More

    ಒಂದೇ ಸೂರಿನಡಿ ಸಮಗ್ರ ಮಾಹಿತಿ

    ಒಳ್ಳೆ ಪ್ರದೇಶದಲ್ಲಿ ನಿವೇಶನ ಖರೀದಿಸಿ ಸ್ವಂತದ್ದೊಂದು ಸೂರು ಮಾಡಿಕೊಳ್ಳಬೇಕು ಎಂಬ ಕನಸು ಹೊತ್ತವರಿಗೆ ಇದೊಂದು ಸುವರ್ಣ ಅವಕಾಶ. ಮನೆ ನಿರ್ಮಾಣಕ್ಕೆ ನಿವೇಶನ ಖರೀದಿ, ನಿರ್ಮಾಣ ಹೇಗೆ?, ಸಾಲ ಎಲ್ಲಿ ಪಡೆಯಬೇಕು? ಏನೆಲ್ಲ ದಾಖಲಾತಿ ಬೇಕು? ಹೀಗೆ ಪ್ರತಿಯೊಂದಕ್ಕೂ ಒಂದೊಂದು ಕಡೆ ಓಡಾಡಬೇಕು. ಇಂತಹ ಓಡಾಟ ತಪ್ಪಿಸಿ, ಒಂದೇ ಸೂರಿನಡಿ ಸಮಗ್ರ ಮಾಹಿತಿ ಒದಗಿಸಲು ವಿಜಯವಾಣಿ ಪ್ರಾಪಟಿರ್ ಎಕ್ಸ್​ಪೋ ಆಯೋಜಿಸಿದೆ. ಇಲ್ಲೊಮ್ಮೆ ಭೇಟಿ ನೀಡಿದರೆ ಸಾಕು. ನಿಮ್ಮೆಲ್ಲ ಸಂಶಯಗಳಿಗೆ ಪರಿಹಾರ ಸಿಗಲಿದೆ.
    ಹೊಸೂರ ರಾಯ್ಕರ್​ ಮೈದಾನದಲ್ಲಿ ಭವ್ಯ ಹಾಗೂ ಸಂರ್ಪೂಣ ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ಆಯೋಜಿಸಿರುವ ರಿಯಲ್​ ಎಸ್ಟೇಟ್​ ಮತ್ತು ಇಂಟೀರಿಯರ್ಸ್​ ಎಕ್ಸ್​ಪೋಕ್ಕೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಮೇ 5ರವರೆಗೆ ನಡೆಯಲಿದೆ.
    ಪ್ರಾಪಟಿರ್ ಎಕ್ಸ್​ಪೋ ಆರಂಭವಾಗುವುದನ್ನೇ ಜನರು ಬಹಳ ದಿನಗಳಿಂದ ಕಾಯುತ್ತಿದ್ದರು. ಶುಕ್ರವಾರ ಬೆಳಗ್ಗೆ ಅದ್ಧೂರಿಯಾಗಿ ಉದ್ಘಾಟನೆಯಾಗುತ್ತಿದ್ದಂತೆ ಜನರಲ್ಲಿ ಮಂದಹಾಸ ಮೂಡಿದೆ. ಅನೇಕ ಬಿಲ್ಡರ್​ ಹಾಗೂ ಡೆವಲಪರ್​ಗಳು, ಸಿಮೆಂಟ್​, ಕಬ್ಬಿಣ ಉತ್ಪಾದಕರು, ಡೀಲರ್​ಗಳು, ಮನೆಗಳ ಇಂಟೀರಿಯರ್ಸ್​ ಅಲಂಕಾರಿಕ ವಸ್ತುಗಳ ತಯಾರಕರು, ಬ್ಯಾಂಕ್​, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಮಳಿಗೆಗಳು ಇಲ್ಲಿವೆ.
    ಉದ್ಘಾಟನೆಗೊಂಡ ಮೊದಲ ದಿನವೇ ಎಕ್ಸ್​ಪೋಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿರುವುದು ಆಯೋಜಕರು, ಬಿಲ್ಡರ್​ ಹಾಗೂ ಡೆವಲಪರ್​ಗಳಲ್ಲಿ ಸಂತಸ ಮೂಡಿಸಿದೆ. ಎಕ್ಸ್​ಪೋದಲ್ಲಿ ನಿವೇಶನ, ಮನೆ, ಅಪಾರ್ಟ್​ಮೆಂಟ್​, ಾಮ್​ರ್ ಲ್ಯಾಂಡ್​ ಸೇರಿ ಇತರ ಯೋಜನೆಗಳು ಪ್ರದರ್ಶನಗೊಳ್ಳಲಿದ್ದು, ಇಲ್ಲಿ ಬುಕ್ಕಿಂಗ್​ ಮಾಡುವ ಗ್ರಾಹಕರಿಗೆ ಬಿಲ್ಡರ್ಸ್​, ಡೆವಲಪರ್​ಗಳು ರಿಯಾಯಿತಿ ದರ ನೀಡುತ್ತಿದ್ದಾರೆ. ಇದಲ್ಲದೆ ದ್ವಿ ಚಕ್ರ ವಾಹನ, ೋನ್​ ಸೇರಿ ಇನ್ನೂ ಅನೇಕ ವಿಶೇಷ ಬಹುಮಾನಗಳನ್ನೂ ಘೋಷಿಸಿದ್ದಾರೆ.
    ನಿವೇಶನ, ಮನೆ ಖರೀದಿಸುವ ಜನರಿಗೆ ಆಥಿರ್ಕ ಚಿಂತಯೂ ಇಲ್ಲ. ಆಥಿರ್ಕ ಸಹಾಯ ಕುರಿತು ಅಲ್ಲೇ ಬ್ಯಾಂಕರ್ಸ್​ಗಳು ಮಾಹಿತಿ ನೀಡಲಿದ್ದಾರೆ. ಇದಲ್ಲದೆ ಬಿಲ್ಡರ್ಸ್​, ಡೆವಲಪರ್​ಗಳು ಗ್ರಾಹಕರ ಹಿತ ದೃಷ್ಟಿಯಿಂದ ತಮ್ಮದೇ ಆದ ಯೋಜನೆ ರೂಪಿಸಿ ಕಂತುಗಳಲ್ಲಿ ಸಹ ಖರೀದಿಗೆ ಅವಕಾಶ ಕಲ್ಪಿಸುತ್ತಿರುವುದು ವಿಶೇಷವಾಗಿದೆ.
    *ಒಂದೇ ಸೂರಿನಡಿ 40ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, 200ಕ್ಕೂ ಹೆಚ್ಚು ವಸತಿ ಯೋಜನೆಗಳು, ಅಪಾರ್ಟ್​ಮೆಂಟ್​ಗಳು, ಹು&ಧಾ ಅವಳಿ ನಗರದ ವಿವಿಧ ಕಡೆಗಳಲ್ಲಿ ಈಗಾಗಲೇ ಆರಂಭವಾಗಿರುವ, ಆರಂಭವಾಗಲಿರುವ ವಸತಿ ಯೋಜನೆಗಳು, ವೇಶನಗಳ ಸಮಗ್ರ ಮಾಹಿತಿ ಲಭ್ಯವಾಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts