More

    FACT CHECK | ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ರಾಜನಾಥ್ ಸಿಂಗ್ ಮಾತನಾಡಿದ್ರಾ- ಏನೀ ವಿಡಿಯೋದ ಮರ್ಮ?

    ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಅವರು ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ರಾಜಕೀಯ ನಿಲುವುಗಳೇನೇ ಇದ್ದರೂ ತಾನು ರೈತರ ಪರ ನಿಲ್ಲುವೆ ಎಂದು ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ದೃಶ್ಯ ಅದರಲ್ಲಿದೆ.

    ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿರುವ ಈ ವಿಡಿಯೋದ ಜತೆಗೆ -” ಬಿಗ್ ಬ್ರೇಕಿಂಗ್​ : ಕೃಷಿಕರ ವಿಷಯದಲ್ಲಿ ಬಿಜಪಿಯನ್ನು ಭಾರಿ ಒಡಕು, ರೈತರ ಬೆಂಬಲಕ್ಕೆ ನಿಂತಿದ್ದಾರೆ ರಾಜನಾಥ್ ಸಿಂಗ್​” ಎಂಬ ಹಿಂದಿ ಭಾಷೆಯ ಒಕ್ಕಣೆಯೂ ಅಲ್ಲಿದೆ. ಫೇಸ್​ಬುಕ್​ನಲ್ಲಿರುವ ಪೋಸ್ಟ್​ಗಳ ಲಿಂಕ್ 1 ಮತ್ತು ಲಿಂಕ್ 2 ಇಲ್ಲಿವೆ.

    ಇದನ್ನೂ ಓದಿ: ಪ್ಲೇಸ್ಟೇಷನ್ 5 ತೋರಿಸಿ ಏರ್​ ಪ್ಯೂರಿಫೈಯರ್ ಅಂದ – ಮಾರ್ತೀಯೋ ಇಲ್ಲ ನಿನ್ನೇ ಮಾರಿಬಿಡ್ಲಾ ಅಂದ್ಳು ಹೆಂಡ್ತಿ!

    ವಾಸ್ತವದಲ್ಲಿ ಆ ವಿಡಿಯೋ ಯಾವಾಗದ್ದು ಎಂಬುದನ್ನು ಪತ್ತೆ ಹಚ್ಚಿದಾಗ, 2013ರಲ್ಲಿ ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಿರತರಾಗಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದ ವಿಡಿಯೋ ಅದು. ಅಂದು ಯುಪಿಎ ಆಡಳಿತವಿತ್ತು. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಆಡಳಿತಕ್ಕೆ ಬಂದದ್ದು 2014ರಲ್ಲಿ. ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲೂ ರಾಜನಾಥ್ ಸಿಂಗ್ ಅವರ ಈ ಭಾಷಣ ಲಭ್ಯವಿದ್ದು, 2013ರ ಮಾರ್ಚ್​ 20 ದಿನಾಂಕದಂದು ಅಪ್ಲೋಡ್ ಆಗಿರುವುದು ಕಂಡುಬಂದಿದೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಮೌಂಟ್​ ಎವರೆಸ್ಟ್​ನ ಹೊಸ ಎತ್ತರ 8,848.86 ಮೀಟರ್ : ನೇಪಾಳ, ಚೀನಾ ಜಂಟಿ ಸಮೀಕ್ಷೆಯ ಫಲಿತಾಂಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts