More

    ವಿದೇಶಿ ಕರೆಗಳ ಎಕ್ಸ್​ಚೆಂಜ್​ ದಂಧೆ: ಐವರನ್ನು ಬಂಧಿಸಿದ ಸಿಸಿಬಿ ಅಧಿಕಾರಿಗಳು; 3 ಸಾವಿರ ಸಿಮ್ ಕಾರ್ಡ್​ ಜಪ್ತಿ

    ಬೆಂಗಳೂರು: ಟೆಲಿಫೋನ್​ ಎಕ್ಸ್​ಚೆಂಜ್​ ದಂಧೆ ಪ್ರಕರಣದಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಿರುವ ಸಿಸಿಬಿಯ ಎಟಿಸಿ ಪೊಲೀಸರು, ಮತ್ತೆ ಐವರನ್ನು ಬಂಧಿಸಿ ಭರ್ಜರಿ ಭೇಟೆಯಾಡಿದ್ದಾರೆ.

    ಕೇರಳದ ಮಲ್ಲಪುರಂ ಮೂಲದ ಮಹಮದ್​ ಬಷೀರ್​ (51), ಅನೀಸ್​ ಅತ್ತಿಮನ್ನೀಲ್​ (30), ತಮಿಳುನಾಡಿನ ಸಂತನ್​ ಕುಮಾರ್​ (29), ಸುರೇಶ್​ ತಂಗವೇಲು (32) ಮತ್ತು ಜೈ ಗಣೇಶ್​ (30) ಬಂಧಿತರು. ಬಿಟಿಎಂ ಲೇಔಟ್​, ಮಡಿವಾಳ, ಸುದ್ದಗುಂಟೆಪಾಳ್ಯದಲ್ಲಿ 9 ಕಡೆಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. 3 ಸಾವಿರಕ್ಕೂ ಅಧಿಕ ಹೆಚ್ಚು ಸಿಮ್​ ಕಾರ್ಡ್​ ಅಳವಡಿಸುವಂತಹ 109 ಸಿಮ್​ ಬಾಕ್ಸ್​ ಡಿವೈಸ್​, 3 ಸಾವಿರ ಮೊಬೈಲ್​ ಸಿಮ್​ ಕಾರ್ಡ್​, 23 ಲ್ಯಾಪ್​ಟಾಪ್​, 10 ಪೆನ್​ಡೆವ್​, 14 ಯುಪಿಎಸ್​ಗಳ 17 ರೂಟರ್ಸ್​ಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್​ ಆಯುಕ್ತ (ಅಪರಾಧ) ಸಂದೀಪ್​ ಪಾಟೀಲ್​ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಬಿಟಿಎಂ ಲೇಔಟ್​ನ 6 ಕಡೆಗಳಲ್ಲಿ ಅನಧಿಕೃತ ಟೆಲಿಫೋನ್​ ಎಕ್ಸ್​ಚೆಂಜ್​ ದಂಧೆ ನಡೆಸಲಾಗುತ್ತಿದೆ. ದೂರ ಸಂಪರ್ಕ ಇಲಾಖೆಗೆ ವಂಚನೆ ಮತ್ತು ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿರುವ ಬಗ್ಗೆ ನೀಡಿದ ಮಾಹಿತಿ ಮೇರೆಗೆ ಎಟಿಸಿ ಎಸಿಪಿ ಬಿ.ಆರ್​. ವೇಣುಗೋಪಾಲ್​ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ರಾಹಿಂ ಮಲ್ಲಟ್ಟಿ ಮತ್ತು ಗೌತಮ್​ನನ್ನು ಬಂಧಿಸಿತ್ತು. ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ಮುಂದುವರೆಸಿದ ಎಟಿಸಿ ಅಧಿಕಾರಿಗಳು ಬಿಟಿಎಂ ಲೇಔಟ್​, ಮಡಿವಾಳ, ಸುದ್ದಗುಂಟೆಪಾಳ್ಯದ 9 ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಐವರನ್ನು ಬಂಧಿಸಿದ್ದಾರೆ.

    ಕಿಂಗ್​ಪಿನ್​ ಇಬ್ರಾಹಿಂ ಪುಲ್ಲಟ್ಟಿ ಜತೆ ಸೇರಿ ಐವರು ಅನಧಿಕೃತ ಟೆಲಿಫೋನ್​ ಎಕ್ಸ್​ಚೆಂಜ್​ಗಾಗಿ ವಿವಿಧ ಟೆಲಿಫೋನ್​ ಸರ್ವಿಸ್​ ಕಂಪನಿಗಳ ಸಿಮ್​ ಕಾರ್ಡ್​ಗಳನ್ನು ಸಂಗ್ರಹಿಸುತ್ತಿದ್ದರು. ಮೊಬೈಲ್​ ಸರ್ವಿಸ್​ ಪ್ರೋವೈಡರ್​ ಕಂಪನಿ ಸೇಲ್ಸ್​ ಎಕ್ಸಿಕ್ಯೂಟಿವ್​ ಆಗಿದ್ದ ಸಂತನ್​ ಕುಮಾರ್​, ತಮಿಳುನಾಡಿನ ತೂತುಕುಡಿಯಲ್ಲಿ ಸುರೇಶ್​ ತಂಗವೇಲು, ಜೈ ಗಣೇಶ್​ ಮುಖಾಂತರ ಸಿಮ್​ ಕಾರ್ಡ್​ಗಳನ್ನು ಪಡೆದು ಕೋರಿಯರ್​ ಮೂಲಕ ಪ್ರಮುಖ ಆರೋಪಿಗಳಾದ ಮಹಮದ್​ ಬಷೀರ್​, ಅನ್ನೀತ್​ಗೆ ಒದಗಿಸುತ್ತಿದ್ದರು. ಈ ಸಿಮ್​ಗಳನ್ನು ಬಳಸಿ 109 ಎಲೆಕ್ಟ್ರಾನಿಕ್​ ಉಪಕರಣಗಳನ್ನು 9 ಸ್ಥಳಗಳಲ್ಲಿ 3 ಸಾವಿರಕ್ಕೂ ಅಧಿಕ ಮೊಬೈಲ್​ ಸಿಮ್​ ಕಾರ್ಡ್​ಗಳನ್ನು ಅಳವಡಿಸಿದ್ದರು. ವಿದೇಶಿ ಕರೆಗಳನ್ನು (ಐಎಸ್​ಡಿ) ಕರೆಗಳನ್ನು ಸ್ವೀಕರಿಸಿ ಸ್ಥಳಿಯ ಕರೆಗಳನ್ನಾಗಿ ಪರಿವರ್ತಿಸಿ ಸಂಬಂಧಪಟ್ಟವರಿಗೆ ಸಂಪರ್ಕ ಕಲ್ಪಿಸುತ್ತಿದ್ದರು. ಇದರಿಂದ ದೂರ ಸಂಪರ್ಕ ಇಲಾಖೆಗೆ ನಷ್ಟ ಉಂಟಾಗುತ್ತಿತ್ತು. ಅನಧಿಕೃತವಾಗಿ ನಡೆಯುತ್ತಿದ್ದ ವಿದೇಶಿ ದೂರವಾಣಿ ಕರೆಗಳು ಎಲ್ಲಿಯೂ ದಾಖಲು ಆಗುತ್ತಿರಲಿಲ್ಲ. ದೇಶದ ಗೌಪ್ಯ ಮಾಹಿತಿ ವಿನಿಮಯವಾದರು ಗೊತ್ತಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಏಜೆಂಟ್​ನಿಂದ ಬಾಡಿಗೆ ಮನೆ :
    ಮಡಿವಾಳ, ಸುದ್ದಗುಂಟೆಪಾಳ್ಯ, ಬಿಟಿಎಂ ಲೇಔಟ್​ ಮತ್ತು ಮೈಕೋಲೇಔಟ್​ನಲ್ಲಿ ಏಜೆಂಟ್​ಗಳ ಮೂಲಕ ಆರೋಪಿಗಳು ಬಾಡಿಗೆ ಮನೆ ಪಡೆದಿದ್ದರು. ಚಿಕ್ಕ ಮನೆಗಳಾಗಿದ್ದು, ಸಿಮ್​ಬಾಕ್ಸ್​ಗಳನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದರು. ಸ್ಥಳಿಯರಿಗೆ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಕೇಳಿದರೆ ಇಂಟರ್​ನೆಟ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯಿಂದ ನಿರ್ವಹಿಸುತ್ತಿವೆ ಎಂದು ಹೇಳಿದ್ದರು.

    ಮಧ್ಯಪ್ರಾಚ್ಯದೇಶಕ್ಕೆ ಕರೆ :
    ಐಎಸ್​ಡಿ ಕರೆಗಳ ದಂಧೆಯಲ್ಲಿ ಇನ್ನೂ ಪ್ರಮುಖ ಇಬ್ಬರು ಆರೋಪಿಗಳು ಸಿಗಬೇಕಾಗಿದೆ. ತಾಂತ್ರಿಕವಾಗಿ ತೊಡಗಿಸಿಕೊಂಡಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಇಬ್ಬರು ಸಿಕ್ಕರೆ ಕರೆಗಳು ಎಲ್ಲಿಂದ ಎಲ್ಲಿಗೆ ಹೋಗಿವೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಹೆಚ್ಚಾಗಿ ಮದ್ಯಪ್ರಾಚ್ಯ ದೇಶಗಳಿಂದ ಒಳ ಕರೆಗಳು ಬಂದಿವೆ. ಈ ದಂಧೆ 2 ವರ್ಷದಿಂದ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು.

    ಯಾವೆಲ್ಲ ಕರೆಗಳು :
    ವಿದೇಶದಿಂದ ಒಳ&ಹೊರ ಕರೆ ಮಾಡಲು ಸಾಮಾನ್ಯ ಕರೆಗಳು, ಬೆದರಿಕೆ ಕರೆಗಳು, ಉಗ್ರ ಚಟುವಟಿಕೆ, ಹವಾಲ ದಂಧೆ ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಳಕೆ ಮಾಡಿರಬಹುದು. ಈ ಬಗ್ಗೆ ತಾಂತ್ರಿಕ ಸಿಬ್ಬಂದಿ ಸಹಾಯದಿಂದ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಕಲಿ ಸಿಮ್​ ಬಳಕೆ :
    ಆರೋಪಿಗಳು ತಮ್ಮ ಸಹಚರರ ಮೂಲಕ ಬೆಂಗಳೂರು, ತಮಿಳುನಾಡು, ಕೇರಳದಲ್ಲಿ ಮೊಬೈಲ್​ ಸಿಮ್​ ಕಾರ್ಡ್​ ಮಾರಾಟಗಾರರ ಸಂಪರ್ಕ ಹೊಂದಿದ್ದರು. ಗ್ರಾಮೀಣ ಭಾಗದ ಜನರು ಸಿಮ್​ ಖರೀದಿಗೆ ಬಂದಾಗ ಐಡಿ ಕಾರ್ಡ್​ನ್ನು ಅವರಿಗೆ ಗೊತ್ತಿಲ್ಲದಂತೆ ಮತ್ತೊಂದು ಪ್ರತಿ ಪಡೆದು ಗ್ರಾಹಕರ ಹೆಸರಿನಲ್ಲಿ ಸಿಮ್​ ಆಕ್ಟೀವ್​ ಮಾಡುತ್ತಿದ್ದರು. ಆನಂತರ ಕೋರಿಯರ್​ ಮೂಲಕ ಇಬ್ರಾಹಿಂಗೆ ಕಳುಹಿಸುತ್ತಿದ್ದರು.

    ಕಾನ್​ಸ್ಟೇಬಲ್ ಪರೀಕ್ಷೆ ಬರೆದು ಮೋಸ ಮಾಡಿದ್ದ ಐವರು ಪೇದೆಗಳು ವಜಾ; 61 ಮಂದಿ ಅಂದರ್

    ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts