನಿಯಂತ್ರಿಸುತ್ತೆ, ನರದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತೆ ಎಂದೆಲ್ಲಾ ಈ ಸಂದೇಶದಲ್ಲಿ ಬರೆಯಲಾಗಿದ್ದು ಅವುಗಳ ಜೊತೆಗೆ ಬಿಸಿ ಎಳನೀರು ಕುಡಿದರೆ ಕ್ಯಾನ್ಸರ್​ ಗುಣಪಡಿಸಬಹುದು. ಇದು ಸದ್ಯ ಬಳಕೆಯಲ್ಲಿ ಇರುವ ಅತ್ಯಾಧುನಿಕ ತಂತ್ರ ಎಂದು ಬರೆಯಲಾಗಿತ್ತು. ಈ ಸಂದೇಶವನ್ನು ಟಾಟಾ ಮೆಮೊರಿಯಲ್​ ಆಸ್ಪತ್ರೆಯ ಡಾ| ರಾಜೇಂದ್ರ ಹೆಸರಲ್ಲಿ ಹರಿ ಬಿಡಲಾಗಿತ್ತು.

ಈ ಬಗ್ಗೆ ಟಾಟಾ ಮೆಮೊರಿಯಲ್​ ಆಸ್ಪತ್ರೆ ಪತ್ರಿಕಾಗೋಷ್ಟಿ ಮೂಲಕ ಪ್ರತಿಕ್ರಿಯೆ ನೀಡಿದ್ದು ಪತ್ರದಲ್ಲಿ ಈ ಸುದ್ದಿ ಸುಳ್ಳು. ಟಾಟಾ ಮೆಮೊರಿಯಲ್​ ಆಸ್ಪತ್ರೆ ಅಥವಾ ಡಾ|ರಾಜೇಂದ್ರ ಈ ವಿಧಾನವನ್ನು ಒಪ್ಪುವುದಿಲ್ಲ. ಅದಲ್ಲದೇ ಬಿಸಿ ಎಳನೀರು ಕುಡಿದರೆ ಯಾವುದೇ ರೀತಿಯ ಕ್ಯಾನ್ಸರ್​ ಗುಣಪಡಿಸಬಹುದು ಎನ್ನುವ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಇದ್ದು ಸುಳ್ಳು ಸುದ್ದಿ. ಜನರು ಇಂತಹ ಸುದ್ದಿಗಳನ್ನು ನಂಬಬಾರದು ಎಂದು ಸ್ಪಷ್ಟನೆ ನೀಡಿದೆ. (ಏಜೆನ್ಸೀಸ್​)ಎಳನೀರು ನಿಜವಾಗ್ಲೂ ಕ್ಯಾನ್ಸರ್​ ಓಡಿಸುತ್ತಾ? ಇಲ್ಲಿದೆ ವಾಟ್ಸ್​ಆ್ಯಪ್​ ಸುದ್ದಿಯ ಅಸಲಿಯತ್ತು…

Share This Article
blank

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

blank