More

    ಸಂಗೀತ ಅತಿ ಬುದ್ದಿವಂತಿಕೆಗೆ ಮುಖದ ಮೇಲೆ ಬೈದ ವರ್ತೂರ್..!

    ಬಿಗ್​​ಬಾಸ್​ ಮನೆಯಲ್ಲಿ ಈಗಾಗಲೇ ಕಂಟೆಸ್ಟೆಂಟ್​​​​​ಗಳು ಕೊನೆಯ ದಿನ ಅಂಧ್ರೆ ಫಿನಾಲೆ ಟಿಕೆಟ್​​ ಪಡೆದುಕೊಳ್ಳಲು ಹರಸಾಹಸಬ ಪಡುತ್ತಿದ್ದಾರೆ. ಇದೀಗ ಬಿಗ್​ಬಾಸ್​​ ಮನೆಗೆ ಹಳೆಯ ಕಂಟೆಸ್ಟೆಂಟ್​ಗಳೂ ಎಂಖಟ್ರಿ ಕೊಟ್ಟಿದ್ದು, ಅವರ ಮುಂದೆಯೇ ಕೆಲ ಟಾಸ್ಕ್​ಗಳೂ ನಡೆಯುತ್ತಿವೆ.

    ಈಗಷ್ಟೇ ರಿಲೀಸ್​ ಆಗಿರುವ ಬಿಗ್​ಬಾಸ್​ ಪ್ರೋಮೋ ಸಂಚಲನ ಸೃಷ್ಟಿಸಿದ್ದು, ಅದರಲ್ಲಿ ಫಿನಾಲೆ ಹಂತ ತಲುಪೋಕೆ ಸ್ಪರ್ಧಿಗಳಿಗೆ ಬಾಲ್​ ಟಾಸ್ಕ್​​ ಒಂದನ್ನ ನೀಡಲಾಗಿದೆ. ಈ ಟಾಸ್ಕ್​​ ಆಡೋಕೆ ಸಂಗೀತಾ ವಿನಯ್​ ಅವರನ್ನ ಚೂಸ್​ ಮಾಡಿದ್ದಾರೆ. ಅಂತೆಯೇ ವರ್ತೂರ್​ ಸಂತೋಷ್​​ ಕಲೂಡಾ ಇದೇ ಟಾಸ್ಕ್​ನಲ್ಲಿ ಆಟವಾಡಿದ್ದಾರೆ.

    ಟಾಸ್ಕ್​ ಆಡಿದ ವರ್ತೂರ್​​ ಸಂತೋಷ್​ ಮತ್ತು ಸಂಗೀತಾ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ವರ್ತೂರ್​ ಸಂಗೀತಾಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಸಂಗೀತಾ ಯಾರು ಸರಿಯಾಗಿ ಆಟವಾಡುತ್ತಾರೆಯೋ ಅವರನ್ನ ಈ ಟಾಸ್ಕ್​ ಆಡೋಕೆ ಕಳಿಸಿದ್ದೇನೆ ಅದೇ ಕಾರಣಕ್ಕೆ ನಾನು ವಿನಯ್​ ಹೆಸರು ಹೇಳಿದ್ದೇನೆ ಅಂತಾ ಹೇಳೋದನ್ನ ಪ್ರೋಮೋನಲ್ಲಿ ಕಾಣಬಹುದು.

    https://www.facebook.com/watch/?v=363171149998545

    ನಂತರದಲ್ಲಿ ವರ್ತೂರ್​ ಸಂತೋಷ್ ಸಂಗೀತಾ ಮುಂದೆ ಹೋಗಿ ಇದು ತುಮಬಾ ಇರೆಸ್ಪೆಕ್ಟ್​​​ ರೀತಿಯಲ್ಲಿ ಕಾಣಿಸ್ತಾಇದೆ. ನೀವು ಒಬ್ಬರನ್ನ ಬ್ಲೇಮ್​ ಮಾಡೋ ಮುಂಚೆ ನೀವು ಏನು ಅನ್ನೋದನ್ನ ನೋಡಿಕೊಂಡು ಬಿಟ್ರೆ ತುಂಬಾ ಒಳ್ಳೆಯದು ಎಂದಿದ್ದಾರೆ. ಈ ಹೇಳಿಕೆಗೆ ಸಂಗೀತಾ ಗರಂ ಆಗಿದ್ದು, ನೀವು ಇದನ್ನ ಯಾರಿಗೆ ಹೇಳುತ್ತಿದ್ದೀರಾ ಅಂತಾ ಪ್ರಶ್ನಿಸಿದ್ದಾರೆ.

    ಸ್ಪರ್ಧಿಗಳ ನಡುವೆ ಗೆಲ್ಲುವ ಹಟ ಮತ್ತೊಂದು ಹಂತಕ್ಕೆ ತಲುಪಿದ್ದು, ಸದ್ಯ ಮುಂದಿನ ದಿನಗಳಲ್ಲಿ ಕಾಂಪಿಟೇಷನ್​ ಮತ್ತಷ್ಟು ಟಫ್​​ ಆಗುವಂತಹ ಎಲ್ಲಾ ನಿರೀಕ್ಷೆಗಳೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts