More

    ಸರ್ಕಾರಿ ಆಸ್ಪತ್ರೆಯ ಎಡವಟ್ಟಿನಿಂದಾಗಿ ಯುವ ಪುಟ್ಬಾಲ್​ ಆಟಗಾರ್ತಿ ದುರಂತ ಸಾವು: ಸರ್ಕಾರದ ವಿರುದ್ಧ ಅಣ್ಣಾಮಲೈ ಆಕ್ರೋಶ

    ಚೆನ್ನೈ: ಕಳೆದ ವಾರ ಸರ್ಕಾರಿ ಆಸ್ಪತ್ರೆಯಲ್ಲಿ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 18 ವರ್ಷದ ಯುವ ಫುಟ್​ಬಾಲ್​​ ಆಟಗಾರ್ತಿ ಪ್ರಿಯಾ ಬಹು ಅಂಗಾಂಗ ವೈಫಲ್ಯದಿಂದ ಇಂದು (ನ.15) ಮುಂಜಾನೆ ಸಾವಿಗೀಡಾಗಿರುವ ದುರಂತ ಘಟನೆ ಚೆನ್ನೈನಲ್ಲಿ ನಡೆದಿದೆ. ಅಸ್ಥಿರಜ್ಜು ಚಿಕಿತ್ಸೆಯಿಂದ ಉಂಟಾದ ಸಮಸ್ಯೆಯಿಂದ ಅನಿವಾರ್ಯವಾಗಿ ಕಾಲು ಕತ್ತರಿಸ ಬೇಕಾಯಿತು. ಇದರ ಬೆನ್ನಲ್ಲೇ ಪ್ರಿಯಾ ಕೊನೆಯುಸಿರೆಳೆದಿದ್ದಾಳೆ.

    ಈ ಘಟನೆಯ ಬೆನ್ನಲ್ಲೇ ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್​ ಪ್ರಿಯಾ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು, ಒಡಹುಟ್ಟಿದವರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನು ನೀಡಿದ್ದಾರೆ.

    ನವೆಂಬರ್ 7 ರಂದು ಪೆರಿಯಾರ್ ನಗರದ ಸರ್ಕಾರಿ ಪೆರಿಫೆರಲ್ ಆಸ್ಪತ್ರೆಯಲ್ಲಿ ಪ್ರಿಯಾ, ತನ್ನ ಬಲ ಮೊಣಕಾಲಿನ ಅಸ್ಥಿರಜ್ಜುಗಳನ್ನು ಸರಿಪಡಿಸಲು ಆರ್ತ್ರೋಸ್ಕೊಪಿಕ್ ಪ್ರಕ್ರಿಯೆಗೆ ಒಳಗಾಗಿದ್ದಳು. ಆದರೆ, ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಲು ಕತ್ತರಿಸುವುದು ಅನಿವಾರ್ಯ ಆದ ಕಾರಣ ಕಾಲನ್ನು ತೆಗೆದು ತೀವ್ರ ನಿಗಾ ಘಟಕದಲ್ಲಿ ಪ್ರಿಯಾಳನ್ನು ಇರಿಸಲಾಗಿತ್ತು. ಪ್ರಜ್ಞಾಹೀನಳಾಗಿದ್ದ ಪ್ರಿಯಾ, ಇಂದು ಮುಂಜಾನೆ 7.15ರ ಸಮಯದಲ್ಲಿ ಮೃತಪಟ್ಟಿದ್ದಾಳೆ. ಹೃದಯ, ಕಿಡ್ನಿ ಮತ್ತು ಲಿವರ್​ ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಪ್ರಿಯಾ ಸಾವಿಗೀಡಾಗಿದ್ದಾಳೆ.

    ಈ ಘಟನೆ ಬೆನ್ನಲ್ಲೇ ತಮಿಳುನಾಡು ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಟ್ವೀಟ್ ಮಾಡಿ, “ಫುಟ್ಬಾಲ್ ಆಟಗಾರ್ತಿ ಪ್ರಿಯಾ ಅವರು ತಪ್ಪು ಚಿಕಿತ್ಸೆಯಿಂದಾಗಿ ಸಾವನ್ನಪ್ಪಿದ್ದಾರೆಂದು ತಿಳಿದು ನನಗೆ ಆಘಾತವಾಗಿದೆ. ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಈ ಡಿಎಂಕೆ ಆಡಳಿತದಲ್ಲಿ ಪ್ರತಿಯೊಂದು ಇಲಾಖೆಯೂ ನಾಶವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. (ಏಜೆನ್ಸೀಸ್​)

    36ನೇ ವಸಂತಕ್ಕೆ ಕಾಲಿಟ್ಟ ಸಾನಿಯಾ ಮಿರ್ಜಾ: ಪತ್ನಿಯ ಹುಟ್ಟುಹಬ್ಬಕ್ಕೆ ಶೋಯಿಬ್​ ಮಾಡಿದ ಟ್ವೀಟ್​ ವೈರಲ್​!

    ಪ್ರೇಮ ವಿವಾಹಕ್ಕೆ ಅಡ್ಡಿಯಾದ ಪೋಷಕರು; ಮುಂದೆ ನಿಂತು ಮದುವೆ ಮಾಡಿಸಿದ ಪೊಲೀಸರು!

    ಜೆಡಿಎಸ್ ಭದ್ರಕೋಟೆ ಮೇಲೆ ಕೇಂದ್ರ ಬಿಜೆಪಿ ನಾಯಕರ ಕಣ್ಣು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts