More

    ಸೆಕ್ಸ್​ ರಾಕೆಟ್​ನಲ್ಲಿ ಸಿಕ್ಕಿಬಿದ್ದ ಕಾಶ್ಮೀರ ಯುವತಿಯರು: ಈ ಸುದ್ದಿ ನಂಬುವ ಮುನ್ನ ಒಮ್ಮೆ ಓದಿ ಬಿಡಿ!

    ನವದೆಹಲಿ: ಪೊಲೀಸ್​ ಸಿಬ್ಬಂದಿಯೊಂದಿಗೆ ಇರುವ ಕೆಲವು ವ್ಯಕ್ತಿಗಳು ಹಾಗೂ ಮುಖವನ್ನು ಮುಚ್ಚಿಕೊಂಡಿರುವ ಮಹಿಳೆಯರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಫೋಟೋ ಕುರಿತು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್​ ಏರಿಯಾದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಾಶ್ಮೀರಿ ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

    ಅನೇಕ ಫೇಸ್​ಬುಕ್​ ಬಳಕೆದಾರರು ಫೋಟೋವನ್ನು ಶೇರ್​ ಮಾಡಿಕೊಂಡು ಇದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್​ ಏರಿಯಾಗೆ ಸಂಬಂಧಿಸಿದ್ದು ಎಂದೇ ವಾದಿಸಿದ್ದಾರೆ. ಆದರೆ, ಫೋಟೋ ಹಿಂದಿನ ಅಸಲಿಯತ್ತೇ ಬೇರೆ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್​ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

    ಸೆಕ್ಸ್​ ರಾಕೆಟ್​ನಲ್ಲಿ ಸಿಕ್ಕಿಬಿದ್ದ ಕಾಶ್ಮೀರ ಯುವತಿಯರು: ಈ ಸುದ್ದಿ ನಂಬುವ ಮುನ್ನ ಒಮ್ಮೆ ಓದಿ ಬಿಡಿ!

    ಇದನ್ನೂ ಓದಿ: ನನ್ನ ಗಂಡ ಹೀಗಿರಬೇಕು..: ರಾಕುಲ್​ಗೆ ತನ್ನ ಹುಡುಗ ಹೀಗೇ ಇರಬೇಕಂತೆ!

    ಅಂದಹಾಗೆ ವೈರಲ್​ ಆಗಿರುವ ಫೋಟೋ ನಾಲ್ಕು ವರ್ಷ ಹಳೆಯದು. ಇದು ಕುಲ್ಗಾಮ್​ನಲ್ಲಿ ಸೆರೆಹಿಡಿದಿದ್ದಲ್ಲ. ಇದರ ಮೂಲ ಉತ್ತರಾಖಂಡದ ಡೆಹ್ರಾಡೂನ್​. ಇಲ್ಲಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ 6 ಮಂದಿ ಮಹಿಳೆಯರು ಸೇರಿದಂತೆ 8 ಮಂದಿಯನ್ನು 2015ರ ಡಿಸೆಂಬರ್​ನಲ್ಲಿ ಪೊಲೀಸರು ಬಂಧಿಸಿದ್ದರು.

    ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ ಸಹಾಯದಿಂದ ಫೋಟೋವನ್ನು ಹುಡುಕಾಡಿದಾಗ 2015ರಲ್ಲಿ ಅನೇಕ ವೆಬ್​ಸೈಟ್​ನಲ್ಲಿ ವೈರಲ್​ ಫೋಟೋ ಕುರಿತಾದ ಅನೇಕ ವರದಿಗಳು ಪ್ರಕಟವಾಗಿವೆ. 2015ರ ಡಿಸೆಂಬರ್​ನಲ್ಲಿ ದಿ ಟ್ರಿಬ್ಯೂನ್​ ಎಂಬ ವೆಬ್​ಸೈಟ್​ನಲ್ಲಿ ಸುದ್ದಿ ಪ್ರಕಟವಾಗಿದ್ದು, ಇದರ ಪ್ರಕಾರ ಸೆಕ್ಸ್​ ರಾಕೆಟ್​ನಲ್ಲಿ ಭಾಗಿಯಾಗಿದ್ದ 8 ಮಂದಿಯನ್ನು ಡೆಹ್ರಾಡೂನ್​ನ ಕ್ಲೆಮೆಂಟ್​ ಟೌನ್​ ಪೊಲೀಸರು ಬಂಧಿಸಿದ್ದರು ಎಂದು ವರದಿಯಾಗಿದೆ. ನಿವೃತ್ತ ಸೇನಾಧಿಕಾರಿಯೊಬ್ಬರ ಬಾಡಿಗೆ ಮನೆಯಲ್ಲೇ ಲೈಂಗಿಕ ದಂಧೆ ನಡೆಸಲಾಗುತ್ತಿದೆ ಎಂಬುದು ಪ್ರಕರಣದ ತನಿಖೆಯ ನಂತರ ತಿಳಿದುಬಂದಿತ್ತು.

    ಸೆಕ್ಸ್​ ರಾಕೆಟ್​ನಲ್ಲಿ ಸಿಕ್ಕಿಬಿದ್ದ ಕಾಶ್ಮೀರ ಯುವತಿಯರು: ಈ ಸುದ್ದಿ ನಂಬುವ ಮುನ್ನ ಒಮ್ಮೆ ಓದಿ ಬಿಡಿ!

    ಇದನ್ನೂ ಓದಿ: ಹಳ್ಳಿಗೆ ಹೋಗಲು ಧಾವಂತ ಅವಮಾನದ ಆತಂಕ: ತಮ್ಮವರನ್ನೇ ಭೀತಿಯಿಂದ ನೋಡುವಂತಾಗಿಸಿದ ಕರೊನಾ

    ಈ ಹಿಂದೆ 2018ರಲ್ಲಿ ಸ್ಥಳೀಯ ಕಾಶ್ಮೀರಿ ಹುಡುಗಿಯರು ಮತ್ತು ಉನ್ನತ ವ್ಯಕ್ತಿಗಳನ್ನು ಒಳಗೊಂಡ ಲೈಂಗಿಕ ದಂಧೆಯ ಕುಲ್ಗಾಮ್​ನಲ್ಲಿ ನಡೆದಿದ್ದರ ಬಗ್ಗೆ ಸುದ್ದಿಯಾಗಿದ್ದವು. ಆದರೆ, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಫೋಟೋ ಇದಕ್ಕೆ ಸಂಬಂಧಿಸಿದ್ದಲ್ಲ. ಅಲ್ಲದೆ, ಇತ್ತೀಚೆಗೆ ಯಾವುದೇ ಘಟನೆಯಾಗಲಿ ನಡೆದಿಲ್ಲ. ಅಪ್ರಪಚಾರ ಉದ್ದೇಶದಿಂದ ಫೋಟೋವನ್ನು ಹಿರಿಬಿಡಲಾಗಿದೆ. (ಏಜೆನ್ಸೀಸ್​)

    FACT CHECK| ಅಪ್ಪ ರಿಕ್ಷಾ ಓಡಿಸೋ ಏರಿಯಾದಲ್ಲೇ ಮಗಳು ಇನ್ಸ್​ಪೆಕ್ಟರ್​: ಸುದ್ದಿಯ ಅಸಲಿಯತ್ತೇ ಬೇರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts