More

    ಸುಸಜ್ಜಿತ ಬಸ್ ನಿಲ್ದಾಣವಿದ್ದರೂ ಸಮರ್ಪಕ ಬಸ್‌ಗಳಿಲ್ಲ

    ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ ): ವಿಸ್ತಾರವಾಗಿ ಬೆಳೆಯುತ್ತಿರುವ ಚಳ್ಳಕೆರೆಯಲ್ಲಿ 12.25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇದಕ್ಕೆ ಅನುಕೂಲವಾಗಲೆಂದು 10 ಎಕರೆಯಲ್ಲಿ ಡಿಪೋ ಆರಂಭಿಸಿದ್ದರೂ ತಾಲೂಕಿನ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸಾರಿಗೆ ವ್ಯವಸ್ಥೆ ಇಲ್ಲ.

    ತಾಲೂಕು 4.45 ಲಕ್ಷ ಎಕರೆಯಷ್ಟು ಭೌಗೋಳಿಕ ವ್ಯಾಪ್ತಿ ಹೊಂದಿದೆ. ಕಸಬಾ, ಪರಶುರಾಮಪುರ, ತಳಕು, ನಾಯಕನಹಟ್ಟಿ ಸೇರಿ 4 ಹೋಬಳಿಗಳಿದ್ದು, 234 ಹಳ್ಳಿಗಳಿವೆ. ಇದರಲ್ಲಿ 190 ಕಂದಾಯ ಗ್ರಾಮಗಳಿವೆ. ತಾಲೂಕಿನ ಗ್ರಾಮಗಳ ಸಂಖ್ಯೆ ಮತ್ತು ವಿಸ್ತಾರಕ್ಕೆ ತಕ್ಕಂತೆ 80 ರಿಂದ 90 ಮಾರ್ಗಗಳಲ್ಲಿ ಬಸ್‌ಗಳ ಅವಶ್ಯಕತೆ ಇದೆ. ಆದರೆ, ಕೇವಲ 38 ಮಾರ್ಗದಲ್ಲಿ ಸಂಚಾರವಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ.

    ಸಾರಿಗೆ ಘಟಕದ ಲೆಕ್ಕಾಚಾರದಂತೆ 100 ಬಸ್‌ಗಳ ಅವಶ್ಯಕತೆ ಇದೆ. ಆದರೆ, ಶೇ. 40ರಷ್ಟು ವಾಹನಗಳಿವೆ. ಇದರಲ್ಲೂ 12 ರಿಂದ 15 ಲಕ್ಷ ಕಿ.ಮೀ. ಓಡಿರುವ 30 ಹಳೆಯ ಬಸ್‌ಗಳಿವೆ. ಸಾರಿಗೆ ಸೌಲಭ್ಯದ ಕೊರತೆಯಿಂದಾಗಿ ಖಾಸಗಿ ವಾಹನಗಳಲ್ಲಿ ಅಪಾಯದ ಸ್ಥಿತಿಯಲ್ಲಿ ಓಡಾಡಬೇಕಾಗಿದೆ. ಸಂಬಂಧಿತ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts