More

    ಕಪ್ಪು ಆಲೂಗಡ್ಡೆ ಬಗ್ಗೆ ಗೊತ್ತಿದೆಯಾ? ಇದರ ಬೆಲೆ ಕೆ.ಜಿ.ಗೆ 500 ರೂ.! ಇಲ್ಲಿದೆ ಸಂಪೂರ್ಣ ಮಾಹಿತಿ…

    ಬಿಹಾರ: ರೈತರೊಬ್ಬರು ವಿನೂತನವಾಗಿ ಯೋಚಿಸಿ ಕಪ್ಪು ಬಣ್ಣದ ಆಲೂಗಡ್ಡೆ ಬೆಳೆದು ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ. ಆಶಿಶ್ ಸಿಂಗ್ ಎಂಬ ರೈತರೊಬ್ಬರು ಬೆಳೆದಿರುವ ಕಪ್ಪು ಬಣ್ಣದ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.

    ಯೂಟ್ಯೂಬ್ ನೋಡುವ ಹವ್ಯಾಸದಲ್ಲಿ ಆಶಿಶ್ ಸಿಂಗ್​ಗೆ ಕಪ್ಪು ಆಲೂಗಡ್ಡೆ ಕೃಷಿಯ ಬಗ್ಗೆ ಗೊತ್ತಾಗಿದೆ, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ, ವಿನೂತನವಾಗಿ ಏನಾದರು ಕೃಷಿ ಮಾಡಬೇಕೆಂದು ಬಿಹಾರದ ಟಿಕಾರಿ ಬ್ಲಾಕ್‌ನ ಗುಲ್ರಿಯಾಚಕ್ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಕಪ್ಪು ಆಲೂಗಡ್ಡೆ ಕೃಷಿ ಮಾಡಿದ್ದಾರೆ.

    ಇದನ್ನೂ ಓದಿ: ಬಾಗಲಕೋಟೆ | ಸಾಲದ ಹಣ ಹಿಂತಿರುಗಿಸದೆ ಸತಾಯಿಸಿದ ಸ್ನೇಹಿತರು; ಮನನೊಂದು ವಿಷ ಸೇವಿಸಿದ ಪಶುವೈದ್ಯ

    ಸಾಮಾನ್ಯವಾಗಿ, ಈ ಕಪ್ಪು ಆಲೂಗೆಡ್ಡೆ ಬೆಳೆಯನ್ನು ಅಮೆರಿಕದ ಆಂಡಿಸ್ ಪ್ರದೇಶದಲ್ಲಿ ಬೆಳೆಸಲಾಗುತ್ತದೆ. ಇದನ್ನು ಅರಿತುಕೊಂಡು ರೈತ ಆಶಿಶ್ ಸಿಂಗ್ ಅಮೆರಿಕದಿಂದ ಕಪ್ಪು ಆಲೂಗಡ್ಡೆ ಬೀಜಗಳನ್ನು ತರಿಸಿದ್ದಾರೆ. ಒಂದು ಕೆ.ಜಿ. ಬೀಜಕ್ಕೆ ಬರೋಬ್ಬರಿ 1500 ರೂ. ನೀಡಿ 14 ಕೆ.ಜಿ ಬೀಜಗಳನ್ನು ಖರೀದಿಸಿದ್ದಾರೆ.

    ಬೀಜ ಬಿತ್ತಿದ 120 ದಿನಗಳ ಅಂತರದಲ್ಲಿ, ಮಾರ್ಚ್ ಆರಂಭದಲ್ಲಿ ಕಪ್ಪು ಬಣ್ಣದ ಆಲೂಗಡ್ಡೆ ಮೊದಲು ಫಸಲು ಬಂದಿದ್ದು, ಆಶಿಶ್ ಸಿಂಗ್ ಪ್ರಯತ್ನ ಯಶಸ್ವಿಯಾಗಿದೆ. 200 ಕೆ.ಜಿ. ಫಸಲಿನ ನಿರೀಕ್ಷೆಯಲ್ಲಿ ಆಶಿಶ್​ಗೆ ನಿರಾಶೆಯಾಗಿದ್ದು, ಹವಾಮಾನ ವೈಪರೀತ್ಯದಿಂದ 120 ಕೆ.ಜಿ ಕಪ್ಪು ಆಲೂಗಡ್ಡೆ ಫಸಲು ಲಭಿಸಿದೆ.

    ಇದನ್ನೂ ಓದಿ: ಮದುವೆಯಾದ ಮೂರೇ ದಿನಕ್ಕೆ ಹತ್ಯೆಗೀಡಾದ ಯುವತಿ; ಅತ್ತೆ-ಮಾವನ ಮೇಲೆ ಅನುಮಾನ!

    ಆಶಿಶ್ ಸಿಂಗ್ ಕಪ್ಪು ಆಲೂಗೆಡ್ಡೆಯನ್ನು ಕೆ.ಜಿ.ಗೆ 300-500 ರೂ.ವರೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಸದ್ಯ ಅನೇಕ ರೈತರು ಆಶಿಶ್ ಸಿಂಗ್ ಪ್ರಯತ್ನಕ್ಕೆ ಕುತೂಹಲಿಗರಾದಗಿದ್ದು, ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಖ್ಯೆಯಲ್ಲಿ ರೈತರು ಕಪ್ಪು ಬಣ್ಣದ ಆಲೂಗಡ್ಡೆ ಕೃಷಿ ಮಾಡಿದರೆ ಅಚ್ಚರಿ ಪಡಬೇಕಿಲ್ಲ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts