More

    ಭವಿಷ್ಯದಲ್ಲಿ ಪ್ರಪಂಚದ ಮುಖ್ಯ ಮಾಂಸಾಹಾರವಾಗಲಿದೆ ಹೆಬ್ಬಾವು! ಕಾರಣ ಹೀಗಿದೆ ನೋಡಿ..

    ಮನುಷ್ಯ ಸೇರಿದಂತೆ ನಾಯಿ, ನರಿಗಳನ್ನು ಸುತ್ತಿಕೊಂಡು ಬಿಗಿದು ಕಡೆಗೆ ಹೊಟ್ಟೆ ತುಂಬಿಸಿಕೊಳ್ಳುವ ಹೆಬ್ಬಾವು ಕಂಡರೆ ಯಾರಿಗೆ ತಾನೇ ಭಯವಾಗುವುದಿಲ್ಲ ಹೇಳಿ..ಆದರೆ ಆಹಾರ ತಜ್ಞರ ಪ್ರಕಾರ ಹೆಬ್ಬಾವು ಊಟದ ಮೇಜಿನ ಮೇಲೆ ಫ್ರೈ, ಕೈಮಾ, ಕಬಾಬ್​, ಮಸಾಲೆಭರಿತ ಸಾಂಬಾರ್​ ರೂಪದಲ್ಲಿ ಇರುವ ಕಾಲ ದೂರವಿಲ್ಲ.

    ಇದನ್ನೂ ಓದಿ: ಪ್ರಭಾಸ್ ಚಿತ್ರಕ್ಕೆ ಚುನಾವಣಾ ಶಾಕ್.. ಕಲ್ಕಿ ಬಿಡುಗಡೆ ಮುಂದೂಡಿಕೆ?

    ಪರಿಸರ ವಿಜ್ಞಾನಿಗಳು ಈಗ ತಮ್ಮ ಗಮನವನ್ನು ಕಡಿಮೆ ಹಸಿರುಮನೆ ಅನಿಲ ಮತ್ತು ಇಂಗಾಲದ ಹೊರಸೂಸುವಿಕೆ ಹೊಂದಿದ ಮಾಂಸದ ಕಡೆ ಗಮನಹರಿಸಿದ್ದಾರೆ. ಹೆಚ್ಚು ಬಳಕೆಯಾಗುವ ಸಾಂಪ್ರದಾಯಿಕ ಮಾಂಸಾಹಾರವಾದ ಗೋಮಾಂಸ, ಹಂದಿಮಾಂಸ ಮತ್ತು ಚಿಕನ್ ನಲ್ಲಿ ಕಡಿಮೆ ಇಂಗಾಲ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಹಲವು ಸಂಶೋಧನೆಗಳಾಗಿವೆ. ಆದರೆ ಇಲ್ಲಿ ತನಕ ನಡೆದಿರುವ ಆ ಎಲ್ಲ ಸಂಶೋಧನೆಗಳಿಗೆ ಹೋಲಿಸಿದರೆ ಹೆಬ್ಬಾವಿನ ಮಾಂಸವು ಕಡಿಮೆ ಇಂಗಾಲದ ಹೊರಸೂಸುವಿಕೆಯನ್ನು ಹೊಂದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೀಗಾಗಿಯೇ ಅದು ಭವಿಷ್ಯದ ಜನಪ್ರಿಯ ಆಹಾರವಾಗಲಿದೆ ಎಂದೂ ಹೇಳುತ್ತಾರೆ.

    ಏಷ್ಯಾದ ಹೆಬ್ಬಾವು ಸಾಕಣೆ ಕೇಂದ್ರಗಳಲ್ಲಿ 12 ತಿಂಗಳ ಸಂಶೋಧನೆಯ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಪೆಟಿಕ್ಯುಲೇಟೆಡ್ ಮತ್ತು ಬರ್ಮೀಸ್ ಎಂಬ ಎರಡು ಮುಖ್ಯ ರೀತಿಯ ಹೆಬ್ಬಾವುಗಳ ಮೇಲೆ ಪ್ರಯೋಗವನ್ನು ನಡೆಸಲಾಯಿತು. ಹೆಬ್ಬಾವುಗಳು ಬಹುಬೇಗ ಸಂತಾನೋತ್ಪತ್ತಿ ಮಾಡುವುದರಿಂದ ಇವುಗಳ ಸಾಕಾಣಿಕೆಯೂ ಲಾಭದಾಯಕ ಎನ್ನುತ್ತಾರೆ ಸಂಶೋದಕರು.

    ಹೆಬ್ಬಾವು ಪ್ರಪಂಚದ ಅತಿ ದೊಡ್ಡ ಹಾವುಗಳಲ್ಲಿ ಒಂದಾಗಿದೆ. ಆಫ್ರಿಕಾ, -ಆಸ್ಟ್ರೇಲಿಯಾ ಮತ್ತು ಏಷ್ಯಾ ಖಂಡಗಳಲ್ಲಿ ಹೆಬ್ಬಾವುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಹಿಂದೆ ಹೇಳಿದ ಎರಡು ವರ್ಗಗಳಲ್ಲದೆ ಹೆಬ್ಬಾವು ಕುಟುಂಬದಲ್ಲಿ ಬಾಲ್ ಹೆಬ್ಬಾವು, ಕಾರ್ಪೆಟ್ ಹೆಬ್ಬಾವು, ಆಲಿವ್ ಹೆಬ್ಬಾವು ಮತ್ತು ಆಫ್ರಿಕನ್ ರಾಕ್ ಹೆಬ್ಬಾವುಗಳಂತಹ ಹಾವುಗಳೂ ಇವೆ.

    ಹೆಬ್ಬಾವುಗಳನ್ನು 1980 ರ ದಶಕದಲ್ಲಿ ಉತ್ತರ ಅಮೆರಿಕಾಕ್ಕೆ ಪರಿಚಯಿಸಲಾಯಿತು. ಇವು ನಂತರ ಇಲ್ಲಿ ವಂಶೋತ್ಪತ್ತಿಯಾಗಿ ನಾನಾ ಕಡೆ ಕಾಣಸಿಗುವಂತಾಗಿದೆ. ಆಕ್ರಮಣಕಾರಿ ಜಾತಿಯೆಂದು ಅವುಗಳನ್ನು ಪರಿಗಣಿಸಲಾಗಿದೆ.

    ಲೋಕಸಭೆ ಚುನಾವಣೆ ಎಫೆಕ್ಟ್.. ಪರೀಕ್ಷೆ ಮುಂದೂಡಿಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts