ಪ್ರಶ್ನೆಗಾಗಿ ನಗದು ಪ್ರಕರಣ: ಲೋಕಸಭೆಯಿಂದ ಮಹುವಾ ಮೊಯಿತ್ರಾ ಉಚ್ಚಾಟನೆ?

Mahua Moitra
Published on

ನವದೆಹಲಿ: ಉದ್ಯಮಿಯ ಪರವಾಗಿ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ನಗದು ಪಡೆದ ಆರೋಪದಲ್ಲಿ ಸಿಲುಕಿಕೊಂಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ ಎದುರಾಗಿದ್ದು, ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ.

ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಲೋಕಸಭೆ ನೈತಿಕ ಸಮಿತಿಯು ಮಹುವಾ ಅವರನ್ನು ಉಚ್ಚಾಟಿಸಲು ಶಿಫಾರಸು ಮಾಡುವ ವರದಿಯನ್ನು ಅಂಗೀಕರಿಸಿದೆ. ಸಮಿತಿಯ ಆರು ಸದಸ್ಯರು ವರದಿ ಅಂಗೀಕರಿಸುವುದನ್ನು ಬೆಂಬಲಿಸಿದ್ದು, ನಾಲ್ವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಇಂದು ನಡೆದ ಸಭೆ ಬಳಿಕ ಸೋಂಕರ್ ಸುದ್ದಿಗಾರರಿಗೆ ತಿಳಿಸಿದರು.

ಏನಿದು ಪ್ರಕರಣ?: ಉದ್ಯಮಿ ಗೌತಮ್ ಅದಾನಿಯನ್ನು ಗುರಿಯಾಗಿಸಿ ಉದ್ಯಮಿ ದರ್ಶನ್ ಹೀರಾನಂದಾನಿ ಪರವಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹಣ ಪಡೆದಿದ್ದರು ಎಂಬ ಆರೋಪ ಅವರ ವಿರುದ್ಧ ಕೇಳಿಬಂದಿದೆ. ಅಲ್ಲದೆ ಆಕೆ ಕೂಡ ದರ್ಶನ್ ಹೀರಾನಂದಾನಿ ತಮ್ಮ ಫ್ರೆಂಡ್ ಎಂದು ಹೇಳಿಕೊಂಡಿದ್ದು, ಅವರೊಂದಿಗೆ ಸಂಸದೀಯ ಲಾಗಿನ್​ ವಿವರ ಹಂಚಿಕೊಂಡಿದ್ದಾಗಿಯೂ ಒಪ್ಪಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net