More

    ಕರೊನಾ ನಿರ್ವಹಣೆಯಲ್ಲಿ ಭಾರತಕ್ಕಿಂತ ಪಾಕಿಸ್ತಾನ, ಅಫ್ಘಾನಿಸ್ತಾನವೇ ಉತ್ತಮ: ರಾಹುಲ್​ ಗಾಂಧಿ

    ನವದೆಹಲಿ: ಕರೊನಾ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಭಾರತಕ್ಕಿಂತ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವೇ ಕೋವಿಡ್​-19 ಅನ್ನು ಉತ್ತಮವಾಗಿ ನಿಭಾಯಿಸುತ್ತಿವೆ ಎಂದು ಟೀಕಿಸಿದ್ದಾರೆ.

    ಕರೊನಾ ಸಾಂಕ್ರಮಿಕದಿಂದಾಗಿ ಭಾರತದ ಆರ್ಥಿಕತೆ ಕುಸಿದಿದ್ದು, ಈ ವರ್ಷ ಶೇ. 10.3 ರಷ್ಟು ಭಾರಿ ಪ್ರಮಾಣದಲ್ಲಿ ಭಾರತದ ಆರ್ಥಿಕತೆ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ಹೇಳಿದೆ. ಇದರ ಬೆನ್ನಲ್ಲೇ ಐಎಂಎಫ್​ ಅಭಿವೃದ್ಧಿ ದರ ಚಾರ್ಟ್ ಅನ್ನು ಟ್ಯಾಗ್​ ಮಾಡಿ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕರಿದ್ದಾರೆ.

    ರಾಹುಲ್​ ಟ್ವೀಟ್​ ಮಾಡಿರುವ ಚಾರ್ಟ್​ ಪ್ರಕಾರ ಈ ವರ್ಷ ಭಾರತದ ಆರ್ಥಿಕತೆ ಶೇ. 10.3 ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ. ಚೀನಾ, ಭೂತಾನ್​, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಮಯನ್ಮಾರ್​, ನೇಪಾಳ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಆರ್ಥಿಕತೆ ಹೆಚ್ಚು ಸಂಕುಚಿತಗೊಳ್ಳಲಿದೆ.

    ಇದನ್ನೂ ಓದಿ: ಮತಾಂತರಗೊಂಡು ಹೆಣವಾದ ಯುವತಿ! ನ್ಯಾಯಕ್ಕಾಗಿ ಸಿಎಂ ಯೋಗಿ ಮೊರೆ ಹೋಗಿ ಬೆಂಕಿಹಚ್ಚಿಕೊಂಡಳು…

    ಈ ಬಗ್ಗೆ ಬರೆದುಕೊಂಡಿರುವ ರಾಹುಲ್​, ಇದು ಬಿಜೆಪಿ ಸರ್ಕಾರ ಮತ್ತೊಂದು ಸಾಧನೆಯಾಗಿದೆ. ಭಾರತಕ್ಕಿಂತ ಪಾಕಿಸ್ತಾನ ಮತ್ತು ಅಘ್ಘಾನಿಸ್ತಾನವೇ ಕರೊನಾವನ್ನು ಚೆನ್ನಾಗಿ ನಿಭಾಯಿಸಿವೆ ಎಂದಿದ್ದಾರೆ.

    ಇನ್ನು ಭಾರತದ ಆರ್ಥಿಕತೆ ನಿಶ್ಚಲವೇನಲ್ಲ ಎಂದು ಇದೇ ಐಎಂಎಫ್​ ಇತ್ತೀಚಿನ “ವರ್ಲ್ಡ್​ ಎಕನಾಮಿಕ್​ ಔಟ್​ಲುಕ್”​ ವರದಿಯಲ್ಲಿ ಹೇಳಿದೆ. 2021ರ ವೇಳೆಗೆ ಶೇ. 8.8ರಷ್ಟು ಬೆಳವಣಿಗೆಯೊಂದಿಗೆ ಆರ್ಥಿಕತೆ ತನ್ನ ಅಭಿವೃದ್ಧಿ ಹಾದಿಗೆ ಮರಳಲಿದ್ದು, ಚೀನಾ ಯೋಜಿತ ಬೆಳವಣಿಗೆ ದರ 8.2 ರಷ್ಟನ್ನು ಹಿಂದಿಕ್ಕಲಿದೆ ಎಂದು ಐಎಂಎಫ್​ ಹೇಳಿದೆ. (ಏಜೆನ್ಸೀಸ್​)

    ಎಫ್​ಎಒ 75ನೇ ವಾರ್ಷಿಕೋತ್ಸವ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ್ರು ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts