More

    ದೇವರೇ ಕಾಪಾಡಬೇಕು; ಕರೊನಾ ನಿವಾರಣೆ ಮಾನವ ಯತ್ನ ಮೀರಿದ್ದು ಎಂದ ಸಿಎಂ ಉದ್ಧವ್​

    ಮುಂಬೈ: ದೇಶದಲ್ಲಿ ಅತಿ ಹೆಚ್ಚು ಕರೊನಾ ಸೋಂಕಿನ ಪ್ರಕರರಣಗಳಿರೋದು ಮಹಾರಾಷ್ಟ್ರದಲ್ಲಿ. ಇದನ್ನು ಹೇಗೆ ನಿಯಂತ್ರಿಸುವುದು ಎಂಬುದು ಸ್ವತಃ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೂ ತಿಳಿಯುತ್ತಿಲ್ಲ.

    ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಉದ್ಧವ್​ ಠಾಕ್ರೆ ಪಂಢರಾಪುರದ ಆಷಾಢ ಏಕಾದಶಿ ನಿಮಿತ್ತ ಶ್ರೀ ವಿಠ್ಠಲನ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

    ಇದನ್ನೂ ಓದಿ: ಒಂದೂವರೆ ದಿನದಲ್ಲಿ ಒಂದೂವರೆ ಕೋಟಿ ಜನರು ಫಿದಾ ಆದ್ರು; ಜಗದಗಲ ಬೆಳಗಿದ ಬೆಂಗಳೂರಿನ ಕೀರ್ತಿ

    ಮಹಾರಾಷ್ಟ್ರ ಹಾಗೂ ಇಡೀ ಜಗತ್ತನ್ನು ಕರೊನಾ ಸಂಕಷ್ಟದಿಂದ ಕಾಪಾಡುವಂತೆ ಸಿಎಂ ಪ್ರಾರ್ಥಿಸಿದ್ದಾರೆ. ನಮ್ಮೆಲ್ಲರ ಕೈಗಳನ್ನು ಕಟ್ಟಿ ಹಾಕದಂತಾಗಿದೆ. ನಮ್ಮ ಬಳಿ ಔಷಧ ಅಥವಾ ಇನ್ನಾವುದೇ ಸಾಧನವಿಲ್ಲ. ಹೀಗಾಗಿ ನೀನೇ ಚಮತ್ಕಾರ ತೋರಿಸಬೇಕಿದೆ ಎಂದು ವಿಠ್ಠಲನಿಗೆ ಬಿನ್ನವಿಸಿದ್ದಾರೆ.

    ಮಹಾರಾಷ್ಟ್ರದ ಸಿಎಂ ಹಾಗೂ ಅವರ ಪತ್ನಿ ಪಂಢರಾಪುರದ ವಿಠ್ಠಲನ ಸನ್ನಿಧಾನದಲ್ಲಿ ಆಷಾಢ ಏಕಾದಶಿಯ ಪೂಜೆ ನೆರವೇರಿಸುವುದು ಸಂಪ್ರದಾಯವಾಗಿದೆ. ಅಂತೆಯೇ ಉದ್ಧವ್​ ಜತೆಗೆ ಪತ್ನಿ ರಶ್ಮಿ, ಪುತ್ರ ಹಾಗೂ ಪ್ರವಾಸೋದ್ಯಮ ಸಚಿವ ಆದಿತ್ಯ ಕೂಡ ಜತೆಗಿದ್ದರು.

    ಇದನ್ನೂ ಓದಿ: ಬೆಳಗ್ಗೆ ಸೆಕ್ಷನ್​ 144, ರಾತ್ರಿ ಕರ್ಫ್ಯೂ; ಹೊರಗೆ ಬಂದ್ರೆ ಕರೊನಾನೂ ಬಿಡಲ್ಲ, ಪೊಲೀಸರು ಸುಮ್ಮನಿರಲ್ಲ 

    ಅಷಾಢ ಏಕಾದಶಿಗೆಂದೇ ಲಕ್ಷಾಂತರ ಭಕ್ತರು ಕಾಲ್ನಡಿಗೆ ಮೂಲಕ ಪಂಡರಾಪುರಕ್ಕೆ ಆಗಮಿಸುತ್ತಾರೆ. ಆದರೆ, ಕೋವಿಡ್​ ಕಾರಣದಿಂದಾಗಿ ಈ ಬಾರಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.

    ಅಮೆಜಾನ್​ ಹಿಂದಿಕ್ಕಿ ಬಿಗ್​ ಬಜಾರ್​ ತೆಕ್ಕೆಗೆ ಪಡೆದ ಅಂಬಾನಿ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts