More

    ರಿಲಯನ್ಸ್​ ಜಿಯೋ ಕಂಪನಿಯ ಶೇ. 9.99 ಪಾಲು ಖರೀದಿಸಿದ ಸಾಮಾಜಿಕ ಜಾಲತಾಣ ದೈತ್ಯ ಕಂಪನಿ ಫೇಸ್​ಬುಕ್​

    ನವದೆಹಲಿ: ಭಾರತದ ಟೆಲಿಕಾಂ ಲೋಕದಲ್ಲಿ ತನ್ನದೇ ಹವಾ ಸೃಷ್ಟಿಸಿರುವ ರಿಲಯನ್ಸ್​ ಜಿಯೋ ಕಂಪನಿಯ ಶೇ. 9.99 ರಷ್ಟು ಪಾಲನ್ನು 5.7 ಬಿಲಿಯನ್​ ಡಾಲರ್(​43,574 ರೂ.)ಗೆ ಖರೀದಿಸಿರುವುದಾಗಿ ಸಾಮಾಜಿಕ ಜಾಲತಾಣ ದೈತ್ಯ ಕಂಪನಿ ಫೇಸ್​ಬುಕ್​ ಬುಧವಾರ ತಿಳಿಸಿದೆ. ಈ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನಲ್ಲಿ ಅತಿದೊಡ್ಡ ಅಲ್ಪಸಂಖ್ಯಾತ ಷೇರುದಾರ ಎನಿಸಿಕೊಂಡಿದೆ.

    ಫೇಸ್​ಬುಕ್​ ತನ್ನ ಮೆಸೆಜಿಂಗ್​​ ಪ್ಲಾಟ್‌ಫಾರ್ಮ್​​​ ವಾಟ್ಸ್ಆ್ಯಪ್​ ಮೂಲಕ ರಿಲಯನ್ಸ್​ ಇ-ಕಾಮರ್ಸ್​ ಉದ್ಯಮ ಜಿಯೋ ಮಾರ್ಟ್​ನೊಂದಿಗೆ ಸೇರಿ ಒಟ್ಟಿಗೆ ಕೆಲಸ ಮಾಡುವುದರ ಕಡೆ ಗಮನಹರಿಸಿದೆ. ಸಣ್ಣ ವ್ಯವಹಾರಗಳೊಂದಿಗೆ ಸಂಪರ್ಕ ಸಾಧಿಸಲು ಜನರನ್ನು ಸಕ್ರಿಯಗೊಳಿಸಲು ರಿಲಯನ್ಸ್​ ಮತ್ತು ಫೇಸ್​ಬುಕ್​ ಈ ನಿರ್ಧಾರಕ್ಕೆ ಬಂದಿವೆ ಎಂದು ಹೇಳಲಾಗಿದೆ.

    ಫೇಸ್‌ಬುಕ್‌ನ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿನ 9.99% ಈಕ್ವಿಟಿ ಪಾಲನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದ ಆಧಾರದ ಮೇಲೆ ಅನುವಾದಿಸಲಾಗಿದೆ ಎಂದು ಜಿಯೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಮಾಧ್ಯಮ ವರದಿಯ ಪ್ರಕಾರ ಭಾತರದಲ್ಲಿನ ಡಿಜಿಟಲ್​ ಪಾವತಿಗಳಿಗೆ ಫೇಸ್​ಬುಕ್​ ಮಾಲೀಕತ್ವದ ವಾಟ್ಸ್​ಆ್ಯಪ್​ ಸುರಕ್ಷಿತ ಅನುಮೋದನೆಯನ್ನು ನೀಡುವ ಮೂಲಕ ಗೂಗಲ್​ ಪೇ ಮತ್ತು ಪೇಟಿಎಂಗೆ ಪೈಪೋಟಿ ನೀಡುತ್ತಿದೆ. ಇದರ ಬೆನ್ನಲ್ಲೇ ರಿಲಯನ್ಸ್​ ಜಿಯೋ ಮತ್ತು ಫೇಸ್​ಬುಕ್​ ಈ ಒಪ್ಪಂದ ಮಾಡಿಕೊಂಡಿದ್ದು, ಇ-ಕಾಮರ್ಸ್​ ಉದ್ಯಮದ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿವೆ.

    ಭಾರತದಲ್ಲಿ ಸುಮಾರು 400 ಮಿಲಿಯನ್​ ವಾಟ್ಸ್​ಆ್ಯಪ್​ ಬಳಕೆದಾರರಿದ್ದು, ಶೇ. 80 ರಷ್ಟು ಸ್ಮಾರ್ಟ್​ಫೋನ್​ ಬಳಕೆದಾರರನ್ನು ಇದು ತಲುಪಿದೆ. ಇತ್ತ ರಿಯಲನ್ಸ್​ ಜಿಯೋ ಕೂಡ ಟೆಲಿಕಾಂ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ. 2016ರಿಂದ ಕಾರ್ಯಾಚರಣೆ ಆರಂಭಿಸಿದ ಜಿಯೋ ಕೆಲವೇ ವರ್ಷಗಳಲ್ಲಿ ಟಿಲಿಕಾಂ ಕ್ಷೇತ್ರದ ದಿಗ್ಗಜ ಕಂಪನಿಯಾಗಿ ಹೊರಹೊಮ್ಮಿದೆ. ಭಾರತದ ನಂ. 1 ಶ್ರೀಮಂತ ಮುಖೇಶ್​ ಅಂಬಾನಿ ನೇತೃತ್ವದಲ್ಲಿ ಜಿಯೋ ಯಶಸ್ಸಿನ ನಾಗಾಲೋಟ ಮುಂದವರಿಸಿದೆ. (ಏಜೆನ್ಸೀಸ್​)

    ಇಡೀ ರಾತ್ರಿ ಕಣ್ಣೀರಿಟ್ಟಂತಹ ಅಸಹಾಯಕ ಕ್ಷಣವನ್ನು ಬಹಿರಂಗಪಡಿಸಿದ ಟೀಮ್​ ಇಂಡಿಯಾ ನಾಯಕ ಕೊಹ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts