More

    ಬೆಳೆಗಳಿಗೆ ನೀರು ಹಾಯಿಸಬೇಡಿ

    ಆಲೂರು: ಮಳೆ ಕೊರತೆಯಿಂದ ತಾಲೂಕಿನ ಬಹುತೇಕ ಕೆರೆಕಟ್ಟೆಗಳು ಒಣಗಿದ್ದು ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್ ಮನವಿ ಮಾಡಿದರು.

    ತಾಲೂಕಿನ ಹುಣಸುವಳ್ಳಿ ಗ್ರಾಮದ ಬಳಿ ಹಾದು ಹೋಗಿರುವ ಯಗಚಿ ನದಿಗೆ ನಿರ್ಮಿಸಿರುವ ಚೆಕ್ ಡ್ಯಾಮ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಕಸಬಾ ಪಟ್ಟಣ ಪಂಚಾಯಿತಿಗೆ ಒಳಪಡುವ ಗ್ರಾಮಗಳು ಹಾಗೂ ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸಲು ಯಗಚಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಚೆಕ್ ಡ್ಯಾಂ ಅನ್ನು ಅವಲಂಬಿಸಲಾಗಿದೆ. ಆಸುಪಾಸಿನಲ್ಲಿ ವ್ಯವಸಾಯ ಮಾಡಿರುವ ರೈತರು ಚೆಕ್ ಡ್ಯಾಂನಿಂದ ಪಂಪ್‌ಸೆಟ್ ಮೂಲಕ ನೀರು ಪಡೆದುಕೊಳ್ಳುತ್ತಿದ್ದಾರೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವ ಸಲುವಾಗಿ ಸದ್ಯದ ಮಟ್ಟಿಗೆ ಬೆಳೆಗಳಿಗೆ ನೀರು ಹಾಯಿಸಬಾರದು ಎಂದು ಮನವಿ ಮಾಡಿದರು.

    ಮುಖ್ಯ ಇಂಜಿನಿಯರ್ ಕವಿತಾ ಮಾತನಾಡಿ, ಯಗಚಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಪರಿಣಾಮ ಕುಡಿಯುವ ನೀರಿಗೆ ದಿನೇ ದಿನೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ರೈತರು ಸಹಕರಿಸಬೇಕು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 6,500 ಜನಸಂಖ್ಯೆ ಇದ್ದು, ಪ್ರತಿದಿನ ಸುಮಾರು 40 ಲಕ್ಷ ಲೀ. ಕುಡಿಯಲು ನೀರು ಬೇಕು. ಮರಸು, ಹಳೆ ಆಲೂರು ಗ್ರಾಮಗಳಿಗೆ ಕೊಳವೆ ಬಾವಿ ನೀರನ್ನು ಬಳಸಲಾಗುತ್ತಿದೆ. ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನೀರಿನ ಮಿತ ಬಳಕೆ ಮಾಡಬೇಕು ಎಂದು ಹೇಳಿದರು. ಪಟ್ಟಣ ಪಂಚಾಯಿತಿ ವಾಟರ್ ಮ್ಯಾನ್ ಹಾಗೂ ಸಿಬ್ಬಂದಿ ಇದ್ದರು.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts