More

    FACT CHECK | ದುಬೈ ಏರ್​ಪೋರ್ಟ್​ ರನ್​ವೇ ಕ್ರಿಸ್ಮಸ್​​ ಟ್ರೀ ಲೈಟಿಂಗ್​ನಲ್ಲಿ ಅಲಂಕೃತವಾಗಿದೆಯಾ?

    ನವದೆಹಲಿ: ದುಬೈ ಏರ್​ಪೋರ್ಟ್ ರನ್​ವೇ ಕ್ರಿಸ್ಮಸ್ ಟ್ರೀ ಮಾದರಿಯ ಲೈಟಿಂಗ್​ನಲ್ಲಿ ಅಲಂಕೃತಗೊಂಡಿದೆ ಎಂಬ ಫೋಟೋ ಶೀರ್ಷಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಾರಿತಪ್ಪಿಸುವಂತಹ ಫೇಸ್​ಬುಕ್ ಪೋಸ್ಟ್​ ಅನ್ನು ಬಹಳಷ್ಟು ಜನ ಲೈಕ್ ಮಾಡಿದ್ದು, ಶೇರ್ ಕೂಡ ಮಾಡಿಕೊಂಡಿದ್ದಾರೆ.

    ಫೋಟೋವನ್ನು ಇಮೇಜ್​ ರಿವರ್ಸ್ ಸರ್ಚ್​ಗೆ ಒಳಪಡಿಸಿದಾಗ ಅದು ಐರ್ಲೆಂಡ್​ನ ಶನಾನ್​ ಏರ್​ಪೋರ್ಟ್​ನ ಟ್ವಿಟರ್ ಹ್ಯಾಂಡಲ್​ನಲ್ಲಿ ಪತ್ತೆ ಆಗಿದೆ. ಅದು ಕ್ರಿಸ್ಮಸ್ ಜಾಹೀರಾತು ಅಭಿಯಾನದ ಭಾಗವಾಗಿ ವಿಮಾನ ನಿಲ್ದಾಣವನ್ನು ಶೃಂಗರಿಸಿದ್ದ ಸಂದರ್ಭದ ಫೋಟೋವಾಗಿತ್ತು. ಫೋಟೋ ಮೇಲೆ “ಶನಾನ್ ಏರ್​ಪೋರ್ಟ್ ಲಾಂಚಸ್ ಫೆಸ್ಟಿವ್ ಕ್ಯಾಂಪೇನ್​…” ಎಂಬ ಶೀರ್ಷಿಕೆಯೂ ಇದೆ.

    ಇದನ್ನೂ ಓದಿ:  ನೇಣು ಹಾಕಿಕೊಂಡವರ ರೀತಿ ಸೆಲ್ಫಿ ತೆಗೆದುಕೊಳ್ಳಲು ಹೋದಳು; ಸ್ವಲ್ಪ ಹೊತ್ತಲ್ಲೇ ಹೆಣವಾಗಿ ನೇಣಿನಲ್ಲಿ ನೇತಾಡುತ್ತಿದ್ದಳು!

    ಶನಾನ್​ ಗ್ರೂಪ್​ ಕೂಡ ಇದನ್ನು ಖಾತರಿಪಡಿಸಿದ್ದು, ಕಠಿಣ ವರ್ಷವೊಂದು ಉರುಳಿ ಹೋಗುತ್ತಿದ್ದು, ಹೊಸ ವರ್ಷ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಐರ್ಲೆಂಡ್​ ಸಾಂಟಾನನ್ನು ಸ್ವಾಗತಿಸಲು ಈ ರೀತಿ ಪರಿಕಲ್ಪನೆಯೊಂದಿಗೆ ವಿಮಾನ ನಿಲ್ದಾಣವನ್ನು ಬೆಳಗಲಾಗಿದೆ ಎಂದು ತಿಳಿಸಿದೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts