More

    ಮಾನವನ ಹೆಬ್ಬೆರಳು ಅಂದುಕೊಂಡು ಪೊಲೀಸರನ್ನು ತಕ್ಷಣ ಕರೆಸಿದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​! ​

    ಲಂಡನ್​: ಸಾಕು ನಾಯಿಯ ಜತೆ ವಾಕಿಂಗ್​ ಹೊರಟ ಇಂಗ್ಲೆಂಡ್​ನ ಮಹಿಳೆಯೊಬ್ಬಳು ಕೆಸರು ಭೂಮಿಯಲ್ಲಿ ವಿಚಿತ್ರ ವಸ್ತುವೊಂದನ್ನು ನೋಡಿ ಮಾನವನ ಹೆಬ್ಬೆರಳು ಅಂದುಕೊಂಡು ಭಯದಿಂದಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾಳೆ. ಆದರೆ, ಪೊಲೀಸರು ಬಂದು ಪರಿಶೀಲಿಸಿದಾಗ ಅದರ ನಿಜಾಂಶ ತಿಳಿದು ದಂಗಾಗುವುದರ ಜತೆಗೆ ಗಹಗಹಿಸಿಯೂ ನಗುತ್ತಾರೆ.

    ಹಾಗದರೆ ಮಹಿಳೆ ನೋಡಿದ ವಸ್ತುವಾದರೂ ಯಾವುದು ಎಂದು ತಿಳಿಯುವ ಕುತೂಹಲವಿದ್ದರೆ, ಮುಂದೆ ಓದಿ. ಮೊದಲಿಗೆ ಮಹಿಳೆಯ ಪರಿಚಯ ಮಾಡಿಕೊಳ್ಳೋಣ. ಮಹಿಳೆಯ ಹೆಸರು ಕೇಟೀ ವಿಲ್ಕಿನ್ಸನ್. ವಯಸ್ಸು 26. ಇಂಗ್ಲೆಂಡ್​ನ ಗೇಟ್​ಶೀಡ್​ನ ವಿನ್​ಲ್ಯಾಟನ್​ ನಿವಾಸಿ.

    ಎಂದಿನಂತೆ ತನ್ನ ನಾಯಿಯನ್ನು ವಿಲ್ಕಿನ್ಸನ್ ವಾಕಿಂಗ್​ಗೆ ಕರೆದೊಯ್ದಿದ್ದರು. ಆದರೆ, ತುಂಬಾ ಮಳೆ ಬಿದ್ದಿದ್ದರಿಂದ ತಾವು ಹೋಗಿದ್ದ ಪ್ರದೇಶದ ಕೆಸರುಮಯವಾಗಿತ್ತು. ಯಾವುದೇ ಕಾರಣ ಕೆಸರಿಗೆ ಕಾಲಿಟ್ಟು ಜಾರಿ ಬೀಳುಬಾರದು ಎಂದು ಕೆಸರಿನ ಮೇಲೆಯೇ ತನ್ನ ಸೂಕ್ಷ್ಮ ದೃಷ್ಟಿ ಹಾಯಿಸಿ ಹಾದುಹೋಗುವಾಗ ಆಕೆಯ ಕಣ್ಣಿಗೆ ವಸ್ತುವೊಂದು ಕಾಣುತ್ತದೆ.

    ಇದನ್ನೂ ಓದಿರಿ: ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

    ಮಾನವನ ಹೆಬ್ಬೆರಳು ಅಂದುಕೊಂಡು ಪೊಲೀಸರನ್ನು ತಕ್ಷಣ ಕರೆಸಿದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​! ​

    ತಕ್ಷಣ ಅದರ ಫೋಟೋವನ್ನು ತೆಗೆದು ಏನಿರಬಹುದು ಎಂದು ನೆಟ್ಟಿಗರು ಅಭಿಪ್ರಾಯ ತಿಳಿದುಕೊಳ್ಳಲು ವಿಲ್ಕಿನ್ಸನ್ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಾರೆ. ಅಲ್ಲದೆ, ಸ್ನೇಹಿತರಿಗೆ ಕಳುಹಿಸುತ್ತಾಳೆ. ತಕ್ಷಣ ಪ್ರತಿಕ್ರಿಯೆ ನೀಡುವ ನೆಟ್ಟಿಗರು ನಿಗೂಢ ವಸ್ತು ನೋಡಲು ಹೆಬ್ಬರಳಿನಂತಿದೆ ಎಂದು ಕಾಮೆಂಟ್​ ಮಾಡುತ್ತಾರೆ. ಇದಾದ ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಲು ವಿಲ್ಕಿನ್ಸನ್ ಮುಂದಾಗುತ್ತಾರೆ.

    ಇದನ್ನೂ ಓದಿರಿ: ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

    ಬಳಿಕ 101 ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಪೊಲೀಸ್​ ಕಾರು ವಿಲ್ಕಿನ್ಸನ್ ಮನೆ ಮುಂದೆ ನಿಲ್ಲುತ್ತದೆ. ಬಳಿಕ ಆಕೆ ಪೊಲೀಸ್​ ಅಧಿಕಾರಿಗಳನ್ನು ವಿಚಿತ್ರ ವಸ್ತು ನೋಡಿದ ಜಾಗಕ್ಕೆ ಕರೆದೊಯ್ಯುತ್ತಾಳೆ. ತಕ್ಷಣ ಪೊಲೀಸರು ತನಿಖೆಯನ್ನು ಆರಂಭಿಸುತ್ತಾರೆ. ಈ ವೇಳೆ ಇನ್ನಷ್ಟು ಪೊಲೀಸರು, ಯೋಧರು ಮತ್ತು ಪತ್ತೆದಾರರು ಸ್ಥಳಕ್ಕೆ ಆಗಮಿಸುತ್ತಾರೆ. ತಾನು ತೆಗೆದಂತಹ ಫೋಟೋವನ್ನು ಮಹಿಳೆ ಎಲ್ಲರಿಗೂ ತೋರಿಸುತ್ತಾ ಘಟನೆಯನ್ನು ವಿವರಿಸುತ್ತಾಳೆ.

    ನೋಡಲು ಹೆಬ್ಬರಳಿನಂತಿದೆ ಎಂದು ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಆದರೆ, ಸಾಕಷ್ಟು ಹುಡುಕಾಡಿದಾಗ ಏನು ಪತ್ತೆಯಾಗುವುದಿಲ್ಲ. ಕೊನೆಗೆ ಸ್ನಿಫರ್ ನಾಯಿಗಳನ್ನು ಸ್ಥಳಕ್ಕೆ ಕರೆಯಿಸಿದಾಗ ವಸ್ತುವಿನ ಅಸಲಿಯತ್ತು ತಿಳಿದು ಎಲ್ಲರು ಬೆಕ್ಕಸ ಬೆರಗಾಗುತ್ತಾರೆ. ಅಂದಹಾಗೆ ಅದು ಮಾನವನ ಹೆಬ್ಬೆರಳಲ್ಲ, ಬದಲಾಗಿ “ಆಲೂಗೆಡ್ಡೆ” ಎಂಬುದು ಗೊತ್ತಾಗುತ್ತದೆ.

    ಇದನ್ನೂ ಓದಿರಿ: ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

    ಮಾನವನ ಹೆಬ್ಬೆರಳು ಅಂದುಕೊಂಡು ಪೊಲೀಸರನ್ನು ತಕ್ಷಣ ಕರೆಸಿದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​! ​

    ಈ ಬಗ್ಗೆ ಮಾತನಾಡಿರುವ ವಿಲ್ಕಿನ್ಸನ್, ಖಂಡಿತವಾಗಿಯೂ ಅದು ಹೆಬ್ಬೆರಳು ಆಗಿರಬಾರದೆಂದು ಭಾವಿಸಿದೆವು. ನಿಜವಾಗಿಯೂ ವಿಲಕ್ಷಣವಾಗಿ ಕಾಣುವ ಸಸ್ಯ ಅಥವಾ ಏನಾದರೂ ಆಗಿರಬೇಕು ಅಂದುಕೊಂದು ಮನೆಗೆ ಹಿಂತಿರುಗಿದೆ. ಆದರೆ. ಆ ಬಗೆಗಿನ ನನ್ನ ಯೋಚನೆ ನಿಲ್ಲಲಿಲ್ಲ. ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು. ಬೇರೊಬ್ಬರ ಕಾಲಿನಿಂದ ಕತ್ತರಿಸಿದ ಹೆಬ್ಬೆರಳು ಅಥವಾ ದೇಹಕ್ಕೆ ಅಂಟಿಕೊಂಡಿರಬಹುದು ಎಂದು ಯೋಚಿಸುತ್ತಿದ್ದೆ. ಮೊದಲೇ ತೆಗೆದಿದ್ದ ಫೋಟೋವನ್ನು ನನ್ನ ಎಲ್ಲ ಸ್ನೇಹಿತರಿಗೆ ಕಳುಹಿಸಿದೆ ಮತ್ತು ಜಾಲತಾಣದಲ್ಲಿಯೂ ಪೋಸ್ಟ್​ ಮಾಡಿದೆ. ಎಲ್ಲರೂ ಸಹ ಅದು ಹೆಬ್ಬರಳು ಇರಬಹುದು ಎಂದರು. ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಕರೆ ಮಾಡಿ ತಿಳಿಸಿದೆ. ಕೊನೆಗೂ ತೆಗೆದು ನೋಡುವಷ್ಟರಲ್ಲಿ ಅದು ಆಲೂಗೆಡೆಯಾಗಿತ್ತು ಎಂದು ವಿಲ್ಕಿನ್ಸನ್ ತಿಳಿಸಿದ್ದಾರೆ.

    ಇದನ್ನೂ ಓದಿರಿ: ಪಕ್ಕದ ಮನೆಯವನೊಂದಿಗೇ ಮಹಿಳೆಯ ಲವ್ವಿ ಡವ್ವಿ! ಪ್ರಿಯಕರನ ಕಾಟ ಹೆಚ್ಚಾದ ತಕ್ಷಣ ದರೋಡೆಯ ನಾಟಕ

    ಆಲೂಗೆಡ್ಡೆಯಿಂದ ಎಂದು ತಿಳಿದ ಮೇಲೆ ನಾನು ಪೊಲೀಸ್​ ಅಧಿಕಾರಿಗಳ ಕ್ಷಮೆಯಾಚಿಸಿದೆ. ಸಮಯ ಹಾಳು ಮಾಡಿದ್ದಕ್ಕೆ ಕ್ಷಮಿಸಿ ಎಂದು ಪದೇಪದೆ ಕೇಳಿದೆ. ನೀವು ಸರಿಯಾದುದ್ದನ್ನೇ ಮಾಡಿದ್ದೀರಿ ಎಂದು ಪೊಲೀಸ್​ ಅಧಿಕಾರಿಗಳು ನನ್ನನ್ನು ಸಮಾಧಾನ ಮಾಡಿದರು ಎಂದು ವಿಲ್ಕಿನ್ಸನ್ ತಿಳಿಸಿದ್ದು, ಆಲೂಗೆಡ್ಡೆ ಅಲ್ಲಿಗೆ ಹೇಗೆ ಬಂದಿರಬಹುದು ಎಂದು ನಮಗೆ ಅಂದಾಜಿಸಲು ಆಗಲಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಹಕ್ಕಿ ಜ್ವರದ ಎಫೆಕ್ಟ್​ ಚಿಕನ್​ ಬೆಲೆಯಲ್ಲಿ ಕುಸಿತ: ಬಾಯ್ಲರ್​ ಕೋಳಿ ಕೆಜಿಗೆ 15 ರೂ.!

    ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!

    ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts