More

    ದೇವರಿಗೂ ನನ್ನ ಹಿಡಿಯಲು ಸಾಧ್ಯವಿಲ್ಲ, ಪೊಲೀಸರಂತೂ ಮರೆತೇ ಬಿಡಿ ಎಂದ ರೌಡಿಶೀಟರ್​ ಸಿಕ್ಕಿಬಿದ್ದಿದ್ದೆ ರೋಚಕ!

    ಮುಂಬೈ: “ದೇವರಿಗೂ ಕೂಡ ನನ್ನನ್ನು ಹಿಡಿಯಲು ಸಾಧ್ಯವಿಲ್ಲ, ಇನ್ನು ಪೊಲೀಸರಂತೂ ಮರೆತೇ ಬಿಡಿ”. ಇದು ರೌಡಿಶೀಟರ್​ ಒಬ್ಬ ಮುಂಬೈ ಪೊಲೀಸರಿಗೆ ಹಾಕಿದ ಓಪನ್​ ಚಾಲೆಂಜ್​. ಆದರೆ, ಇದೀಗ ಕಂಬಿ ಹಿಂದೆ ಬಿದ್ದಿರುವ ರೌಡಿಶೀಟರ್​, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? ಇಲ್ಲಿದೆ ಇಂಟೆರೆಸ್ಟಿಂಗ್​ ಸ್ಟೋರಿ…

    ಪಪ್ಪು ಹರಿಶ್ಚಂದ್ರ ಅಲಿಯಾಸ್​ ಖೊಪ್ಡಿ ಎಂಬಾತನ ವಿರುದ್ಧ ಪೊವೈ, ಸಾಕಿ ನಕ, ಎಂಐಡಿಸಿ ಮತ್ತು ಆರೇ ಸೇರಿದಂತೆ ಮುಂಬೈನ ವಿವಿಧ ಠಾಣೆಗಳಲ್ಲಿ 12ಕ್ಕೂ ಹೆಚ್ಚು ಪ್ರಕರಣಗಳಿವೆ. ಪೊವೈ ಏರಿಯಾ ನಿವಾಸಿಯಾಗಿರುವ ಖೊಪ್ಡಿ, 2013ರಿಂದಲೂ ತಲೆಮರೆಸಿಕೊಂಡಿದ್ದಾನೆ.

    ಇದನ್ನೂ ಓದಿರಿ: ಪತಿಯ ಅತಿಯಾದ ಚಟ, ಕಿರುಕುಳಕ್ಕೆ ಬೇಸತ್ತು ಐಪಿಎಸ್​ ಅಧಿಕಾರಿಯಿಂದ ದೂರು ದಾಖಲು!

    ಹೀಗಿರುವಾಗ ಖೊಪ್ಡಿ ಒಮ್ಮೆ ತನ್ನ ಮಾಹಿತಿದಾರನ ಮೂಲಕ ಸವಾಲನ್ನು ಒಳಗೊಂಡ ಒಂದು ಸಂದೇಶವನ್ನು ಕಳುಹಿಸುತ್ತಾನೆ. ಆ ಸಂದೇಶ ಹೀಗಿರುತ್ತದೆ. “ದೇವರಿಗೂ ಕೂಡ ನನ್ನನ್ನು ಹಿಡಿಯಲು ಸಾಧ್ಯವಿಲ್ಲ, ಇನ್ನು ಪೊಲೀಸರಂತೂ ಮರೆತೇ ಬಿಡಿ” ಎಂದು ಓಪನ್​ ಚಾಲೆಂಜ್​ ಹಾಕಿರುತ್ತಾನೆ.

    ಇರಲಾರದವು ಏನೋ ಹೇಳಿ ಇರುವೆ ಬಿಟ್ಟುಕೊಂಡ ಎಂಬಂತೆ ಖೊಪ್ಡಿಯ ಚಾಲೆಂಜ್​ ಅನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಆತನನ್ನು ಹಿಡಿದಿದ್ದಾರೆ. ಖೊಪ್ಡಿ ಇರುವ ಸುಳಿವು ಸಿಕ್ಕಿತು ತಕ್ಷಣ ಸ್ಥಳಕ್ಕೆ ಹೋಗಿ ಆತನನ್ನು ಬಂಧಿಸಿದೆವು ಎಂದು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಉಲ್ಹಾಸ್​ ಖೊಲಮ್​ ಹೇಳಿದ್ದಾರೆ. ​

    ಇದನ್ನೂ ಓದಿರಿ: ಮದ್ವೆಯಾದ 2 ತಿಂಗಳಲ್ಲಿ ಗಂಡನಿಂದಲೇ ಬಿ.ಟೆಕ್​ ವಿದ್ಯಾರ್ಥಿನಿ ಹತ್ಯೆ: ಕೊಲೆಗೆ ಕಾರಣ ಕೇಳಿ ಬೆಚ್ಚಿಬಿದ್ದ ಪಾಲಕರು!

    ಖೊಪ್ಡಿ, ರಾಯಲ್​ ಪಾಮ್​ ಏರಿಯಾದಲ್ಲಿ ದರೋಡೆ ಮಾಡಲು ಪ್ಲಾನ್​ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಯಿತು. ಹೀಗಾಗಿ ಪೊಲೀಸ್​ ಸಮವಸ್ತ್ರದಲ್ಲಿ ತೆರಳದೇ ಎಲ್ಲರೂ ಸಿವಿಲ್​ ಡ್ರೆಸ್​ನಲ್ಲಿ ಮಫ್ತಿಯಲ್ಲಿ ಇದ್ದೆವು. ಪ್ಲಾನ್​ನಂತೆ ಖೊಪ್ಡಿ ದರೋಡೆಗೆಂದು ಬಂದಾಗ ಶುಕ್ರವಾರ ಆತನನ್ನು ಬಂಧಿಸಿದೆವು ಎಂದು ಉಲ್ಹಾಸ್​ ತಿಳಿಸಿದ್ದಾರೆ. ಅಲ್ಲದೆ, ಖೊಪ್ಡಿ ಬಳಿಯಿದ್ದ ಒಂದು ದೇಶಿ ನಿರ್ಮಿತ ಪಿಸ್ತೂಲ್​ ಮತ್ತು ಎರಡು ಜೀವಂತ ಸಿಡಿಮದ್ದುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು.

    ಸದ್ಯ ಪೊಲೀಸ್​ ಬಂಧನದಲ್ಲಿರುವ ಖೊಪ್ಡಿ ವಿರುದ್ಧ ಭಾರತೀಯ ದಂಡಸಂಹಿತೆ (ಐಪಿಸಿ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಖೊಪ್ಡಿ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿದ್ದು, ಹಸ್ತಾಂತರ ಮಾಡುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಲವ್ವರ್​ ಜತೆ ರಾತ್ರಿ ಹೋಟೆಲ್​ನಲ್ಲಿದ್ದ ಯುವತಿ ಬೆಳಗ್ಗೆ ದುರಂತ ಸಾವು: ಕೊನೆಗೂ ತಪ್ಪೊಪ್ಪಿಕೊಂಡ ಪ್ರಿಯಕರ!

    ಅವಿರೋಧ ಆಯ್ಕೆಯಾದ್ರು ನಿತ್ಯ ತರಕಾರಿ ಸೊಪ್ಪು ಮಾರುವ ಗ್ರಾ.ಪಂ ಅಧ್ಯಕ್ಷೆ: ಆಕೆ ಮಾತು ಕೇಳಿದ್ರೆ ಹೆಮ್ಮೆ ಪಡ್ತೀರಾ!

    ₹5 ಕೋಟಿ ಕೊಟ್ರೆ ಪ್ರಧಾನಿ ಮೋದಿಯ ಮರ್ಡರ್​ ಮಾಡ್ತೇನೆ ಎಂದು ಪೋಸ್ಟ್​- ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts