More

    ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ (ಎನ್‌ಎಟಿ 2020) ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕನ್ನು ಜುಲೈ 15 ರವರೆಗೆ ವಿಸ್ತರಿಸಿದೆ.
    ಇದಕ್ಕೂ ಮೊದಲು ಜುಲೈ 6 ಅರ್ಜಿ ಸಲ್ಲಿಸಲು ಕೊನೆ ದಿನವಾಗಿತ್ತು.  ಮಾನ್ಯತೆ ಹೊಂದಿದ ಪ್ರಾಥಮಿಕ, ಮಾಧ್ಯಮಿಕ, ಉನ್ನತ ಮತ್ತು ಹೈಯರ್ ಸೆಕೆಂಡರಿ ಶಾಲೆಗಳ ಶಿಕ್ಷಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

    ಇದನ್ನೂ ಓದಿ:  ಅಮಿತಾಭ್​ ಬಚ್ಚನ್​, ಅಭಿಷೇಕ್​ ಬಚ್ಚನ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ ನೇಪಾಳ ಪ್ರಧಾನಿ


    ಈ ವರ್ಷ ಜಿಲ್ಲಾ ಆಯ್ಕೆ ಸಮಿತಿ ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಆಯ್ಕೆ ಸಮಿತಿ ರಚಿಸುವ ಜ್ಯೇಷ್ಠತಾ ಪಟ್ಟಿಯಡಿ ಬರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಶಿಕ್ಷಕರು ಮೊಬೈಲ್ ಫೋನ್‌ಗಳಿಂದಲೂ ಅರ್ಜಿ ಸಲ್ಲಿಸಬಹುದು.
    ಆಸಕ್ತ ಶಿಕ್ಷಕರು https://nationalawardstoteachers.mhrd.gov.in/ ನಲ್ಲಿ ಆನ್‌ಲೈನ್‌ನಲ್ಲಿ (ಅಥವಾ https://nationalawardstoteachers.mhrd.gov.in/Login.aspx ) ಅರ್ಜಿ ಸಲ್ಲಿಸಬಹುದು.  

    ಕರೊನಾಗೆ ನಮ್ಮಲ್ಲಿದೆ ಗುರಾಣಿ : ದೆಹಲಿ ಸಿಎಂ ಕೇಜ್ರಿವಾಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts