More

    ನೆಲದಲ್ಲಿ ಕೂತು ಊಟ ಮಾಡಿದ ಶೆಹನಾಝ್​ ಗಿಲ್; ಅಭಿಮಾನಿಗಳಿಂದ ಮೆಚ್ಚುಗೆ…

    ನವದೆಹಲಿ: ದುಬೈಗೆ ಹೋಗಿದ್ದ ಬಿಗ್​ಬಾಸ್​ನ ಸ್ಪರ್ಧಿ ಶೆಹನಾಝ್ ಗಿಲ್​ ನೆಲದಲ್ಲಿ ಕೂತು ಊಟ ಮಾಡಿ ತಮ್ಮ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಶೆಹನಾಝ್ ಗಿಲ್​, ಗುರುವಾರ (ಅ.27) ’48 ಹವರ್ಸ್ ಇನ್ ದುಬೈ’ ಎಂಬ ಹೆಸರಿನ ವಿಡಿಯೋ​ ಒಂದನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿದ್ದರು. ಈ ವಿಡಿಯೋದಲ್ಲಿ ಅವರು ದುಬೈ ರಸ್ತೆಗಳಲ್ಲಿ ದಿನಸಿ ಸಾಮಗ್ರಿಯನ್ನು ಖರೀದಿಸುವುದರಿಂದ ಹಿಡಿದು ನೆಲದಲ್ಲಿ ಕೂತು ಊಟ ಮಾಡುವುದೂ ಸೆರೆ ಆಗಿದೆ.

    ವಿಡಿಯೋ ಯೂಟ್ಯೂಬ್​ನಲ್ಲಿ ಕಾಣಿಸಿಕೊಂಡ ಕೂಡಲೆ ಅಭಿಮಾನಿಗಳು ಹಾರ್ಟ್ ಇಮೋಜಿಯಿಂದ ಕಮೆಂಟ್ ವಿಭಾಗವನ್ನು ತುಂಬಿಸಿ ಬಿಟ್ಟರು. ಓರ್ವ ಅಭಿಮಾನಿ ‘ಇವರು ತುಂಬಾ ಸರಳ ವ್ಯಕ್ತಿ. ಇವರಿಗೆ ಖಂಡಿತ ಉತ್ತಮ ಭವಿಷ್ಯವಿದೆ. ದೇವರ ಆಶೀರ್ವಾದ ಇವರ ಮೇಲೆ ಸದಾ ಇರಲಿ’ ಎಂದು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts