More

    ಕರೊನಾ ಆಸ್ಪತ್ರೆ ಮೇಲೆ ಗುಂಡಿನ ದಾಳಿ ನಡೆಸಿದ ಮಾಜಿ ಯೋಧ! ಓರ್ವ ರೋಗಿ ಬಲಿ

    ಬ್ಯಾಂಕಾಕ್: ಕರೊನಾ ರೋಗಿಗಳಿದ್ದ ಆಸ್ಪತ್ರೆಯನ್ನು ಡ್ರಗ್ಸ್​ ವ್ಯಸನಿಗಳ ಪುನರ್ವಸತಿ ಕೇಂದ್ರವೆಂದು ತಪ್ಪಾಗಿ ಗ್ರಹಿಸಿ, ಮಾಜಿ ಯೋಧನೊಬ್ಬ ಆಸ್ಪತ್ರೆಯ ಮೇಲೇ ಗುಂಡಿನ ದಾಳಿ ನಡೆಸಿರುವ ಘಟನೆ ಥೈಲ್ಯಾಂಡ್​ನಲ್ಲಿ ನಡೆದಿದೆ.

    23 ವರ್ಷದ ವ್ಯಕ್ತಿ ಈ ಹಿಂದೆ ಥೈಲ್ಯಾಂಡ್​ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದ. ಆತನಿಗೆ ಡ್ರಗ್ಸ್​ ವ್ಯಸನಿಗಳನ್ನು ಕಂಡರೆ ದ್ವೇಷವಿತ್ತಂತೆ. ಬ್ಯಾಂಕಾಕ್ ಬಳಿಯ ಪಾತುಮ್ ಥಾನಿಯಲ್ಲಿರುವ ಆಸ್ಪತ್ರೆಯನ್ನು ಈ ಮೊದಲು ಡ್ರಗ್ಸ್​ ವ್ಯಸನಿಗಳ ಪುನರ್ವಸತಿ ಕೇಂದ್ರ ಮಾಡಲಾಗಿತ್ತು. ಆದರೆ ಕರೊನಾ ಆರಂಭವಾದಾಗಿನಿಂದ ಆಸ್ಪತ್ರೆಯನ್ನು ಕರೊನಾ ಸೋಂಕಿತರಿಗೆ ಮೀಸಲಿಡಲಾಗಿದೆ. ಅದನ್ನು ಅರಿಯದ ವ್ಯಕ್ತಿ ಆಸ್ಪತ್ರೆ ಬಳಿ ಬಂದು ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ 54 ವರ್ಷದ ಕರೊನಾ ಸೋಂಕಿತನೊಬ್ಬ ಕೊನೆಯುಸಿರೆಳೆದಿದ್ದಾನೆ.

    ಆಸ್ಪತ್ರೆ ಬಳಿ ಬರುವುದಕ್ಕಿಂತ ಮೊದಲು ಶಾಪ್​ ಒಂದಕ್ಕೆ ಹೋಗಿದ್ದ ಮಾಜಿ ಸೈನಿಕ ಅಲ್ಲಿನ ಸಿಬ್ಬಂದಿಯೊಬ್ಬ ಜತೆ ಜಗಳವಾಡಿದ್ದನಂತೆ. ಸಿಟ್ಟಿನಿಂದ ಆತನಿಗೆ ಗುಂಡಿಟ್ಟು ಕೊಂದು ಆಸ್ಪತ್ರೆ ಬಳಿ ಬಂದಿದ್ದ. ಯುನಿಫಾರ್ಮ್ ತೊಟ್ಟು ಆತ ಆಸ್ಪತ್ರೆ ಬಳಿ ಸುತ್ತಾಡುತ್ತಿರುವುದು ಹಾಗೂ ಶೂಟ್ ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

    ಕಾಲ್ ಗರ್ಲ್​ಗೆ ಅಪ್ಪನ ಅಕೌಂಟ್​ನಿಂದಲೇ 18 ಲಕ್ಷ ರೂಪಾಯಿ ಟ್ರಾನ್ಸ್ಫರ್ ಮಾಡಿದ ಹಂಟರ್ ಬೈಡೆನ್! ಲ್ಯಾಪ್​ಟಾಪ್​ನಲ್ಲಿತ್ತು ರೋಚಕ ಕಥೆ!

    ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

    ವರ್ಜಿನಿಟಿ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು? ಅಮ್ಮನಿಗೇ ಪ್ರಶ್ನಿಸಿದ ಆಲಿಯಾ ಕಶ್ಯಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts