More

    ಅಗತ್ಯ ವಸ್ತುಗಳನ್ನು ಮನೆಗೆ ಬಾಗಿಲಿಗೆ ತಲುಪಿಸಲು ಸಿಎಂ ಯೋಗಿ ಆದಿತ್ಯನಾಥ್​ ನಿರ್ಧಾರ: ಮಾರುಕಟ್ಟೆಗಳಿಗೆ ತೆರಳದಂತೆ ಮನವಿ

    ಲಖನೌ: ಅಗತ್ಯವಾದ ವಸ್ತುಗಳನ್ನು ಖರೀದಿ ಮಾಡಲು ಮಾರುಕಟ್ಟೆಗಳಿಗೆ ತೆರಳದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ನಿನ್ನೆ ರಾತ್ರಿ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಮುಂದಿನ 21 ದಿನಗಳ ಕಾಲ ಇಡೀ ದೇಶವೇ ಲಾಕ್​ಡೌನ್​ ಆಗಲಿದೆ. ಕರೊನಾ ವೈರಸ್​ ಸೋಂಕು ತಡೆಗಟ್ಟಲು ಇರುವುದೊಂದೇ ಮಾರ್ಗ ಎಂದು ಹೇಳಿದ್ದರು.

    ಆದರೆ, ಸಾರ್ವಜನಿಕರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಗತ್ಯ ವಸ್ತುಗಳಿಗೆ ಮಾರುಕಟ್ಟೆಗಳಿಗೆ ಗುಂಪಾಗಿ ಬರುತ್ತಿರುವುದರಿಂದ ಸಿಎಂ ಯೋಗಿ ರಾಜ್ಯದ ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಮಾರುಕಟ್ಟೆಗಳಿಗೆ ಹೋಗಬೇಡಿ ಇಂದಿನಿಂದಲೇ ಅಗತ್ಯವಾದ ವಸ್ತುಗಳನ್ನು ನಿಮ್ಮ ಮನೆ ಬಾಗಿಲುಗಳಿಗೆ ಸಾಗಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ವಸ್ತುಗಳನ್ನು ಸಾಗಿಸಲು 1000 ವಾಹನಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ

    ನಿಮ್ಮ ಹಾಗೂ ನಿಮ್ಮ ಕುಟುಂಬದ ಸುರಕ್ಷತೆಗಾಗಿ ಮನೆಯಿಂದ ಹೊರಗೆ ಕಾಲಿಡಬೇಡಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮನೆಯಲ್ಲೇ ಉಳಿಯಿರಿ ಎಂದು ಕರೆ ನೀಡಿದ್ದಾರೆ. (ಏಜೆನ್ಸೀಸ್​)

    ಲಾಕ್​ಡೌನ್​ ಕುರಿತ ಯುವಕನ ಪ್ರಶ್ನೆಗೆ ದೆಹಲಿ ಪೊಲೀಸರು ನೀಡಿದ ಉತ್ತರ ಕಂಡು ನೆಟ್ಟಿಗರು ಫುಲ್​ ಖುಷ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts