More

    ಅಸಭ್ಯವಾಗಿ ವರ್ತಿಸಿದ ಬಿಜೆಪಿ ಕಾರ್ಯಕರ್ತನ ಕಪಾಳಕ್ಕೆ ಖುಷ್ಬೂ ಬಾರಿಸಿದ್ರಾ? ಇದರ ನಿಜಾಂಶವೇನು?

    ನವದೆಹಲಿ: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳು ನಟಿ, ರಾಜಕಾರಣಿ ಖುಷ್ಬೂ ಸುಂದರ್​ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಅಕ್ಟೋಬರ್​ 12ರಂದು ಬಿಜೆಪಿ ಸೇರಿದ್ದು, ಈ ನಡುವೆ ಖುಷ್ಬೂ ಅವರ ಹಳೆಯ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್​ ಆಗಿದೆ.

    ಅಶ್ಲೀಲವಾಗಿ ವರ್ತಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತನಿಗೆ ಖುಷ್ಬೂ ಕಪಾಳ ಮೋಕ್ಷ ಮಾಡಿದ್ದಾರೆಂದು ವಿಡಿಯೋ ಕುರಿತು ಬರೆಯಲಾಗಿದೆ. ಸೈಯದ್​ ಇಸ್ಮಾಯಿಲ್​ ಎಂಬ ಫೇಸ್​ಬುಕ್​ ಬಳಕೆದಾರ ಅ. 13ರಂದು ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಇದೀಗ ವೈರಲ್​ ಆಗಿದೆ.

    ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ವಿಡಿಯೋ ಕುರಿತ ನಿಜಾಂಶ ಬಹಿರಂಗವಾಗಿದೆ. 2019ರ ಲೋಕಸಭಾ ಚುನಾವಣಾ ಸಮಯದಲ್ಲಿ ಬೆಂಗಳೂರು ಸೆಂಟ್ರಲ್​ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್​ ಅರ್ಷದ್​ ಪರ ರೋಡ್​ ಶೋ ಮಾಡುವಾಗ ಈ ಘಟನೆ ನಡೆದಿದ್ದು, ಆ ವಿಡಿಯೋವನ್ನು ಈಗ ಹರಿಬಿಟ್ಟು ಅಪಪ್ರಚಾರ ಮಾಡಲು ಯತ್ನಿಸಲಾಗಿದೆ.

    ಇದನ್ನೂ ಓದಿ: ಆಗಸದಲ್ಲಿ ವಿಚಿತ್ರ ವಸ್ತು ನೋಡಿ ಬೆಚ್ಚಿಬಿದ್ದ ಉತ್ತರ ಪ್ರದೇಶ ಜನ: ಏಲಿಯನ್​ ಅಂದುಕೊಂಡವರಿಗೆ ಕಾದಿತ್ತು ಶಾಕ್​!

    ಅಸಭ್ಯವಾಗಿ ವರ್ತಿಸಿದ ಬಿಜೆಪಿ ಕಾರ್ಯಕರ್ತನ ಕಪಾಳಕ್ಕೆ ಖುಷ್ಬೂ ಬಾರಿಸಿದ್ರಾ? ಇದರ ನಿಜಾಂಶವೇನು?

    ಇನ್ವಿಡ್​ ಟೂಲ್​ ಮತ್ತು ಸೂಕ್ತ ಕೀವರ್ಡ್ಸ್​ ಸಹಾಯದಿಂದ ವಿಡಿಯೋ ಕುರಿತು ಹುಡುಕಿದಾಗ 2019 ಏಪ್ರಿಲ್​ನಲ್ಲಿ ನಡೆದ ಘಟನೆಯೊಂದು ತೆರೆದುಕೊಳ್ಳುತ್ತದೆ. ಅಲ್ಲದೆ, ಈ ವಿಡಿಯೋ ಕುರಿತು ಸಾಕಷ್ಟು ಮಾಧ್ಯಮಗಳು ಸಹ ವರದಿ ಮಾಡಿದ್ದು, ಏಪ್ರಿಲ್​ 10ರಂದು ರಿಜ್ವಾನ್​ ಅರ್ಷದ್​ ಪರ ಖುಷ್ಬೂ ಪ್ರಚಾರ ಮಾಡಲು ಆಗಮಿಸಿದಾಗ ರೋಡ್​ ಶೋ ವೇಳೆ ವ್ಯಕ್ತಿಯೊಬ್ಬ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ವೇಳೆ ಕುಪಿತಗೊಂಡು ಖುಷ್ಬೂ ಆತನ ಕಪಾಳಕ್ಕೆ ಬಾರಿಸಿದ್ದರು.

    ಆದರೆ, ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಮೇಲ್ನೋಟಕ್ಕೆ ಆತ ಕಾಂಗ್ರೆಸ್​ ಕಾರ್ಯಕರ್ತನೆಂದು ಹೇಳಲಾಗಿದ್ದರೂ ಮಾಹಿತಿ ಖಚಿತವಿಲ್ಲ. ಘಟನೆ ನಡೆದ ದಿನ ಆತನಿಗೆ ಎಚ್ಚರಿಕೆ ಕೊಟ್ಟು ಹಾಗೇ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಬಿಜೆಪಿ ಕಾರ್ಯಕರ್ತ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬುದಕ್ಕೆ ನಟಿಯ ಆರೋಪ ಅಥವಾ ಹೇಳಿಕೆ ಎಲ್ಲೂ ದಾಖಲಾಗಿಲ್ಲ.

    ಹೀಗಾಗಿ ಸದ್ಯ ಹರಿದಾಡುತ್ತಿರುವ ವಿಡಿಯೋ ಹಳೆಯದಾಗಿದ್ದು, ಖುಷ್ಬೂ ಬಿಜೆಪಿ ಸೇರಿದಾಗ ನಡೆದ ಘಟನೆ ಎಂಬುದು ಸುಳ್ಳಾಗಿದೆ. (ಏಜೆನ್ಸೀಸ್​)

    VIDEO: ಆಗಸದಲ್ಲಿ ವಿಚಿತ್ರ ವಿದ್ಯಮಾನ- ಒಂದೇ ಬಾರಿ ಮೂರು ಸೂರ್ಯನ ಉದಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts