More

    ಮಗ ತಾಯಿಯನ್ನೇ ಮದುವೆಯಾದನಾ?: ವೈರಲ್​ ಸ್ಟೋರಿ ಹಿಂದಿನ ಅಸಲಿಯತ್ತೇ ಬೇರೆ ಇದೆ!

    ನವದೆಹಲಿ: ಬುಧವಾರ ಬೆಳಗ್ಗೆ ಫ್ರೆಂಡ್ಸ್​ ಫೋನ್​ ಕಾಲ್​ ಧ್ವನಿ ಕೇಳಿ ಎಚ್ಚರಗೊಂಡ ಪೃಥಿಲಾಸ್ಮಿ ಸೆಲ್ವರಾಜ ಮತ್ತು ಸೆಲಾ ರಾಜಂದ್ರ ದಂಪತಿಗೆ ಫೋನ್​ನಲ್ಲಿ ಫ್ರೆಂಡ್ಸ್​ ಹೇಳಿದ ಮಾತು ಅಕ್ಷರಶಃ ದುಸ್ವಪ್ನವಾಗಿ ಕಾಡಿತು.

    ಕರೆ ಮಾಡಿದ ಸ್ನೇಹಿತ ದಂಪತಿಗೆ ಹೇಳಿದ್ದೇನೆಂದರೆ ನಿಮ್ಮಿಬ್ಬರ ಫೋಟೋ ಜಾಲತಾಣದಲ್ಲಿ ಕೆಟ್ಟ ಸಂದೇಶದೊಂದಿಗೆ ವೈರಲ್​ ಆಗಿವೆ. ರಾಜಶ್ರೀ ಸೆಲ್ವಕುಮಾರ್​ ಎಂಬ ಟ್ವಿಟರ್ ಖಾತೆಯಿಂದ ಟ್ವೀಟ್​ ಮಾಡಲಾಗಿದ್ದು, ನಿಮ್ಮಿಬ್ಬರ ಫೋಟೋ ಪೋಸ್ಟ್​ ಮಾಡಿ ತಾಯಿ ಮತ್ತು ಮಗ ಮದುವೆಯಾಗಿದ್ದಾರೆ ಎಂದ ಸಂದೇಶದೊಂದಿಗೆ ವೈರಲ್​ ಮಾಡಲಾಗಿದೆ ಎಂಬ ಸುದ್ದಿ ಕೇಳಿದ ದಂಪತಿಯ ಮನಸ್ಸು ಹೇಗಾಗಿರಬೇಡ ಒಮ್ಮೆ ಯೋಚಿಸಿ ನೋಡಿ. ​

    ಇದನ್ನೂ ಓದಿ: ತಂದೆಯ ಲ್ಯಾಪ್​ಟಾಪ್​ನಲ್ಲಿ ತನ್ನ ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿ ಬಿದ್ದಳು ಮಗಳು!

    ಹೀಗಿರುವಾಗ ಅನೇಕರು ಹಿಂದು ಮುಂದೆ ವಿಚಾರಿಸದೇ ವೈರಲ್​ ಟ್ವೀಟ್​ ನಿಜವೆಂದು ತಿಳಿದು ಅದನ್ನು ಶೇರ್​ ಮಾಡಿಕೊಂಡಿದ್ದಲ್ಲದೆ, ದಂಪತಿಗೆ ಬಗ್ಗೆ ಬಹಳ ಕೆಟ್ಟದಾಗಿ ಕಾಮೆಂಟ್​ ಮಾಡಿದ್ದಾರೆ.

    ವೈರಲ್​ ಟ್ವೀಟ್​ನಲ್ಲಿನ ಸಾರಾಂಶ ಹೀಗಿದೆ… ನನ್ನ ಮಗನಿಗೆ 12 ವರ್ಷ ಹಾಗೂ ನನಗೆ 30 ವರ್ಷ ವಯಸ್ಸಾಗಿದ್ದಾಗ ಮೊದಲ ಪತಿ ತೀರಿಕೊಂಡರು. ಅಂದಿನಿಂದ ನಾನು ಮತ್ತು ನನ್ನ ಮಗ ಒಟ್ಟಿಗೆ ಬೆಳೆದೆವು. ಮಗನಿಗೆ ಕಾಲೇಜು ಮುಗಿದಾಗ ನನ್ನನ್ನು ಮದುವೆಯಾಗುವುದಾಗಿ ಪ್ರಸ್ತಾಪಿಸಿದನು. ನಾನು ಕೂಡ ಒಪ್ಪಿಕೊಂಡೆ. ನಾವಿಬ್ಬರು 2016ರಲ್ಲಿ ಮದುವೆಯಾದೆವು. ಈಗ ನಮ್ಮಿಬ್ಬರಿಗೆ 3 ವರ್ಷದ ಮಗನಿದ್ದಾನೆ ಎಂದು ಬರೆಯಲಾಗಿದೆ. ಅದರ ಫೋಟೋ ನೀವಿಲ್ಲಿ ಕಾಣಬಹುದಾಗಿದೆ.

    ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಹಿರಂಗ
    ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದಾಗ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳಕ್ಕೆ ಒಳಗಾದ ನೂತನ ಸಂತ್ರಸ್ತರು ಎಂದು ತಿಳಿದುಬಂದಿದೆ. ಅಲ್ಲದೆ, ನಕಲಿ ಟ್ವೀಟ್​ ಮಾಡಿದ ರಾಜಶ್ರೀ ಸೆಲ್ವಕುಮಾರ್ ಹೆಸರಿನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಅಂದಹಾಗೆ ಫೋಟೋದಲ್ಲಿರುವ ದಂಪತಿ ತಾಯಿ ಮಗನಲ್ಲ. ಬದಲಾಗಿ ಸುಮಾರು 9 ವರ್ಷಗಳು ಪ್ರೀತಿಸಿ, 2017ರಲ್ಲಿ ಸಪ್ತಪದಿ ತುಳಿದ ಮಲೆಷ್ಯಾ ಮೂಲದ ದಂಪತಿ ಎಂಬುದು ತಿಳಿದುಬಂದಿದೆ. ​

    ರಾಜಶ್ರೀ ಸೆಲ್ವಕುಮಾರ್​ ಹೆಸರಿನಲ್ಲಿ 2020 ಜುಲೈನಲ್ಲೇ ನಕಲಿ ಖಾತೆಯನ್ನು ಸೃಷ್ಟಿಸಲಾಗಿತ್ತು. ಪೋಸ್ಟ್​ ವೈರಲ್​ ಆದ ಬೆನ್ನಲ್ಲೇ ಅದನ್ನು ತೆಗೆದುಹಾಕಲಾಗಿದೆ. ವಿಪರ್ಯಾಸವೆಂದರೆ ಅದೇ ಹೆಸರಿನಲ್ಲೇ ಅಧಿಕೃತ ಖಾತೆಯೊಂದು ಸಹ ಇದೆ. ಈ ಬಗ್ಗೆ ಅಧಿಕೃತ ಖಾತೆಯಿಂದ ಟ್ವೀಟ್​ ಮಾಡಲಾಗಿದ್ದು, ನಕಲಿ ಸುದ್ದಿಗಳನ್ನು ಹರಡಬೇಡಿ. ಇದನೆಲ್ಲ ನಿಲ್ಲಿಸಿ ಎಂದು ಅಸಲಿ ರಾಜಶ್ರೀ ಸೆಲ್ವಕುಮಾರ್​ ಮನವಿ ಮಾಡಿಕೊಂಡಿದ್ದಾರೆ.

    ಹಾಗಾದರೆ ಫೋಟೋದಲ್ಲಿರುವವರು ಯಾರು?
    ಟ್ರೈನರ್​ ಸಿಂಗ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ 2020 ಆಗಸ್ಟ್​ 18ರಲ್ಲಿ ವೈರಲ್ ಪೋಸ್ಟ್​ ಅನ್ನು ಶೇರ್​ ಮಾಡಲಾಗಿದೆ.​ ಇದೊಂದು ನಕಲಿ ಪೋಸ್ಟ್​ ಎಂದಿರುವ ಅವರು ನಾನು ಫೋಟೋದಲ್ಲಿರುವ ದಂಪತಿಯ ಸ್ನೇಹಿತ ಎಂದಿದ್ದಾರೆ. ಅವರು ಹೆಸರು ಪೃಥಿಲಾಸ್ಮಿ ಸೆಲ್ವರಾಜ ಮತ್ತು ಸೆಲಾ ರಾಜಂದ್ರ ಎಂದು ತಿಳಿಸಿದ್ದಾರೆ. ಇವರು ಮಲೆಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ವೆಲ್​ಬೌರ್ನ್ ಪಿಸಿಯೋ ಸೆಂಟರ್​ ನಡೆಸುತ್ತಿದ್ದಾರೆ.

    ಇದನ್ನು ತಿಳಿದ ಇಂಡಿಯಾ ಟುಡೆ, ವೆಲ್​ಬೌರ್ನ್ ಪಿಸಿಯೋ ಸೆಂಟರ್ ಇನ್​ಸ್ಟಾಗ್ರಾಂ ಮೂಲಕ ದಂಪತಿಯನ್ನು ಸಂಪರ್ಕಸಿದೆ. ಇಂಡಿಯಾ ಟುಡೆ ಜತೆ ಮಾತನಾಡಿರುವ ಸೆಲಾ ರಾಜಂದ್ರ ನಕಲಿ ಪೋಸ್ಟ್​ ನೋಡಿ ನಮ್ಮ ಮನಸ್ಸಿಗೆ ನೋವಾಯಿತು. ವೈರಲ್​ ಫೋಟೋವನ್ನು ನನ್ನ ಪತ್ನಿಯ ಖಾತೆಯಿಂದ ತೆಗೆದುಕೊಂಡಿದ್ದಾರೆ. ಇದನ್ನು ಯಾರು ಮಾಡಿದ್ದಾರೋ ಗೊತ್ತಿಲ್ಲ. ನಮಗೆ ಆ ರೀತಿಯ ಶತ್ರು ಯಾರು ಇಲ್ಲ. ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದೇವೆ ಎಂದು ರಾಜಂದ್ರ ತಿಳಿಸಿದ್ದಾರೆ. ಅಲ್ಲದೆ, ನಕಲಿ ಸುದ್ದಿ ಹರಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲು: ಈ ಚಿತ್ರದಲ್ಲಿ ಅಡಗಿರುವ ಬೆತ್ತಲೆ ಮಾಡೆಲ್​ ಗುರುತಿಸುವಿರಾ?

    ಅಂದಹಾಗೆ ದಂಪತಿ ಕಾಲೇಜು ದಿನಗಳಿಂದಲೂ ಒಬ್ಬರಿಗೊಬ್ಬರು ಪರಿಚಿತರಾಗಿದ್ದಾರೆ. ತಮ್ಮ ಸ್ನೇಹಕ್ಕೆ 12 ವರ್ಷಗಳಾಗಿವೆ. ನಾವಿಬ್ಬರು 3 ವರ್ಷದ ಹಿಂದೆ ಮದುವೆಯಾದೆವು ಎಂದು ಇಂಡಿಯಾ ಟುಡೆಗೆ ದಂಪತಿ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಟ್ವೀಟರ್​ನಲ್ಲಿ ಹರಿದಾಡುತ್ತಿರುವ ಸುದ್ದಿ ಅಕ್ಷರಶಃ ಸುಳ್ಳು ಎಂಬುದು ಇಂಡಿಯಾ ಟುಡೆ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts