More

    ಭಾರತದ ಅಳಿಯ ರಿಷಿ ಸುನಕ್​ ಭೇಟಿ ಮಾಡಿದ ಪ್ರಧಾನಿ ಮೋದಿ…

    ಬಾಲಿ: ಪ್ರಧಾನಿ ಮೋದಿ ನಿನ್ನೆ ಸಂಜೆ ಇಂಡೋನೆಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಗೆ ತೆರಳಿದ್ದಾರೆ. ಬಾಲಿಯಲ್ಲಿ ಇಳಿಯುತ್ತಿದ್ದಂತೆ ಮೋದಿಗೆ ಭವ್ಯ ಸ್ವಾಗತವೂ ಸಿಕ್ಕಿತ್ತು. ಈಗ ಅನೇಕ ಜಾಗತಿಕ ನಾಯಕರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಭಾಷಣೆ ನಡೆಸುತ್ತಿರುವ ಮೋದಿ ಈಗ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ರನ್ನೂ ಭೇಟಿ ಮಾಡಿದ್ದಾರೆ.

    ಈ ಬಗ್ಗೆ ಪ್ರಧಾನಿ ಕಾರ್ಯಾಲಯ ‘ಪ್ರಧಾನಿ ಮೋದಿ ಮತ್ತು ಪ್ರಧಾನಿ ರಿಷಿ ಸುನಕ್​ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗದಲ್ಲಿ ಮಾತುಕತೆ ನಡೆಸುತ್ತಿದ್ದಾರೆ’ ಎಂದು ಟ್ವೀಟ್​ ಮಾಡಿದೆ.

    ಮೋದಿ ಮತ್ತು ಸುನಕ್​ ಇದೇ ಮೊದಲ ಬಾರಿ ಭೇಟಿ ಆಗುತ್ತಿದ್ದು ಇದಕ್ಕೂ ಮೊದಲು, ಅಕ್ಟೋಬರ್‌ನಲ್ಲಿ ಅವರು ಫೋನ್‌ ಮೂಲಕ ಮಾತನಾಡಿದ್ದರು. ಈ ಸಂದರ್ಭದಲ್ಲಿ ಮತ್ತು ಎರಡೂ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡಿದ್ದರು.

    ಸೋಮವಾರ ಬಾಲಿಗೆ ತೆರಳಿದ್ದ ಪ್ರಧಾನಿ ಮೋದಿ, ಸೆನೆಗಲ್ ದೇಶದ ಅಧ್ಯಕ್ಷ ಮ್ಯಾಕಿ ಸಾಲ್, ನೆದರ್‌ಲ್ಯಾಂಡ್‌ನ ಪ್ರಧಾನಿ ಮಾರ್ಕ್ ರುಟ್ಟೆ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡನ್​ರನ್ನು ಭೇಟಿಯಾದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts